ದನದ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿದ ಪ್ರಕರಣ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲು

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ರಾಜ್ಯ ಸುದ್ದಿಗಳು 

                        ಸಿದ್ದಾಪುರ

ಸಿದ್ದಾಪುರ ತಾಲೂಕಿನ ಬೀಳಗಿಯಲ್ಲಿ ದನದ ವ್ಯಾಪಾರಿಯಾಗಿದ್ದ ಗೋವಿಂದಗೌಡ ಎನ್ನುವವರು ಧನವನ್ನು ಮಾರಾಟ ಮಾಡುವುದಕ್ಕಾಗಿ ತಮ್ಮ ವಾಹನದಲ್ಲಿ ಸಾಗಿಸುತ್ತಿದ್ದಾಗ ಸಿದ್ದಾಪುರ ತಾಲೂಕಿನ ಬಿಳಗಿ ಸಮೀಪ ಕೆಲವರು ಗಾಡಿಯನ್ನು ಅಡ್ಡಗಟ್ಟಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಪೊಲೀಸ್ ಠಾಣೆಯ ಎದುರು ಗೋವಿಂದಗೌಡ ರವರ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಗೂ ಅವಾಚ್ಯ ಶಬ್ದದಿಂದ ನಿಂದಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ದನದ ವ್ಯಾಪಾರಿ ಗೋವಿಂದ ಗೌಡನನ್ನು ಬಂದಿಸಿದ್ದರು. ಇದನ್ನು ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಕ್ರಷ್ಣ ಬಳೆಗಾರ್ಖಂಡಿಸಿದ್ದರು ಮತ್ತು ದನದ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು.

CHETAN KENDULI

               ಇದಲ್ಲದೆ ರೈತಸಂಘದ ಜಿಲ್ಲಾಧ್ಯಕ್ಷರಾಗಿರುವ ವೀರಭದ್ರ ನಾಯ್ಕ ಅವರ ನೇತೃತ್ವದಲ್ಲಿ ಇಂದು ದಿನಾಂಕ 24-10-2021ರಂದು ಸಿದ್ದಾಪುರದಲ್ಲಿ ಸಮಾನಮನಸ್ಕರ ಸಭೆ ಕರೆಯಲಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಸಿದ್ದಾಪುರ ಪೊಲೀಸ್ ಅಧಿಕಾರಿಗಳು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಇಂದು ಗೋವಿಂದ ಗೌಡರವರು ತಮ್ಮ ಮೇಲೆ ಹಲ್ಲೆಯಾದ ಕುರಿತು ಹಾಗೂ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವ ಕುರಿತು ಸಿದ್ದಾಪುರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದಾರೆ

                     ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಗೊವಿಂದ ಗೌಡ ರವರು ಆ ದಿನ ನಡೆದ ಘಟನೆಯನ್ನು ವಿವರಿಸಿದರು. ಆದರ್ಶ ಪೈ ಗ್ರಾಮ ಪಂಚಾಯತ ಸದಸ್ಯರು ತಮ್ಮ ಕೆಲವು ಸಂಗಡಿಗರ ಜೊತೆ ಸೇರಿ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆದರ್ಶ ಪೈ ನಾನು ಕಾಗೇರಿಯ ಆಪ್ತ ನಿನ್ನನ್ನು ಜೀವನ ಪರ್ಯಂತರ ಜೈಲಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಹೇಳಿದ್ದಲ್ಲದೆ ಅವಾಚ್ಯ ಸಬ್ದಗಳಿಂದ ನಿಂದಿಸಿದ್ದಾನೆ. ಪೋಲಿಸರ ಸಮ್ಮುಖದಲ್ಲಿಯೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಪೋಲಿಸರು ನನ್ನನ್ನು ಬಂದಿಸಿ ಜೈಲಿಗೆ ಹಾಕಿದರು. ನಾನು ನಾಲ್ಕು ದಿನ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೇನೆ. ನನ್ನ ಮೇಲೆ ಹಲ್ಲೆ ಮಾಡಿದವರ ಮೇಲೆ ಇಂದು ದೂರು ನೀಡಿದ್ದೇನೆ. ಆರೋಪಿಗಳ ಮೇಲೆ ಕ್ರಮಕೈಗೊಳ್ಳಬೇಕು. ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ಗೊವಿಂದ ಗೌಡ ಮನವಿ ಮಾಡಿಕೊಂಡಿದ್ದಾರೆ.

                     ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ವೀರಭದ್ರ ನಾಯ್ಕ, ಸಮಾಜವಾದಿ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ನಾಗರಾಜ ನಾಯ್ಕ, ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಇಲಿಯಾಸ್, ರೈತ ಸಂಘದ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.

Be the first to comment

Leave a Reply

Your email address will not be published.


*