ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಇದ್ದ ಒಂದು ಸೂರನ್ನೂ ಕಳೆದುಕೊಂಡ ಕುಟುಂಬ ದಿಕ್ಕುತೋಚದೇ ಸಂಕಷ್ಟಕ್ಕೀಡಾಗಿದೆ.ದೊಡ್ಡಬಳ್ಳಾಪುರ ನಗರದ ಶಾಂತಿನಗರದ ಒಂದನೇ ಕ್ರಾಸ್ನಲ್ಲಿ ವಾಸವಾಗಿರುವ ಮಹೇಶ್ ಎಂಬುವವರ ಮನೆಯು ಗುರುವಾರ ರಾತ್ರಿ ಭಾಗಶಃ ಕುಸಿದಿದ್ದು, ಉಳಿದಿರುವ ಭಾಗದಲ್ಲೇ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವಭಯದಿಂದ ಬದುಕುತ್ತಿದ್ದಾರೆ.
ಕೂಲಿ ಮಾಡಿ ಬದುಕಿನ ಬಂಡಿ ಸಾಗಿಸುತ್ತಿರುವ ಕುಟುಂಬ ಇದ್ದ ಒಂದೇ ಒಂದು ಮನೆಯನ್ನೂ ಈಗ ಕಳೆದುಕೊಂಡು ಕಂಗಾಲಾಗಿದೆ.ಪರಿಹಾರದ ಭರವಸೆ: ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷೆ ಸುಧಾ ಲಕ್ಷ್ಮೀನಾರಾಯಣ್ರವರು ಸ್ಥಳಪರಿಶೀಲನೆ ನಡೆಸಿ, ತ್ವರಿತವಾಗಿ ನಗರಸಭೆಯಿಂದ ಸಿಗಬೇಕಾದ ಅಗತ್ಯ ಪರಿಹಾರವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
Be the first to comment