ರಾಜ್ಯ ಸುದ್ದಿ
ದೇವನಹಳ್ಳಿ: ಇದೇ ಪ್ರಥಮ ಭಾರಿಗೆ ಬ್ಲಾಕ್‌ಫಂಗಸ್‌ನಿಂದ ಬಳಲುತ್ತಿದ್ದ ವ್ಯಕ್ತಿಗೆ ಆಕಾಶ್ ಆಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ನಾಗರಾಜ್ ರೆಡ್ಡಿ ಅವರಿಗೆ ಬ್ಲಾಕ್‌ಫಂಗಸ್ ಸೋಂಕು ದೃಢಪಟ್ಟಿದೆ. ಆಕಾಶ್ ಆಸ್ಪತ್ರೆಯಲ್ಲಿಯೇ ಕೊರೋನಾ ದೃಢಪಟ್ಟು ಚಿಕಿತ್ಸೆ ಪಡೆದಿದ್ದರು. ನಂತರ ಬ್ಲಾಕ್‌ಫಂಗಸ್ ಸೋಂಕು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ದೃಢಪಟ್ಟಿದೆ. ಅಲ್ಲಿ ಹಾಸಿಗೆ ಸಿಗದಿದ್ದರಿಂದ ದೇವನಹಳ್ಳಿ ಆಕಾಶ್ ಆಸ್ಪತ್ರೆಯ ಅಧ್ಯಕ್ಷರನ್ನು ಸಂಪರ್ಕಿಸಿ ಹಾಸಿಗೆ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರಿಂದ 18 ದಿನದಲ್ಲಿಯೇ ಚಿಕಿತ್ಸೆ ಫಲಕಾರಿಯಾಗಿ ಗುಣಮುಖರಾಗಿದ್ದಾರೆ.
ನಾಗರಾಜ್ ರೆಡ್ಡಿ ಪುತ್ರ ಜಿತೇಂದ್ರ ಮಾತನಾಡಿ ನಮ್ಮ ತಂದೆಗೆ 70ವರ್ಷ ವಯಸ್ಸಾಗಿತ್ತು. ಡಯಾಬಿಟಿಕ್ ರೋಗಿ ಆಗಿದ್ದರು. ನನ್ನ ತಂದೆಗೆ ಮೊದಲು ಕೊರೋನಾ ದೃಢಪಟ್ಟಿದ್ದು ನಂತರ 15 ದಿವಸದ ನಂತರ ಊತ ಇತರೆ ಸಮಸ್ಯೆಗಳು ಕಂಡುಬಂದಿದ್ದರಿಂದ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಸೋಂಕು ದೃಢಪಟ್ಟಿದ್ದು ಹಾಸಿಗೆ ಇಲ್ಲದೆ ಅಲೆದಾಟ ಮಾಡಲಾಗಿತ್ತು. ನಂತರ ಆಕಾಶ್ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಹಾಸಿಗೆ ವ್ಯವಸ್ಥೆಯನ್ನು ಮಾಡಿ ನಮ್ಮ ತಂದೆ ಆರೋಗ್ಯವಂತರಾಗಿರಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಆಕಾಶ್ ಆಸ್ಪತ್ರೆಯ ವೈದ್ಯ ಡಾ. ಉದಯಬಾನು ಮಾತನಾಡಿ ಬ್ಲಾಕ್‌ಫಂಗಸ್ ಬಂದ ಕೂಡಲೇ ಯಾರೂ ಸಹ ಭಯ ಬೀಳಬಾರದು. ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಗುಣಮುಖರಾಗಲು ಅನುಕೂಲವಾಗಿದೆ. ಇವರಿಗೆ ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಕಂಡುಬಂದಿತ್ತು. ಊತ ಹಾಗೂ ಬ್ಲಾಕ್‌ಫಂಗಸ್ ಲಕ್ಷಣಗಳು ಅನೇಷಿಯಾ ಚುಚ್ಚುಮದ್ದು ನೀಡಿ ಶಸ್ತçಚಿಕಿತ್ಸೆ ಮಾಡಿ ೧೨ಜನ ವೈದ್ಯರ ತಂಡ ಇವರು ಗುಣಮುಖರಾಗಲು ಚಿಕಿತ್ಸೆಯನ್ನು ನೀಡಿದೆ. ಆಕಾಶ್ ಆಸ್ಪತ್ರೆ ಚೇರ್‌ಮೆನ್ ಮುನಿರಾಜು ಅವರು ಔಷಧಿ ಉಪಚಾರಗಳನ್ನು ಸಕಾಲದಲ್ಲಿ ಒದಗಿಸಿಕೊಟ್ಟಿದ್ದಾರೆ. ಗುಣಮುಖರಾಗಿರುವುದು ವೈದ್ಯಕೀಯ ಲೋಕಕ್ಕೆ ಮತ್ತಷ್ಟು ಬಲ ತಂದಿದೆ. ಬ್ಲಾಕ್‌ಫಂಗಸ್ ಚಿಕಿತ್ಸೆ ನೀಡಲು ಆಕಾಶ್ ಆಸ್ಪತ್ರೆಯ ವೈದ್ಯರ ತಂಡ ಸದಾ ಸಿದ್ದ ಎಂದು ಹೇಳಿದರು.
ಈ ವೇಳೆಯಲ್ಲಿ ಆಕಾಶ್ ಆಸ್ಪತ್ರೆಯ ಅಧ್ಯಕ್ಷ ಮುನಿರಾಜು, ಆಸ್ಪತ್ರೆಯ ಡಾ. ಬ್ರಿಜೇಶ್, ಡಾ. ಶ್ರೀಕಂಠಮೂರ್ತಿ, ಡಾ. ದರ್ಶನ್, ಡಾ. ಸುರೇಂದ್ರ, ಡಾ.ರವಿಶಂಕರ್, ಡಾ.ಮೈನಾ, ಡಾ.ಮಹೇಶ್, ಡಾ.ಥಾಮಸ್, ಆಕಾಶ್ ಆಸ್ಪತ್ರೆಯ ಉಪಾಧ್ಯಕ್ಷ ಅಮರ್ ಗೌಡ ಮತ್ತಿತರು ಇದ್ದರು
Be the first to comment