ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಅಂಬಿಗ್ ನ್ಯೂಸ್:
ಮುದ್ದೇಬಿಹಾಳ ತಾಲೂಕಿನಲ್ಲಿಯೇ ಕಾಂಗ್ರೆಸ್ ಭದ್ರಕೋಟೆ ಎಂದು ಕರೆಯಲ್ಪಡುವ ಕೋಳೂರ ಗ್ರಾಮ ಪಂಚಾಯತಿಯಲ್ಲಿ ಅತೀ ಸಣ್ಣ ವಯಸ್ಸಿನಲ್ಲಿಯೇ ಕೋಳೂರು ಪಂಚಾಯತಿ ಸಾಮಾನ್ಯ ಮೀಸಲಾಯಿತಿಯ ಮತಕ್ಷೇತ್ರ-2ರ ಅಭ್ಯರ್ಥಿ ಪ್ರಶಾಂತ ಗುರಪ್ಪ ತಾರನಾಳ ವಿಜಯಶಾಲಿಯಾಗಿದ್ದಾರೆ.
ಪ್ರಶಾಂತ ಅವರ ತಂದೆ ಗುರಪ್ಪ ತಾರನಾಳ ಅವರು ಇದೇ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾಗಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಹಾಗೂ ಜನಪರ ಕೆಲಸಗಳನ್ನು ಮಾಡಿದ್ದಾರೆ. ಆದರೆ 2020ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಗುರಪ್ಪ ತಾರನಾಳ ಅವರು ಹಿಂದೆ ಸರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಗುರಪ್ಪ ಅವರ ಪುತ್ರ ಪ್ರಶಾಂತ ಅವರನ್ನು ನಾಮಪತ್ರ ಸಲ್ಲಿಸುವಂತೆ ಒತ್ತಾಯಿಸಿ ಪ್ರಶಾಂತ ಅವರನ್ನು ಗೆಲ್ಲಿಸಿದ್ದು ಅಭಿವೃದ್ಧ ಕಾರ್ಯಕ್ಕೆ ತಂದ ಜಯವಾಗಿದೆ.
ತಂದೆಯ ದಾರಿಯಲ್ಲಿಯೇ ಮಗನ ಗುರಿ:
ತಂದೆ ಗುರಪ್ಪ ತಾರನಾಳ ಅವರು ರಾಜಕೀಯದಲ್ಲಿ ದುರೀಣರಾಗಿ ಕೋಳೂರ ಪಂಚಾಯತಿಯ ಉಪಾಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧು ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೇ ಇವರ ಅಭಿವೃದ್ಧಿ ಹಾಗೂ ರೈತಪರ ಕಾಳಜಿಯನ್ನು ಕಂಡ ರೈತರು ಗುರಪ್ಪ ಅವರನ್ನು ಎಪಿಎಂಸಿ ಸದಸ್ಯರನ್ನಾಗಿಸಿ ಅಧ್ಯಕ್ಷರನ್ನಾಗಿಯೂ ಮಾಡಿದ್ದರು. ತಂದೆಯವರ ಜನಪರ ಕಾಳಜಿಯನ್ನೇ ನನ್ನ ರಾಜಕೀಯದಲ್ಲಿಯೂ ತೊಡಿಸಿಕೊಂಡು ಹೋಗುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ವಿಜೇತ ಅಭ್ಯರ್ಥಿ ಪ್ರಶಾಂತ ತಾರನಾಳ ಅವರ ಮುಖ್ಯಗುರಿಯಾಗಿದೆ.
ರಾಜಕೀಯ ಕೇವಲ ಚುನಾವಣಗೆ ಸೀಮಿತ:
ಪ್ರಪ್ರಥಮ ಬಾರಿಗೆ ರಾಜಕೀಯ ರಂಗಕ್ಕೆ ಕಾಳಿಟ್ಟ ಪ್ರಶಾಂತ ತಾರನಾಳ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಚುನಾವಣೆಯಲ್ಲಿ ಗಲವು ಸೋಲು ಇದ್ದೇ ಇರುತ್ತದೆ. ನಾನು ಗೆದ್ದಿದ್ದೇನೆ ಎಂದು ನಾನು ಬೇರೆ ಅಭ್ಯರ್ಥಿಯ ಬೆಂಬಲಿಗರಿಗೆ ಪಂಚಾಯತಿಯಿಂದ ಒದಗಿಸುವ ಸೌಲಭ್ಯಗಳನ್ನು ಬಿಡದೇ ಒದಗಿಸುತ್ತೇನೆ. ರಾಜಕೀಯ ಎನ್ನುವುದು ಕೇವಲ ಚುನಾವಣೆಗೆ ಸೀಮಿತವಾಗಬೇಕು. ಚುನಾವಣೆಯ ನಂತರ ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ತಂದೆಯೊಂದಿಗೇ ವಿಜಯೋತ್ಸವ ಸಂಭ್ರಮಿಸಿದ ಮತದಾರರು:
ಗುರಪ್ಪ ತಾರನಾಳ ಅವರು ಗ್ರಾಮ ಪಂಚಾಯತ ಚುನಾವಣೆಯಗೆ ನಿಲ್ಲುವುದನ್ನು ಬಿಟ್ಟ ಹಿನ್ನೆಲೆ ಅವರ ಮಗ ಪ್ರಶಾಂತ ಅವರನ್ನು ಒತ್ತಾಯಿಸಿ ಚುನಾವಣಗೆ ಸ್ಪರ್ಧಿಸುವಂತೆ ಮಾಡಿ ಗೆಲ್ಲಿಸಿದ್ದರೂ ಗ್ರಾಮದ ಮತದಾರರು ಮುದ್ದೇಬಿಹಾಳ ಪಟ್ಟಣಕ್ಕೆ ಸಂಜೆ ಆಗಮಿಸಿ ಗುರಪ್ಪ ತಾರನಾಳ ಅವರೊಂದಿಗೆ ಸಂಭ್ರಮಾಚರಣೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
Be the first to comment