ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಕೈ ಬಲಪಡಿಸುವುದೇ ಮುಖ್ಯ ಧ್ಯೇಯ ನ.7ರಂದು ದೇವನಹಳ್ಳಿ ಪಟ್ಟಣಕ್ಕೆ ಎಚ್.ಡಿ.ಕುಮಾರಸ್ವಾಮಿ ಆಗಮನ ಪೂರ್ವಭಾವಿ ಸಭೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸುವುದರ ಮೂಲಕ 2023ಕ್ಕೆ ಕುಮಾರಣ್ಣನವರನ್ನು ಮುಖ್ಯಮಂತ್ರಿಯನ್ನಾಗಿಸುವ ಧ್ಯೇಯವನ್ನು ಹೊಂದಲಾಗಿದೆ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ತಾಲೂಕು ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ನಂತರ ಅವರು ಮಾತನಾಡಿದರು. ನ.7ರಂದು ಭಾನುವಾರ ನಡೆಯಲಿರುವ ಜೆಡಿಎಸ್ ಭವನದ ಎರಡನೇ ಮಹಡಿ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಆಗಮಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಜತೆಗೆ ಪಿಎಲ್‌ಡಿ ಬ್ಯಾಂಕ್‌ನ ವಾಣಿಜ್ಯ ಕಟ್ಟಡದ ಉದ್ಘಾಟನೆ ಮಾಡಲಾಗಿದ್ದಾರೆ. ಜತೆಗೆ ಕಾರ್ಯಕರ್ತರ ಸಮಾವೇಶವನ್ನು ಹಳೇ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕರ್ತರು ಮತ್ತು ಮುಖಂಡರು ಒಕ್ಕೂರಲಿನಿಂದ ಹೆಚ್ಚಿನ ಜನಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

CHETAN KENDULI

ಸಂತಾಪಸೂಚನೆ: ಬಂಗಾರ ರತ್ನ ಹಾಗೂ ಕನ್ನಡದ ಮೇರು ನಟ ಸಾರ್ವಭೌಮ ರಾಜ್‌ಕುಮಾರ್ ಅವರ ಕೊನೆಯ ಕುಡಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ರಾಷ್ಟ್ರ ಮತ್ತು ಇಡೀ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ. ಜತೆಗೆ ಲೋಕಾಯುಕ್ತರಾಗಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನರಾಗಿದ್ದ ನಿವೃತ್ತ ಮಾಜಿ ಲೋಕಾಯುಕ್ತ ನ್ಯಾ.ವೆಂಕಟಚಲಯ್ಯ ಅವರ ಅಕಾಲಿಕ ನಿಧನದಿಂದ ಹೆಚ್ಚು ನೋವನ್ನುಂಟು ಮಾಡಿದೆ. ಇವರಿಗೆ ಭಗವಂತ ಚಿರಶಾಂತಿ ಕಲ್ಪಿಸುವಂತೆ ಆಗಲಿ ಜತೆಗೆ ದುಃಖ ಭರಿಸುವ ಶಕ್ತಿಯನ್ನು ಪ್ರತಿ ಜನರಿಗೆ, ಅಭಿಮಾನಿ ದೇವರುಗಳಿಗೆ ಮತ್ತು ಕುಟುಂಬದವರಿಗೆ ಕರುಣಿಸಲಿ ಎಂದು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಭವನ ಎರಡನೇ ಮಹಡಿ ಉದ್ಘಾಟನಾ ಸಮಾರಂಭದ ಆಹ್ವಾನ ಕರ ಪತ್ರಿಕೆಗಳನ್ನು ಶಾಸಕರು ಹಾಗೂ ಮುಖಂಡರು ಬಿಡುಗಡೆಗೊಳಿಸಿದರು. 

ಈ ವೇಳೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನಕಾರ್ಯದರ್ಶಿ ಜಿ.ಎ.ರವೀಂದ್ರ, ಎಸ್‌ಟಿ ಘಟಕದ ಅಧ್ಯಕ್ಷ ಹನುಮಂತಪ್ಪ, ಕಾರ್ಯಾಧ್ಯಕ್ಷ ಲಕ್ಷ್ಮಣ್.ಎಂ, ಕಾರ್ಯಕಾರಿ ಸಮಿತಿಯ ಸದಸ್ಯ ದೊಡ್ಡಸಣ್ಣೆ ಮುನಿರಾಜು, ಅಣ್ಣೇಶ್ವರ ಗ್ರಾಪಂ ಅಧ್ಯಕ್ಷ ವೇಣುಗೋಪಾಲ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ, ಕುಂದಾಣ ವಿಎಸ್‌ಎಸ್‌ಎನ್ ಅಧ್ಯಕ್ಷ ರಾಮಣ್ಣ, ಮಾಜಿ ಅಧ್ಯಕ್ಷ ಮುನಿರಾಜು, ಆಲೂರುದುದ್ದನಹಳ್ಳಿ ಮುಖಂಡ ರಂಗಸ್ವಾಮಿ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಕಲ್ಯಾಣ ಬಾಬು, ತಾಪಂ ಮಾಜಿ ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್, ಎಸ್.ಮಹೇಶ್, ಹೋಬಳಿ ಅಧ್ಯಕ್ಷರಾದ ಚಂದ್ರೇಗೌಡ, ಮುನಿರಾಜಪ್ಪ, ಮುಖಂಡರಾದ ವೆಂಕಟಗಿರಿಕೋಟೆ ಗ್ರಾಪಂ ಅಧ್ಯಕ್ಷ ಹುರಳಗುರ್ಕಿ ಶ್ರೀನಿವಾಸ್, ಕ್ಯಾತೇಗೌಡ, ನೆರಗನಹಳ್ಳಿ ಶ್ರೀನಿವಾಸ್, ವಕೀಲ ನಾರಾಯಣಸ್ವಾಮಿ, ವಿಜಯಪುರ ಟೌನ್ ಅಧ್ಯಕ್ಷ ಭಾಸ್ಕರ್, ಪುರಸಭಾ ಉಪಾಧ್ಯಕ್ಷ ಕೇಶವಪ್ಪ, ಯುವ ಘಟಕದ ಅಧ್ಯಕ್ಷ ಭರತ್, ಯುವ ಮುಖಂಡ ಕೇಶವಗೌಡ, ಮುಖಂಡರಾದ ಪ್ರಭಾಕರ್, ಕೋಡಗುರ್ಕಿ ಮಹೇಶ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.

Be the first to comment

Leave a Reply

Your email address will not be published.


*