ಸರಕಾರದ ಯೋಜನೆಗಳ ಜನರಿಗೆ ತಲುಪಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಶಿಕ್ಷಣ ವರ್ಗ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ರಾಜ್ಯ ಹಾಗೂ ಕೇಂದ್ರ ಸರಕಾರ ರೈತರಿಗಾಗಿ ಜಾರಿಗೆ ತಂದಿರುವ ಅನೇಕ ಕಾರ್ಯಕ್ರಮಗಳ ಬಗ್ಗೆ ಜನರ ಮಧ್ಯೆ ಹೋಗಿ ಜನರಿಗೆ ತಿಳಿಸುವ ಕೆಲಸ ರೈತ ಮೋರ್ಚಾ ಮಾಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು . ಮುಖಂಡರು ತಾಲೂಕಿನ ಕಸಬಾ ಹೋಬಳಿ ಐವಿಸಿ ರಸ್ತೆಯಲ್ಲಿರುವ ದಿ ಸ್ಕೂಲ್ ಆಪ್ ಎನ್ಸಿಯಂಟ್ ವಿಸ್ಟಮ್ ಶಾಲೆಯಲ್ಲಿ ರಾಜ್ಯ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ರೈತ ಮೋರ್ಚಾ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಮಾತನಾಡಿ , ಕೇಂದ್ರ ಸರಕಾರ ರೈತರಿಗೆ ಏಳೆಗಾಗಿ ಜಾರಿಗೆ ತಂದಿರುವ ಅನೇಕ ಯೋಜನೆಗಳ ಬಗ್ಗೆ ರೈತ ಮೋರ್ಚಾ ದವರು ಘಂಟಾಘೋಷವಾಗಿ ಸಾರ್ವಜನಿಕರಿಗೆ ಹೇಳಿ 75 ವರ್ಷ ಇತಿಹಾಸದಲ್ಲಿ ಜನ ನಮ್ಮನ್ನು ನಂಬಿ ಬರುತ್ತಿದ್ದಾರೆ .

CHETAN KENDULI

ಮೋದಿ ನಾಯಕತ್ವದಲ್ಲಿ ಆಗಿರುವ ಕೆಲಸಗಳನ್ನು ಅಧ್ಯಯನ ಮಾಡಿ ಜನರ ಮಧ್ಯೆ ತೆರಳಬೇಕು . ಮತ್ತೆ ದೇಶ ಹಾಗೂ ರಾಜ್ಯ ದಲ್ಲಿ ಬಿಜೆಪಿ ಬರಬೇಕು . ಭ್ರಷ್ಟಾಚಾರ ಇಲ್ಲದ ಸರಕಾರ ಬಿಜೆಪಿ ಮೋದಿ ಸರಕಾರ ಎಂದರು .*ಸಿದ್ದರಾಮಯ್ಯ ಪಶ್ಚಾತ್ತಾಪ ಮಾತುಗಳ ಬಗ್ಗೆ ಪ್ರತಿಕ್ರಿಯೆ*ಸಿದ್ದರಾಮಯ್ಯ ಪ್ರಾಯಶ್ಚಿತ್ತ ಮಾಡಿ ಕೊಳ್ಳಬೇಕು . ಹಿಂದೂ ಮುಸ್ಲಿಂ ಒಡೆಯುವ ಪ್ರಯತ್ನ ಮಾಡುತ್ತಾರೆ . ಹಿಂದೂ ವಿಚಾರಗಳ ಬಗ್ಗೆ ಅಸಡ್ಡೆಯಾಗಿ ಮಾತನಾಡುತ್ತಾರೆ . ವೀರಶೈವ ಲಿಂಗಾಯತ ಒಡೆಯುವಂತ ಪ್ರಯತ್ನ ಅವರಿಗೆ ಪಶ್ಚಾತ್ತಾಪ ಅಲ್ಲ , ಪ್ರಾಯಶ್ಚಿತ ಮಾಡಿಕೊಳ್ಳುವಕಾಲ ಬಂದಿದೆ . ಸಿದ್ದರಾಮಯ್ಯ ಗಾಂಧಿ ಆತಂಕಿತರಾಗಿದ್ದಾರೆ ಮತ್ತು ರಾಹುಲ್ ಎಂದು ಅರ್ಥ ಆಗುತ್ತೆ . ಹಿಂದೆ ಕಾಂಗ್ರೆಸ್ ನವರು ಹಿಂದೂ ವಿಚಾರಗಳ ಬಗ್ಗೆ ಅಸಡ್ಡೆ ತೋರಿಸುತ್ತಿದ್ದರು . ಇದೀಗ ಬಿಜೆಪಿಯ ಪ್ರಾಬಲ್ಯ ಭಯ ಎಷ್ಟು ಹೆಚ್ಚಾಗಿದೆ . ಸಿದ್ದರಾಮಯ್ಯ ನವರು ತಮ್ಮನ್ನ ಒಬ್ಬ ಸೋಷಿಯಲಿಸ್ಟ್ ಎಂದು ಕರೆದುಕೊಳ್ಳುತ್ತಿದ್ದರು ಮಠ , ಮಂದಿರಕ್ಕೆ ಕಾಂಗ್ರೆಸ್‌ನವರು ಭೇಟಿ ಕೊಡುತ್ತಿದ್ದಾರೆ . ರಾಹುಲ್ ಗಾಂಧಿ ಉತ್ತರಾ ಖಂಡ್ , ಉತ್ತರಪ್ರದೇಶ , ಮಧ್ಯಪ್ರದೇಶ ಚುನಾ ವಣೆಗಳಲ್ಲಿ ದೇವಾಸ್ಥಾನಕ್ಕೆ ಭೇಟಿ ನೀಡಿ ಅಪಹಾಸ್ಯಕ್ಕೆ ಒಳಗಾಗಿದ್ದರು .

ಇದರಿಂದ ಬಿಜೆಪಿಯ ಭಯ ಎಷ್ಟಿದೆ ಅಂತಾ ಗೊತ್ತಾಗುತ್ತದೆ . ಇತ್ತೀಚೆಗೆ ರಾಜ್ಯದ ಮಠಕ್ಕೂ ಸಹ ರಾಹುಲ್ ಗಾಂಧಿ ಭೇಟಿ ನೀಡಿದ್ದರು ಎಂದರು . ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ , ಕಳೆದ ಎರಡು ವರ್ಷಗಳಿಂದ ರೈತಮೋರ್ಚಾ ರೈತರ ಮಧ್ಯೆ ಸರಕಾರದ ಕೊಂಡಿಯಾಗಿ ಕೆಲಸ ಮಾಡುತ್ತಿದೆ . ಸರಕಾರದ ಸಾಧನೆಗಳನ್ನು ರೈತರಿಗೆ ತಿಳಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದೇವೆ . ಮುಂಬರುವು ಚುನಾವಣೆಯಲ್ಲಿ ರೈತಮೊರ್ಚಾ ಸಕ್ರಿಯವಾಗಿ ಕೆಲಸ ಮಾಡಲಿದೆ . ಬಂಡವಾಳ ಇಲ್ಲದ ಕಾಂಗ್ರೆಸ್ ಜನರ ಭಾವನೆಗಳನ್ನು ಕೆಡಿಸುತ್ತಿದ್ದಾರೆ . 3 ದಿನಗಳ ಕಾಲ ನಡೆಯುವ ತರಬೇತಿ ಕಾರ್ಯಕ್ರಮದಲ್ಲಿ ಅನೇಕ ವಿಚಾರ ತಿಳಿಸಿಕೊಡಲಾಗುವುದು ತರಬೇತಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು .ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಶಿಕ್ಷಣ ವರ್ಗ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ರೈತ ಪದಾಧಿಕಾರಿಗಳು , ಮೋರ್ಚಾ ಮಾಜಿ ಶಾಸಕರಾದ ಪಿಳ್ಳಮುನಿಶಾಮಪ್ಪ , ಜಿ.ಚಂದ್ರಣ್ಣ ಬಿಜೆಪಿ ಮುಖಂಡರಾದ ಎ.ಕೆ.ಪಿ.ನಾಗೇಶ್ , ಗ್ರಾಮಾಂತರ ಜಿಲ್ಲೆಯ ರೈತ ಮೋರ್ಚಾ ಅಧ್ಯಕ್ಷ ರವಿಕುಮಾರ್, ಜಿಲ್ಲಾಮಾಧ್ಯಮ ಪ್ರಮುಖ್ ರಮೇಶ್‌ ಕುಮಾರ್‌ ಸೇರಿದಂತೆ ಅನೇಕರು ಇದ್ದರು .

Be the first to comment

Leave a Reply

Your email address will not be published.


*