ಅತ್ಯಾಚಾರಿ ದುಷ್ಕರ್ಮಿಯನ್ನು ಗಲ್ಲಿಗೇರಿಸುವಂತೆ ತಹಶೀಲ್ದಾರ್ ಮೂಲಕ ರಾಜ್ಯ ಗೃಹ ಮಂತ್ರಿಗೆ ಮನವಿ….!!!

ವರದಿ: ಗ್ಯಾನಪ್ಪ ದೊಡ್ಡಮನಿ, ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ದಲಿತ ಸಂರಕ್ಷ ಸಮಿತಿ ಮಸ್ಕಿ ತಾಲೂಕು ಹಾಗೂ ನಗರ ಘಟಕ ಮಸ್ಕಿ ವತಿಯಿಂದ ಮಾನ್ಯ ಗೃಹ ಸಚಿವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದ ದಿನಾಂಕ 04/10/2021 ರಂದು ಮಧ್ಯರಾತ್ರಿ ಸುಮಾರು ಎರಡು ಗಂಟೆ ಸಮಯದಲ್ಲಿ ದಲಿತ ಮಹಿಳೆಯಾದ ಬಾಲಮ್ಮ ಗಂಡ ಮರಿಯಪ್ಪ ಎನ್ನುವವರನ್ನು ಅದೇ ಗ್ರಾಮದ ಗಂಗಪ್ಪ ಹಳ್ಳೋಳ್ಳಿ ಎಂಬ ದುಷ್ಕರ್ಮಿ ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ ಆ ಮಹಿಳೆ ಒಪ್ಪದಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅತ್ಯಾಚಾರ ಮಾಡಿರುತ್ತಾನೆ. ಆದಕಾರಣ ಕೂಡಲೇ ಆ ದುಷ್ಕರ್ಮಿಯನ್ನು ಬಂಧಿಸಿ ಈ ಪ್ರಕರಣದ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಂಡು ಆ ದುಷ್ಕರ್ಮಿಗಳು ಗಲ್ಲು ಶಿಕ್ಷೆ ವಿಧಿಸಬೇಕೆಂದು ದಲಿತ ಸಂರಕ್ಷ ಸಮಿತಿ ಮಸ್ಕಿ ತಾಲೂಕು ನಗರ ಘಟಕ ಮಸ್ಕಿ ವತಿಯಿಂದ ದಂಡಾಧಿಕಾರಿ ಕವಿತಾ.ಆರ್ ಇವರಲ್ಲಿ ಮನವಿ ಮಾಡುವ ಮೂಲಕ ಒತ್ತಾಯ ಮಾಡಿದರು.

 ಈ ವೇಳೆಯಲ್ಲಿ ಸಿದ್ದಪ್ಪ ಹೂವಿನಬಾವಿ ಡಿಎಸ್ಎಸ್ ತಾಲೂಕ ಅಧ್ಯಕ್ಷರು, ಕಾಶಿಮಪ್ಪ ಡಿ. ಮುರಾರಿ ಡಿಎಸ್ಎಸ್ ಮಸ್ಕಿ ತಾಲೂಕು ಗೌರವಧ್ಯಕ್ಷರು, ಆಂಜನೇಯ ಜಿ. ಮುರಾರಿ,ಭೀಮರಾಯ ಬಳಗಾನೂರು ರಾಜ್ಯ ಉಪಾಧ್ಯಕ್ಷರು, ಬಾಲಸ್ವಾಮಿ ಚಿನ್ನಾಪುರ ಜಿಲ್ಲಾಧ್ಯಕ್ಷರು, ಮರಿಸ್ವಾಮಿ ಬೆನಕನಾಳ ಜಿಲ್ಲಾ ಉಪಾಧ್ಯಕ್ಷರು, ಮೌನೇಶ್ .ಬಿ ಬಳಗಾನೂರ ಜಿಲ್ಲಾ ಉಪಾಧ್ಯಕ್ಷರು, ಹುಲುಗಪ್ಪ ನಂಜಲದಿನ್ನಿ, ಜೋಕಿನ್ ಕಡಬೂರು, ವೆಂಕಟೇಶ್ ಮುರಾರಿ, ಜಗದೀಶ್ ಸಮಗಾರ, ಮಲ್ಲಯ್ಯ ಚಲವಾದಿ ಸೇರಿದಂತೆ ಇನ್ನಿತರೇ ಸದಸ್ಯರಿದ್ದರು.

 

ವರದಿ:ಗ್ಯಾನಪ್ಪ ದೊಡ್ಡಮನಿ ಮಸ್ಕಿ,

Be the first to comment

Leave a Reply

Your email address will not be published.


*