ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಕಲಾವಿದರು ಸಮಾಜಕ್ಕೆ ಮಾದರಿ ವ್ಯಕ್ತಿಗಳಗಿರಬೇಕು ಅಷ್ಟೇ ಅಲ್ಲದೆ ಕಲಾವಿದರ ಮಾಶಾಸನದ ಅವಧಿ 45 ವಷ೯ಕೆ ಇಳಿಸುವ ಕಾರ್ಯಕ್ಕೆ ಪರಿಷತ್ತಿನವರು ಶ್ರಮಿಸಬೇಕು ಎಂದು ಪ್ರಗತಿಪರ ರೈತ ಅರವಿಂದ ಕೊಪ್ಪ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡಬಸವೇಶ್ವ ಸಂಸ್ಥೆಯಡಿಯಲ್ಲಿ ನಡೆದ ಜಾನಪದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಾವಿದರು ಕೇವಲ ಮಾಶಾಸನವಾಗಲಿ ಅಥವಾ ಪ್ರಶಸ್ತಿಗಾಗಲಿ ಹಾಡದೆ ತಮ್ಮ ಕಲಾವೃತ್ತಿ ಬೆಳೆಸಿಕೊಂಡು ಬರಲು ಪ್ರಯತ್ನಿಸಿ ಅದನ್ನು ತಮ್ಮ ಮುಂದಿನ ಪೀಳಿಗೆಗೆ ಪಸರಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಕನ್ನಡ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷ ಎ.ಆರ್.ಮುಲ್ಲಾ ತಾಲೂಕಿನ ಎಲ್ಲಾ ಕಲಾವಿದರುರನ್ನು ಗುರುತಿಸಿ ಅವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಕಲಾವಿದರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಮ್ಮ ಪರಿಷತ್ತು ಮಾಡುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರೂಡಗಿಯ ಶ್ರೀ ಯಲ್ಲಾಲಿಂಗ ಮಹಾರಾಜರು ವಹಿಸಿದ್ದರು. ನಿವೃತ್ತಿ ಮುಖ್ಯ ಗುರಗಳಾದ ಸಿ. ಎಸ್.ಬಾಗೇವಾಡಿ ಕಾರ್ಯಕ್ರಮವನ್ನು ಉದ್ಘಾಟಸಿದರು.
ಡೊಳ್ಳು, ಭಜನೆ, ಚೌಡಕಿ, ಶೋಭಾನೆ, ಹಂತಿ ಹಾಡು, ಜೋಗುಳ, ಗೊಂದಳೆ, ಬುಡಬುಡಕಿ ಇತ್ಯಾದಿ ಕಲಾ ತಂಡಗಳು ಜಾನಪದ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದವು.
ಶಿಕ್ಷಕರಾದ ಎಂ.ಬಿ.ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಗುರನಾಥಗೌಡ ಬಿರಾದಾರ, ಶ್ರೀ ಪ. ಬ. ಸಂಸ್ಥೆಯ ಅಧ್ಯಕ್ಷ ಕೆ.ವಾಯ್.ಬಿರಾದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ. ಬಿ.ಜಿ.ಸಜ್ಜನ. ಶ್ರೀ ಬಸವರಾಜ ಚಿತ್ತರಗಿ ಮತ್ತಿತರರು ಇದ್ದರು.
ಎಸ್. ಬಿ. ಗೊಂಗಡಿ ಪ್ರಾಥಿ೯ಸಿದರು. ಎಲ್. ಎಂ. ಛಲವಾದಿ ಸ್ವಾಗತಿಸಿದರು. ಎಂ. ಜಿ. ವಾಲಿ ನಿರೂಪಿಸಿದರು. ಪ್ರಕಾಶ ಗೊಂದಳ ವಂದಿಸಿದರು.
Be the first to comment