ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಶರನ್ನವರಾತ್ರಿ ಪ್ರಯುಕ್ತ ದೇವನಹಳ್ಳಿ ಪಟ್ಟಣದ ತಾಲ್ಲೂಕು ಕಛೇರಿ ರಸ್ತೆಯಲ್ಲಿರುವ ಸರ್ವಶಕ್ತ್ಯಾತ್ಮಕ ಶ್ರೀ ಚೌಡೇಶ್ವರಿ ಅಮ್ಮನವರಿಗೆ ೯ದಿನಗಳು ವಿವಿಧ ಬಗೆಯ ವಿಶೇಷ ಅಲಂಕಾರ ಪೂಜೆ ಏರ್ಪಡಿಸಲಾಗರುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಬೇಟಿ ನೀಡಿದರು.
ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಬೇಟಿ ನೀಡಿ ಮಾತನಾಡಿದ ಅವರು, ನವರಾತ್ರಿ ಹಾಗು ವಿಜಯದಶಮಿ ಪ್ರಯುಕ್ತ ದಿನಾಂಕ ೭ಅಕ್ಟೋಬರ್ ನಿಂದ ೧೫ ಅಕ್ಟೋಬರ್ ವರಗೆ ಪ್ರತಿದಿನ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ, ೯ ದಿನ ಚೌಡೇಶ್ವರಿ ದೇವಿಗೆ ಪೂಜಾ ಪುರಸ್ಕಾರಗಳು ನಡೆಯುತ್ತಿದ್ದು, ತಾಲ್ಲೂಕಿನ ಎಲ್ಲಾ ಜನತೆ ಅಂತರ ಕಾಪಾಡಿಕೊಂಡು ಮಾಸ್ ಧರಿಸಿ ಬಂದು ದೇವಿಯು ಕೃಪೆಗೆ ಪಾತ್ರರಾಗಾಬೇಕು. ಇನ್ನೂ ಕಳೆದ ವರ್ಷ ಮಹಾಮಾರಿ ಕರೋನದಿಂದ ಎಲ್ಲಾಕಡೆ ಸರಕಾರ ಪೂಜೆ ಪುರಸ್ಕಾರಗಳು ನಿಲ್ಲಿಸಬೇಕು ಎಂದು ಆದೇಶ ನೀಡಿತ್ತು, ಈಗ ಕರೋನ ಕಡಿಮೆಯಾಗಿದ್ದು ಸರಕಾರದ ಸುತ್ತೊಲೆಯಂತೆ ಸರಳವಾಗಿ ದೇವಾಲಯಗಳಲ್ಲಿ ಪೂಜೆ ಪುರಸ್ಕಾರಗಳು ನಡೆಯಲು ಅನುಮತಿ ನೀಡಲಾಗಿತ್ತಿದೆ. ಕೊರೊನಾ ಮುಂಜಾಗೃತ ಕ್ರಮಗಳನ್ನು ಅನುಸರಿಸಿಕೊಂಡು ಭಕ್ತಾಧಿಗಳು ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ಹೆಚ್ಚು ಜನಸಂದಣಿ ಸೇರದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಅಣ್ಣಯ್ಯಪ್ಪ ಛತ್ರಕ್ಕೂ ಭೇಟಿ ಪರಿಶೀಲನೆ: ಪಟ್ಟಣದಲ್ಲಿರುವ ಐತಿಹಾಸಿಕ ಅಣ್ಣಪ್ಪ ಛತ್ರ ಮತ್ತು ಅನ್ನದಾಸೋಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಡಳಿತದಿಂದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪಟ್ಟಣದ ಹೆದ್ದಾರಿ ದುರಸ್ಥಿ ವಿಚಾರವಾಗಿ ಈಗಾಗಲೇ ಎಇಇ ಕೃಷ್ಣಪ್ಪ ಮತ್ತು ರಾಷ್ಟ್ರೀಯ ಹೆದ್ದಾರಿಯವರೊಂದಿಗೆ ಮಾತುಕತೆ ಮಾಡಲಾಗುತ್ತದೆ. ಇಬ್ಬರನ್ನು ಕರೆಯಿಸಿ ಸೂಕ್ತ ಕ್ರಮವಹಿಸುವಂತೆ ಸಲಹೆ ಸೂಚನೆ ನೀಡಲಾಗುತ್ತದೆ. ರಸ್ತೆ ಹದಗೆಟ್ಟಿರುವ ಬಗ್ಗೆ ಗಮನಕ್ಕಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುತ್ತದೆ. ಕೊರೊನಾ ವ್ಯಾಕ್ಸಿನೇಷನ್ ಚುರುಕುಗೊಳಿಸಲು ಸಂಬಂಧಿಸಿದ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆ ಚುರುಕುಗೊಳಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ವಿಜಯ ಈ ರವಿಕುಮಾರ್, ಜಿಲ್ಲಾಡಳಿತ ಕಚೇರಿ ಆರ್‌ಎಚ್‌ಎಂ ಪಿ.ಗಂಗಾಧರ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಪುರಸಭೆ ಅಧ್ಯಕ್ಷೆ ರೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್, ಸೊಸೈಟಿ ಕುಮಾರ್, ಮುನಿರಾಜಪ್ಪ, ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜು, ಪುರಸಭೆಯ ಆರೋಗ್ಯ ಅಧಿಕಾರಿಗಳಾದ ಶ್ರೀದೇವಿ, ತೃಪ್ತಿ, ಸಿಬ್ಬಂದಿಗಳು, ದೇವಾಲಯ ಟ್ರಸ್ಟ್ ಪದಾಧಿಕಾರಿಗಳು, ಭಕ್ತಾಧಿಗಳು ಇದ್ದರು.
Be the first to comment