ಜಿಲ್ಲಾ ಸುದ್ದಿಗಳು
ಭಟ್ಕಳ
ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ /ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಾಣಾ ಒಕ್ಕೂಟದ ವತಿಯಿಂದ ಕರ್ನಾಟಕ ರಾಜ್ಯದ ಹಿಂದೂಳಿದ ವರ್ಗ ಪ್ರವರ್ಗ -1 6(ಎಇ)(ಎಡಿ) ಯಾದಿಯಲ್ಲಿನ ಮೀನುಗಾರ ವೃತ್ತಿಯ ಮೊಗೇರ್ ( ಮೊಗವೀರ ) ಜಾತಿಯವರು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಕ್ರಮ ಸಂ 78 ರ ಪರಿಶಿಷ್ಟ ಜಾತಿ ಮೊಗೇರ ಪ್ರಮಾಣ ಪತ್ರ ಪಡೆದು ಉತ್ತರ ಕನ್ನಡ ಜಿಲ್ಲೆಯ ನೈಜ ಪರಿಶಿಷ್ಟರಿಗೆ ಸಿಗಬೇಕಾಗಿದ್ದ ಸಾವಿರಾರು ಕೋಟಿ ಹಣ ಹಗಲು ದರೋಡೆ ಮಾಡುತ್ತಿರುವುದನ್ನು ತಡೆಯಬೇಕು ಎಂದು ತಾಲೂಕ ತಹಶಿಲ್ದಾರರ ಮೂಲಕ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಕಳೆದ 40-45 ದಿನಗಳಿಂದ ತಮ್ಮ ಮೀನುಗಾರ ಮೊಗೇರ್ ಅಂದರೆ ಮೊಗವೀರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಮೀನುಗಾರ ವೃತ್ತಿಯ ಮೊಗೇರ ಮೊಗವೀರ ಜಾತಿಯು 1936 ರಿಂದ ನೈಜ ಪರಿಶಿಷ್ಟ ಜಾತಿ ಎಂದು ಪರಿಗಣಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಮೊಲ ಬೇಟೆಗಾರ ಮೊಗೇರ ಜಾತಿ ಹೆಸರನ್ನು ದುರುಪಯೋಗ ಪಡಿಸಿಕೊಂಡು 1976 ರ ಪ್ರಾದೇಶಿಕ ನಿರ್ಬಂದ ತೆಗೆದ ನಂತರದಲ್ಲಿ ಭಟ್ಕಳದ ತಹಶಿಲ್ದಾರರಿಗೆ ಸುಳ್ಳು ಮಾಹಿತಿಯನ್ನು ನೀಡಿ ಶಾಲಾ ದಾಖಲಾತಿಗಳಲ್ಲಿನ ಜಾತಿ ಕಲಂ ನಲ್ಲಿದ್ದ ಮೊಗವೀರ ಹೆಸರನ್ನು ಮೊಗೇರ ಎಂದು ತಿದ್ದುಪಡಿ ಮಾಡಿಸಿ ಕೇವಲ ಶಾಲಾ ದಾಖಲಾತಿಯ ಆಧಾರದ ಮೇಲೆ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವ ಮೂಲಕ ಜಿಲ್ಲೆಯ ನೈಜ ಪರಿಶಿಷ್ಟರಿಗೆ ದೊರಕಬೇಕಾದ ಸಾವಿರಾರು ಕೋಟಿ ಮೀಸಲಾತಿ ಸೌಲಬ್ಯಗಳನ್ನು ರಾಜಾರೋಷವಾಗಿ ಹಗಲು ದರೋಡೆ ಮಾಡುತ್ತಿದ್ದು ಜಿಲ್ಲೆಯ ನೈಜ್ಯ ಪರಿಶಿಷ್ಟ ಜಾತಿಗಳಾದ ಕೊರಾರ ಭಂಗಿ ಝಾಡಮಾಲಿ, ಸಮಗಾರ ಚಮಗಾರ ಬಾಕಡ ಹಳ್ಳೆರ, ಹಸ್ಲರ ಹುಲಸ್ವಾರ ಮುಕ್ರಿ ಆಗೇರ ಆದಿಕರ್ನಾಟಕ ಮಾದಿಗ , ಇತ್ಯಾದಿ ಜಾತಿಗಳ ಮೂಲ ಭೂತ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದು ಸರಕಾರ ಇವರ ವಿಷಯದಲ್ಲಿ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದೆ .
ಈ ಎಲ್ಲಾ ಸಂಗತಿಯನ್ನು ಪರಿಗಣಿಸಿ ಡಾ: ಅಂಬೇಡ್ಕರ್ ಹೆಸರಿನಲ್ಲಿ ಕಾನೂನು ಭಾಹಿರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಜಿಲ್ಲೆಯ ಮೀನುಗಾರ ಮೊಗೇರರಿಗೆ ಯಾವುದೇ ಕಾರಣಕ್ಕೂ ಜಾತಿ ಪ್ರಮಾಣ ಪತ್ರವನ್ನು ಸಾಮೂಹಿಕವಾಗಿ ರದ್ದುಗೊಳಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಜಿಲ್ಲೆಯ ನೈಜ ಪರಿಶಿಷ್ಟ ಜಾತಿಗಳ ಒಕ್ಕೂಟದ ಮೂಖಾಂತರ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು ಈ ಸಂದರ್ಬದಲ್ಲಿ ಸಂಘಟನೆಯ ಉಪಾಧ್ಯಕ್ಷ ರವೀಂದ್ರ ಎಸ್ ಮಂಗಳ, ಪ್ರಧಾನ ಕಾರ್ಯದರ್ಶಿ ಕಿರಣ್ ಶಿರೂರ್, ಮಹೇಂದ್ರ ಪಾವಸ್ಕರ್ , ನರಸಿಂಹ ಪಾಲೆಕರ್ ಹಾಗು ಮುಂತಾದವರು ಉಪಸ್ಥಿತರಿದ್ದರು
Be the first to comment