ಅಂಬೇಡ್ಕರ ಫೋಟೋ ತೆಗಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ರಾಯಚೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಧ್ವಜವಂದನೆ ಮಾಡಲು ಮಾನ್ಯ ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರರ ಫೋಟೋ ಇಟ್ಟು ಮಾನ್ಯ ಜಿಲ್ಲಾ ನ್ಯಾಯಾಧೀಶರಿಗೆ ಧ್ವಜವಂದನೆ ಮಾಡಲು ಆಹ್ವಾನಿಸಿದಾಗ ಅಂಬೇಡ್ಕರ ಫೋಟೋ ತೆಗೆದರೆ ಮಾತ್ರ ನಾನು ಬಂದು ಧ್ವಜವಂದನೆ ಮಾಡುತ್ತೇನೆ ಎಂದು ಹೇಳಿ ಅಂಬೇಡ್ಕರರ ಫೋಟೋ ತೆಗೆದ ಮೇಲೆ ಬಂದು ಮಹಾತ್ಮಾ ಗಾಂಧೀಯವರಿಗೆ ಪುಷ್ಪನಮನ ಸಲ್ಲಿಸಿ ಧ್ವಜವಂದನೆ ಮಾಡಿ ಜಗತ್ ರತ್ನ ಶ್ರೀ ಬಿ. ಆರ್. ಅಂಬೇಡ್ಕರ್‌ರವರಿಗೆ ಅವಮಾನ ಮಾಡಿದ ಕಾರಣ ಒಬ್ಬ ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಸಾರ್ವಜನಿಕರ ಮುಂದೆ ಅವಹೇಳನ ಮಾಡಿದರೆ ಅವನ ವಿರುದ್ಧ ದೌರ್ಜನ್ಯ ಕಾನೂನಿನಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಒಬ್ಬ ಭಾರತದ ಸಂವಿಧಾನ ಶಿಲ್ಪಿ ಹಾಗೂ ದಲಿತ ಜನಾಂಗದ ದೇವರಾದ ಬಿ. ಆರ್. ಅಂಬೇಡ್ಕರ್‌ರವರಿಗೆ ಒಬ್ಬ ಜಿಲ್ಲಾ ನ್ಯಾಯಾಧೀಶರು ಅವಮಾನ ಮಾಡಿದ್ದರಿಂದ, ತಮ್ಮ ಇಲಾಖೆಯಿಂದ ಅವರ ವಿರುದ್ಧ ಸ್ವಇಚ್ಚೆಯಿಂದ (ಸುಮಟ) ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸಿ ಅವರ ವಿರುದ್ಧ ಕಾನೂನು ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಮನವಿಯನ್ನು ಗೃಹ ಸಚಿವರಿಗೆ ಭಟ್ಕಳ ಡಿ ವೈ ಎಸ್ ಪಿ ಮೂಲಕ ನಾರಾಯಣ ಶಿರೂರು ಉಪಾಧ್ಯಕ್ಷರು ಪ.ಜಾ ಪ.ಪಂ ಮೀಸಲಾತಿ ಮತ್ತು ಹಿತಾಸಕ್ತಿ ರಕ್ಷಣಾವೇದಿಕೆ ಕರ್ನಾಟಕ ರಾಜ್ಯ ಬೆಂಗಳೂರು ಮನವಿ ನೀಡಿದರು ಈ ಸಂದರ್ಭದಲ್ಲಿ ಮರಿಸ್ವಾಮಿ,ಕಿರಣ್ ಶಿರೂರು, ವಕೀಲರಾದ ರವೀಂದ್ರ, ಮುಂತಾದವರು ಉಪಸ್ಥಿತರಿದ್ದರು

CHETAN KENDULI

Be the first to comment

Leave a Reply

Your email address will not be published.


*