ಪಂಚಾಯತಿಯ ಓರ್ವ ಸಿಬ್ಬಂದಿಯಿಂದ ಮಾತ್ರ ಅಕ್ರಮವಾಗಲ್ಲ…!!! ಬಿಜ್ಜೂರ ಪಂಚಾಯತಿ ಅಕ್ರಮವನ್ನು ಎಸಿಬಿ ಮೂಲಕ ತನಿಖೆ ನಡೆಸುವಂತೆ ಕರವೇ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ತಾಲೂಕಿನ ಬಿಜ್ಜೂರ ಗ್ರಾಪಂಯಲ್ಲಿ 14 ಮತ್ತು 15ನೇ ಹಣಕಾಸು, ಶೌಚಾಲಯ ಮತ್ತು ಆಸ್ತಿ ನೊಂಧಣಿಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾದ 6 ಜನರಲ್ಲಿ ಕೇವಲ ಒಬ್ಬರನ್ನು ಅಮಾನತ್ತು ಮಾಡಿದ್ದು ಕೂಡಲೇ ಪ್ರಕರಣವನ್ನು ಎಸಿಬಿ ತನಿಖೆಗೆ ಒಳಪಡಿಸಿ ಇನ್ನೂಳಿದ 5 ಜನ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಪದಾಧಿಕಾರಿಗಳು ಸೋಮವಾರ ತಾಪಂ ಇಓ ಶಶಿಕಾಂತ ಶಿವಪೂರೆ ಅವರಿಗೆ ಮನವಿ ಸಲ್ಲಿಸಿದರು.



ಬಿಜ್ಜೂರ ಗ್ರಾಪಂಯಲ್ಲಿ ಜನರ ಹಿತಕ್ಕಾಗಿ ಸರಕಾರ ಜಾರಿಗೆ ತಂದಂತಹ ಯೋಜನೆಗಳನ್ನು ದುರುಪಯೋಗ ಪಡೆಸಿಕೊಂಡು ಬಡವರಿಗೆ ಬಂದಂತಹ ಶೌಚಾಲಯ, ಎಣ್‌ಆರ್‌ಐಜಿ ಯೋಜನೆಯಲ್ಲಿ ಮತ್ತು ವಿವಿಧ ಹಣಕಾಸು ಯೋಜನೆಯಲ್ಲಿ ಬಂದಂತಹ ಹಣವನ್ನು ದುರ್ಭಳಕೆ ಮಾಡಿಕೊಂಡಿದ್ದು ಸಾಕ್ಷಿ ಸಮೇತ ಬೆಳಕಿಗೆ ಬಂದಿದೆ. ಆದರೆ ಇದರ ಬಗ್ಗೆ ಸ್ಥಳೀಯ ತನಿಖಾ ಅಧಿಕಾರಿಗಳು ಪಂಚಾಯತಿಯ ಕಪ್ಯೂಟರ್ ಆಪರೇಟರ್ ಅವರನ್ನು ಮಾತ್ರ ಅಮಾನತ್ತು ಮಾಡಿದ್ದಾರೆ. ಆದರೆ ಅನುದಾನ ದಉರುಪಯೋಗವು ಕೇವಲ ಒಬ್ಬರಿಂದ ಮಾತ್ರ ಆಗುವುದಿಲ್ಲ. ಇದರಲ್ಲಿ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುವ ಪಿಡಿಓ ಸೇರಿದಂತೆ ಇನ್ನಿತರ ಸಿಬ್ಬಂದಿಗಳೂ ಭಾಗಿಯಾಗಿರುತ್ತಾರೆ. ಇಂತಹ ಅಧಿಕಾರಿಗಳನ್ನು ಗಮನಕ್ಕೆ ತೋರದೇ ತನಿಖಾ ಅಧಿಕಾರಿಗಳು ಒಬ್ಬರನ್ನು ಮಾತ್ರ ಅಮಾನತ್ತು ಮಾಡಿದ್ದು ಕೂಡಲೇ ಪಂಚಾಯತಿಗೆ ಸಂಬಂಧಿಸಿದ ಉಳಿದ 5 ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಅವರನ್ನೂ ಅಮಾನತ್ತು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.


ತನಿಖೆಯನ್ನು ಎಸಿಬಿಗೆ ಒಪ್ಪಿಸಿ:
ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಗ್ರಾಮ ಪಂಚಾಯತಿ ಸೇರಿದಂತೆ ಹಿರೇ ಮುರಾಳ, ನಾಗರಬೆಟ್ಟ ಪಂಚಾಯತಿಗಳಲ್ಲಿಯೂ ಇಂತಹ ಅಕ್ರಮ ನಡೆದಿದ್ದು ಕೂಡಲೇ ಎಲ್ಲ ಪಂಚಾಯತಿಗಳ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಪ್ರಕರಣವನ್ನು ಎಸಿಬಿ ಇಲಾಖೆಗೆ ಒಪ್ಪಿಸಿ ಅಕ್ರಮ ಎಸೆಗಿದ ಪ್ರತಿಯೊಬ್ಬರನ್ನೂ ಶಿಕ್ಷಗೆ ಒಳಪಡಿಸುವಂತೆ ಕರ್ನಾಟಕ ರಕ್ಷಣಾ ವೇಧಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇಧಿಕೆ ತಾಲೂಕಾಧ್ಯಕ್ಷ ಅರುಣಕುಮಾರ ಪಾಟೀಲ, ಹಬೀಬ ನಾಲತವಾಡ, ಚಾಂದಪಾಷಾ ಹಿಪ್ಪರಗಿ ಶಬ್ಬೀರ ಮಕಾಂದಾರ, ಯಾಸೀನ ಒಂಟೆ, ಸದ್ದಾಂ ನಾಡಗೌಡ, ರಫೀಕ ನಧಾಫ ಇದ್ದರು.

Be the first to comment

Leave a Reply

Your email address will not be published.


*