ಮುದ್ದೇಬಿಹಾಳದಲ್ಲಿ ಅನಧಿಕೃತ ವಾಣಿಜ್ಯ ಮಳಿಗೆಗಳು ಉದ್ಭವ…!!! ತೆರವಿಗೆ ಆಗ್ರಹಿಸಿ ಸತ್ಯಾಗ್ರಹ ಪ್ರತಿಭಟನೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ ಡಿ.31:

CHETAN KENDULI

ಮುದ್ದೇಬಿಹಾಳ ಪಟ್ಟಣದಲ್ಲಿ ಪುರಸಭೆ ಅನುಮತಿ ಇಲ್ಲದೇ ಕಟ್ಟಡಗಳು ಹಾಗೂ ಪ್ಲಾಟ್ ಎನ್.ಎ. ಮಾಡಿಸದೇ ವಾಣಿಜ್ಯ ಮಳಿಗೆಗಳನ್ನು ಅಕ್ರಮವಾಗಿ ಕಟ್ಟುತ್ತಿದ್ದು ಕೂಡಲೇ ಅವುಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ದಲಿತ ಯುವ ಸೇನೆ ತಾಲೂಕಾಧ್ಯಕ್ಷ ಪರಶುರಾಮ ಮುರಾಳ ಪುರಸಭೆ ಕಾರ್ಯಾಲಯದ ಎದುರಿಗೆ ಉಪವಾಸ ಸತ್ಯಾಗ್ರಹ ನಡೆಸಿದರು.

ಪಟ್ಟಣದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ಬೇಕಾಬಿಟ್ಟಿಯಾಗಿ ಕಟ್ಟುತ್ತಿದ್ದಾರೆ. ಇದರ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಹೇಳಿದರೆ ಇದಕ್ಕೆ ನಾನು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾದ್ಯವಿಲ್ಲ ಎಂಬ ಬೇಜವಾಬ್ದಾರಿತ ಉತ್ತರವನ್ನು ನೀಡುತ್ತಿದ್ದಾರೆ. ಅಧಿಕಾರಿಗಳು ಕೆಲ ಉದ್ಯಮಿದಾರರೊಂದಿಗೆ ಶಾಮಿಲಾಗಿದ್ದು ಇಂತಹ ಪ್ರಕರಣದಿಂದಲೇ ಕಂಡು ಬರುತ್ತದೆ. ಕೂಡಲೇ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸತ್ಯಾಗ್ರಹ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಪ್ರತಿಭಟನಾ ನಿರತ ಪರಶುರಾಮ ಮುರಾಳ ತಿಳಿಸಿದ್ದಾರೆ.

ಅಧಿಕಾರಿಗಳ ಮನವಿಗೆ ಕಿವಿಗೊಡದ ಪ್ರತಿಭಟನಾಕಾರ:

ಪುರಸಭೆ ಕಾರ್ಯಾಲಯದ ಎದುರಿಗೆ ದಿಡೀತ ಸತ್ಯಾಗ್ರಹಕ್ಕೆ ಮುಂದಾದ ಪರಶುರಾಮ ಮುರಾಳ ಅವರನ್ನು ಸಮಜಾಯಿಷಿ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದ ಪುರಸಭೆ ಯೋಜನಾಧಿಕಾರಿ ರಮೇಶ ಮಾಡಬಾಳ ಹಾಗೂ ಆರ್.ಓ ಭಾರತಿ ಮಾಡದಿ ಅವರ ಮಾತಿಗೆ ಕಿವಿಗೊಡದ ಮುರಾಳ ಅವರು ಇಂತಹ ಸಮಜಾಷಿಸಿ ಸಾಕಷ್ಟು ಬಾರಿ ಮಾಡಿದ್ದೀರಿ. ನಂತರ ಜನರ ಬೇಡಿಕೆಯನ್ನು ಕಸದ ಬುಟ್ಟಿಗೆ ಹಾಕಿದ್ದೀರಿ ಎಂದು ಹೇಳಿ ಪ್ರತಿಭಟನೆಯನ್ನು ಮುಂದುವರೆಸಿದರು.



ಭೀಮ ಆರ್ಮಿ ಭಾರತ ಏಕ್ತಾ ಮೀಷನನಿಂದ ಬೆಂಬಲ:

ಗುರುವಾರ ಬೆಳಿಗ್ಗೆ ಪುರಸಭೆ ಎದುರಿಗೆ ಸತ್ಯಾಗ್ರಹಕ್ಕೆ ಮುಂದಾದ ಪರಶುರಾಮ ಮುರಾಳ ಅವರಿಗೆ ಮುದ್ದೇಬಿಹಾಳ ತಾಲೂಕಿನ ಭೀಮ ಆರ್ಮಿ ಭಾರತ ಏಕ್ತಾ ಮೀಷನ ಅಧ್ಯಕ್ಷ ಕಯೂಮ ಚೌಧರಿ ಹಾಗೂ ಉಪಾಧ್ಯಕ್ಷ ಅರುಣ ತಿಳಿಗೋಲ ಸತ್ಯಾಗ್ರಹ ಪ್ರತಿಭಟನೆಗೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Be the first to comment

Leave a Reply

Your email address will not be published.


*