ರಾಜ್ಯ ಸುದ್ದಿ
ಕಾರವಾರ: ಉತ್ತರ ಕನ್ನಡದ ಪೋಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯಗಳನ್ನು ವಿಲೇವಾರಿ ಮಾಡಲಾಯಿತು.
ಒಟ್ಟೂ 79 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 25 ಲಕ್ಷ ಮೌಲ್ಯದ ಮಾದಕ ದ್ರವ್ಯ ಗಳನ್ನು ನಾಶಪಡಿಸಲು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮಾದಕದ್ರವ್ಯ ವಿಲೇವಾರಿ ಕಮಿಟಿಯ ಮುಂದೆ ಹಾಜರು ಪಡಿಸಲಾಯಿತು.
ಅದರಲ್ಲಿ 19 ಲಕ್ಷ ಮೌಲ್ಯದ 69 ಪ್ರಕರಣಗಳಲ್ಲಿ ವಶಪಡಿಸಿಕೊಂಡ 88.9 ಕೆ.ಜಿ ಗಾಂಜಾ, 3 ಪ್ರಕರಣಗಳ 2.5 ಲಕ್ಷ ಬೆಲೆಯ 504 ಗ್ರಾಂ ಚರಸ್ ಹಾಗೂ 7 ಪ್ರಕರಣಗಳಲ್ಲಿ ಜಪ್ತಿ ಮಾಡಿದ 3.21 ಮೌಲ್ಯದ 431 ಗಾಂಜಾ ಗಿಡಗಳನ್ನು ಒಳಗೊಂಡಂತೆ ಮಾದಕ ದ್ರವ್ಯಗಳನ್ನು ಅಂಕೋಲಾ ತಾಲೂಕಿನ ಡೋಂಗ್ರಿಬೈಲ್ ನ ಕೆನಾರ ಐಎಮ್‌ಎ ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Be the first to comment