ಮತಾಂತರ ನಡೆಸುತ್ತಿದ್ದ ನಾಲ್ವರು ಪೋಲಿಸರು ವಶಕ್ಕೆ..!!!

ವರದಿ: ಕುಮಾರ್ ನಾಯ್ಕ್, ಉಪ ಸಂಪಾದಕರು

ರಾಜ್ಯ ಸುದ್ದಿಗಳು

ಕುಂದಾಪುರ:

CHETAN KENDULI

ಭಾನುವಾರ ಸಂಜೆ ಶಿರಿಯಾರ ಸಮೀಪ ಭೋವಿ ಕುಟುಂಬವನ್ನು ಮತಾಂತರ ನಡೆಸುತ್ತಿದ್ದ ಸ್ಪಷ್ಟ ಮಾಹಿತಿಯ ಪಡೆದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪೋಲಿಸ್ ಇಲಾಖೆಯ ಸಮ್ಮುಖದಲ್ಲಿ ದಾಳಿ ನಡೆಸಿ ಮತಾಂತರ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಕಳೆದ ಕೆಲ ವರ್ಷಗಳಿಂದ ಬ್ರಹ್ಮಾವರ ತಾಲೂಕಿನ ಹಳ್ಳಾಡಿ ,ಶಿರಿಯಾರ,ಕಾಜ್ರಳ್ಳಿ ಹೀಗೆ ಒಳ ಪ್ರದೇಶಗಳ‌ ನಾನಾ ಭಾಗಗಳಲ್ಲಿ ಜ್ಯೋತಿ ಎಂಬ ಮಹಿಳೆ ಮನೆಯನ್ನೇ ಮತಾಂತರ ಅಡ್ಡೆಯಾಗಿ ಮಾಡಿಕೊಂಡು ಮತಾಂತರ ನಡೆಸುತ್ತಿದ್ದಾರೆ. ಇಂದು ಸಾಕ್ಷಿ ಸಮೇತ ಅವರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯಾದ್ಯಂತ ಪಸರಿಸಿರುವ ಮತಾಂತರ ಅಡ್ಡೆಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂ.ಜಾ.ವೇ ಮಂಗಳೂರು ಪ್ರ.ಕಾರ್ಯದರ್ಶಿ ಪ್ರಕಾಶ್ ಕುಕ್ಕೇಹಳ್ಳಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಶಂಕರ್ ಸ್ಕಂದ ಕೋಟ,ಪ್ರವೀಣ್ ಯಕ್ಷಿಮಠ,ಶಿರಿಯಾರ ಚಂದ್ರ ಆಚಾರ್ಯ, ಪ್ರಮೋದ್ ಶೆಟ್ಟಿ,ಪ್ರದೀಪ್ ಸಂಗಮ್,ಸುರೇಶ್ ಸಮತಾ,ವಕೀಲರಾದ ಶ್ಯಾಮಸುಂದರ ನಾಯಿರಿ,ಪ್ರಮೋದ್ ಹಂದೆ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*