ರಾಜ್ಯ ಸುದ್ದಿಗಳು
ಬೆಂಗಳೂರು
ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಎಸ್ ಎಸ್ ಎಲ್ ಸಿ, ಪಿಯುಸಿ, ಮೆಡಿಕಲ್ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳು ಹೊರತುಪಡಿಸಿ ಎಲ್ಲಾ ಶಾಲೆ, ಡಿಗ್ರಿ ಕಾಲೇಜುಗಳು ಬಂದ್ ಆಗಲಿವೆ. ನಾಳೆ ರಾತ್ರಿ 10ರಿಂದಲೇ ಹೊಸ ಗೈಡ್ ಲೈನ್ಸ್ ಜಾರಿಯಾಗಲಿವೆ.ಕಂದಾಯ ಸಚಿವ ಆರ್. ಅಶೋಕ್ ಮತ್ತು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಸಭೆಯ ನಿರ್ಧಾರಗಳನ್ನು ತಿಳಿಸಿದರು. ಬೆಂಗಳೂರಲ್ಲಿ ಈಗ 3048 ಕೊರೋನಾ ಕೇಸ್ ಗಳು ಪತ್ತೆಯಾಗಿವೆ. ಇವತ್ತು ಒಂದೇ ದಿನ 147 ಓಮಿಕ್ರಾನ್ ಕೇಸ್ ಗಳು ಪತ್ತೆಯಾಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಇನ್ನು ಐದಾರು ದಿನದಲ್ಲಿ ಕೊರೋನಾ ಕೇಸ್ ಗಳು 10 ಸಾವಿರ ತಲುಪುವ ಸಾಧ್ಯತೆ ಇದೆ. ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್ ಮತ್ತು ರಾಜ್ಯದ ಇತರೆ ಭಾಗಗಳಿಗೆ ಬೇರೆ ರೂಲ್ಸ್ ಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.
20 ರಿಂದ 50 ವರ್ಷದವರಲ್ಲಿ ಕೋವಿಡ್ ಹೆಚ್ಚಾಗಿ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ 10 ಮತ್ತು 12 ತರಗತಿ ಹೊರತು ಪಡಿಸಿ 1 ರಿಂದ 9 ಮತ್ತು 11 ನೇ ತರಗತಿಯನ್ನು 6ನೇ ತಾರೀಖಿನಿಂದ 2 ವಾರಗಳ ಕಾಲ ಬಂದ್ ಆಗಲಿದೆ. ಎಸ್ ಎಸ್ ಎಲ್ ಸಿ, ಪಿಯುಸಿ, ಮೆಡಿಕಲ್ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳು ಹೊರತುಪಡಿಸಿ ಎಲ್ಲಾ ಶಾಲೆ, ಡಿಗ್ರಿ ಕಾಲೇಜುಗಳು ಬಂದ್ ಆಗಲಿವೆ. 2 ವಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನ. 2 ವಾರ ನೈಟ್ ಕರ್ಫ್ಯೂ ಸಹ ವಿಸ್ತರಿಸಲಾಗಿದೆ. ಚಿತ್ರಮಂದಿರ, ಬಾರ್, ಪಬ್, ರೆಸ್ಟೋರೆಂಟ್ ಗಳಲ್ಲಿ 50% ಗೆ ಅನುಮತಿ ನೀಡಲಾಗಿದೆ. ಇಲ್ಲಿಗೆ ಭೇಟಿ ನೀಡುವವರು 2 ಡೋಸ್ ಲಸಿಕೆ ಪಡೆದಿರಬೇಕು. ಮದುವೆ ಹೊರಾಂಗಣದಲ್ಲಿ ಇದ್ದರೆ 200 ಜನ ಮತ್ತು ಒಳಾಂಗಣದಲ್ಲಿದ್ದರೆ 100 ಜನರಿಗೆ ಮಾತ್ರ ಅವಕಾಶ ಎಂದು ಅಶೋಕ್ ತಿಳಿಸಿದರುಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿರುವ ಕಾರಣದಿಂದ ವಿದೇಶದಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದ ಬಳಿಕ ಪಾಸಿಟಿವ್ ಬಂದರೆ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗುವುದು. ಔಷಧಿ ಖರೀದಿ, ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಸಿದ್ಧಗೊಳಿಸಿಕೊಳ್ಳುವ ಕುರಿತು ಚರ್ಚೆ ಮಾಡಿದ್ದೇವೆ. ಬೆಂಗಳೂರನ್ನೇ ಒಂದು ರಾಜ್ಯವಾಗಿ ಪರಿಗಣಿಸಿ ಬೆಂಗಳೂರಿನಲ್ಲಿ ಪ್ರತ್ಯೇಕವಾದ ಕಠಿಣ ಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. 8 ವಲಯಗಳಲ್ಲಿ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ತಂಡ ಮಾಡಲಾಗಿ ಎಂದು ಸುಧಾಕರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಮಹತ್ವದ ಮೀಟಿಂಗ್ ನಡೆಸಿದರು. ಸಭೆಯಲ್ಲಿ ಸಿಎಂ ಕೊರೋನಾ ಸ್ಥಿತಿಗತಿ, ಲಾಕ್ಡೌನ್ ಮಾಡುವ ಕುರಿತು ತಜ್ಞರಿಂದ ಇಂಚಿಂಚೂ ಮಾಹಿತಿ ಕಲೆಹಾಕಿದ್ದಾರೆ.ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದ್ದು, ಕಳೆದ ಮೂರು ದಿನಗಳಿಂದ 1000 ದ ಗಡಿ ದಾಟಿದ್ದ ಕೊರೋನಾ ಸೋಂಕಿತರ ಸಂಖ್ಯೆ ಇಂದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಂದು ಒಂದೇ ದಿನದಲ್ಲಿ 2479 ಕೇಸ್ ಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಇಂದು 2053 ಕೇಸ್ ಗಳು ಪತ್ತೆಯಾಗಿವೆ. ಇನ್ನು ಕೊರೋನಾ ಪಾಸಿಟಿವಿಟಿ ದರದಲ್ಲೂ ಗಣನೀಯ ಏರಿಕೆ ಕಂಡಿದ್ದು, ಇಂದು ಪಾಸಿಟಿವಿಟಿ ದರ 2.59% ಇದೆ. ನಿನ್ನೆ ಪಾಸಿಟಿವಿಟಿ ದರ 1.60% ಇತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ಜಾರಿಗೊಳಿಸಿದೆ.
Be the first to comment