ಜಿಲ್ಲಾ ಸುದ್ದಿಗಳು
ಹೊನ್ನಾವರ
ಕರಾವಳಿ ಜಿಲ್ಲೆಗಳ ಜೈನ ಸಮುದಾಯದ ಹಿರಿಯ ಸಾಮಾಜಿಕ ಮುಖಂಡರು ಹಾಗೂ ಹೊನ್ನಾವರ ತಾಲೂಕಿನ ಹೆಸರಾಂತ ಕೃಷಿಕ ಬಿ.ಪಿ. ಜಿನದತ್ತ ಗೌಡ (98) ಇವರು ಮಂಕಿ ಒಡಗೇರಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ರಾಜ್ಯದ ಅತಿದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಮಂಕಿ ಗ್ರಾಮಕ್ಕೆ ಸತತ 28 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಹೊನ್ನಾವರ ತಾಲೂಕು ಬೋರ್ಡ್ ಉಪಾಧ್ಯಕ್ಷರಾಗಿ, ಎಪಿಎಂಸಿ ಹೊನ್ನಾವರ ಅಧ್ಯಕ್ಷರಾಗಿ, ಎಪಿಎಂಸಿ ರಾಜ್ಯ ಮಂಡಳಿಯ ನಿರ್ದೇಶಕರಾಗಿ, ಮಾರ್ಕೇಟಿಂಗ್ ಸೊಸೈಟಿಯ ಉಪಾಧ್ಯಕ್ಷರಾಗಿ, ಹೊನ್ನಾವರ ಬಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ, ಮಲೆನಾಡು ಶಿಕ್ಷಣ ಸಂಸ್ಥೆಯ ಎಸ್.ಡಿ.ಎಂ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಶಿರಸಿ ವಿಭಾಗ ಸಲಹಾ ಸಮಿತಿ ಸದಸ್ಯರಾಗಿ, ವಿ.ಎಸ್.ಎಸ್ ಬ್ಯಾಂಕ್ ಮಂಕಿ ಅಧ್ಯಕ್ಷರಾಗಿ, ಹೊನ್ನಾವರ ಜೈನ ಸಮುದಾಯದ ಸ್ಥಾಪಕ ಅಧ್ಯಕ್ಷರಾಗಿ, ಗೇರುಸೊಪ್ಪ ಸೊಂದ ಜೈನಮಠ ಅಭಿವೃದ್ಧಿ ಸಮಿತಿ ಸದಸ್ಯರಾಗಿ , ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರ ಆಪ್ತರಾಗಿ ತಮ್ಮ ಇಳಿ ವಯಸ್ಸಿನಲ್ಲಿಯೇ ತೊಡಗಿಕೊಂಡವರಾಗಿದ್ದರು.
ಜೈನ ಸಮುದಾಯದ ಹಿರಿಯರು, ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕರು, ಮಾಜಿ ಶಾಸಕ ಮಂಕಾಳವೈದ್ಯ , ಜೆ.ಡಿ ನಾಯ್ಕ ಮತ್ತು ಸಂಘ ಸಂಸ್ಥೆಯ ಪ್ರಮುಖರು ಪಾಲ್ಗೊಂಡು, ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.
Be the first to comment