ಸಾಗರ ಮಾಲಾ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

ವರದಿ: ಕುಮಾರ್ ನಾಯ್ಕ್, ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಶಿರಸಿ:

CHETAN KENDULI

ಶಿರಸಿ ಕುಮಟಾ ರಸ್ತೆ ಅಗಲೀಕರಣದಿಂದ ಅರಣ್ಯ ನಾಶವಾಗುತ್ತದೆ ಎಂದು ಕೆಲವರು ನ್ಯಾಯಾಲಯದಲ್ಲಿ ಮೂಕದ್ದಮೆ ಹೂಡಿದ್ದರು‌ . ಆದರೆ ಆ ಪರಿಸರ ವಾದಿಗಳಿಗೆ ಇಲ್ಲಿಯ ವಾಸ್ತವ ತಿಳಿದಿಲ್ಲ. ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತೀರಸ್ಕರಿಸಿದೆ. ಆದರೂ ನಕಲಿ ಪರಿಸರವಾದಿಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. 

ಕೇಂದ್ರ ಸರಕಾರದ ಸಾಗರ ಮಾಲಾ ಯೋಜನೆಯಲ್ಲಿ 375 ಕೋಟಿ ರೂಪಾಯಿ‌ ಮೊತ್ತದಲ್ಲಿ ನಿರ್ಮಾಣ ಆಗಬೇಕಿದ್ದ ಕುಮಟಾ ಶಿರಸಿ ರಸ್ತೆ ಅಭಿವೃದ್ದಿ ಗೆ ನಕಲಿ ಪರಿಸರವಾದಿಗಳ ಕಾಟ ನಿಲ್ಲಬೇಕು, ಗುತ್ತಿಗೆದಾರ ಕಂಪನಿಗಳು ಶೀಘ್ರ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿ ಹೆಗಡೆಕಟ್ಟ ಕತ್ರಿ ಬಳಿ ವಿವಿಧ ಸಂಘಟನೆಗಳು ರಸ್ತೆ ತಡೆ ನಡೆಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಯುಪಟೊರಿಯಂ ಗಿಡ ಕೂಡ ಮರಗಳ ಪಟ್ಟಿಯಲ್ಲಿ ಸೇರಿಸಿ 50 ಸಾವಿರ ಮರ ನಾಶ ಆಗುತ್ತಿದೆ ಎಂದಿದ್ದಾರೆ. ಅಂಥ ನಕಲಿ‌ ಪರಿಸರ ವಾದಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.ಸದ್ಯ ಶಿರಸಿ ಕುಮಟಾ ರಸ್ತೆ ಯಲ್ಲಿ ಸಂಚರಿಸುವುದೇ ವಾಹನ ಸವಾರರಿಗೆ ದೊಡ್ಡ ಸವಾಲಿಗೆ ಪರಿಣಮಿಸಿದೆ. 

ಸಮಗ್ರ ಅಭಿವೃದ್ದಿ ವೇದಿಕೆ ಅಧ್ಯಕ್ಷ ಪರಮಾನಂದ ಹೆಗಡೆ, ರಸ್ತೆ ನಿರ್ಮಾಣದ ದ ಹೊಣೆ ಹೊತ್ತ ಗುತ್ತಿಗೆ ಕಂಪನಿಗಳು ರಸ್ತೆ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ. ರಸ್ತೆ ಕಾಮಗಾರಿ ಆರಂಭ ವಾಗುವವರೆಗೂ ನಮ್ಮ ಹೋರಾಟ ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿರಸಿ ಕುಮಟಾ ರಸ್ತೆ ಅಗಲೀಕರಣ ವಿಚಾರದಲ್ಲಿ ಎಲ್ಲರೂ ಅವರವರ ಕರ್ತವ್ಯ ವನ್ನು ಪ್ರಾಮಾಣಿಕವಾಗಿ ನಿಭಾಯಿಸಿದರೆ ಕಾಮಗಾರಿ ತಕ್ಷಣ ಪ್ರಾರಂಭವಾಗುತ್ತದೆ. ಆದರೆ ಅನಗತ್ಯ ವಿಳಂಬ ಆಗುತ್ತಿದೆ ಎಂದು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿದರು.

Be the first to comment

Leave a Reply

Your email address will not be published.


*