ರಾಜ್ಯ ಸುದ್ದಿಗಳು
ಮಸ್ಕಿ
ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಎಸ್.ಆರ್ ಬೊಮ್ಮಾಯಿಯವರು ತಾವು ಸಂವಿಧಾನಾತ್ಮಕವಾಗಿ ತೆಗೆದುಕೊಂಡಿರುವ ಪ್ರಮಾಣವಚನದ ವಿರುದ್ಧ ನೀಡಿರುವ ತಮ್ಮ ಹೇಳಿಕೆಯನ್ನು ಎಮ್ ಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ತಹಶೀಲ್ದಾರರಿಗೆ ಮನವಿ ಪತ್ರ ನೀಡಿದರು. ಈ ಮನವಿಯನ್ನು ಕರ್ನಾಟಕದ ಪ್ರಗತಿಪರ ಕಾಳಜಿವುಳ್ಳ ನಾಗರಿಕರು, ವಕೀಲರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು,ಕಾರ್ಯಕರ್ತರು, ಆರೋಗ್ಯ ವೃತ್ತಿಪರರು, ಪತ್ರಕರ್ತರು ಒಟ್ಟಾಗಿ ಸೇರಿ ತಾವು13 -10-21 ರಂದು ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ (ಮತೀಯ ಗುಂಡಾಗಿರಿ) ಗೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಈ ಪತ್ರ ಸಲ್ಲಿಸುತ್ತಿದ್ದೇವೆ. ದಿನಾಂಕ: 13 -10-21 ರಂದು ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಾವು ಮಾತನಾಡುತ್ತಾ “ಕಾನೂನು ಪಾಲನೆ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡೋದು ಸರ್ಕಾರದ ಕರ್ತವ್ಯ ಯುವಕರು ಕೂಡ ಸಾಮಾಜಿಕವಾಗಿ ಇದಕ್ಕೆ ಆಗದಂತೆ ನೋಡಿಕೊಳ್ಳಬೇಕು. ಮೊರಾಲಿಟಿ ಅನ್ನೋದು ಸಮಾಜದಲ್ಲಿ ಬೇಕಲ್ವಾ, ನೈತಿಕತೆ ಇಲ್ಲದೆ ಸಮಾಜದಲ್ಲಿ ಬದುಕೋಕೆ ಆಗುತ್ತಾ?, ಇವತ್ತು ನಾವು ನೈತಿಕತೆಯಿಲ್ಲದ ಬದುಕೋಕೆ ಆಗಲ್ಲ. ನಮ್ಮೆಲ್ಲರ ಸಂಬಂಧವನ್ನು ಶಾಂತಿ-ಸುವ್ಯವಸ್ಥೆ ನಿಂತಿರುವುದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್ ರಿಯಾಕ್ಷನ್ ಆಗುತ್ತದೆ. ಇದು ಸಹಜ”ಎಂದು ಹೇಳಿದ್ದೀರಿ.ಹಿಂದುತ್ವ ಸಂಘಟನೆಗಳ ಮಧ್ಯೆ ಗುಂಡಾಗಿರಿಯಿಂದ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದೆ. ಈ ಮತೀಯ ಸಂಘಟನೆಗಳು ಕ್ರೌರ್ಯದಿಂದ ಸಮಾಜದಲ್ಲಿ ಮಹಿಳೆಯರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು ಇನ್ನಷ್ಟು ಪ್ರತ್ಯೇಕಿಸಿ ಮೂಲೆಗುಂಪು ಮಾಡಲಾಗುತ್ತಿದೆ. ಇದು ಭಾತೃತ್ವ ಮತ್ತು ಜಾತ್ಯಾತೀತತೆಯ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧ ವಾಗಿದೆ. ‘ಎಸ್.ಆರ್. ಬೊಮ್ಮಾಯಿ ವಿರುದ್ಧ ಭಾರತದ ಒಕ್ಕೂಟ ಮತ್ತು ಇತರರು’ ಪ್ರಕರಣದಲ್ಲಿ ಜಾತ್ಯತೀತತೆಯು ಸಂವಿಧಾನದ ಮೂಲ ಅಂಶ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಹೀಗಿದ್ದರೂ ಸಹ ತಮ್ಮ ಸರ್ಕಾರ ಜಾತ್ಯಾತೀತತೆಗೆ ಧಕ್ಕೆಯನ್ನುಂಟು ಮಾಡುವ ಸಂಘಟನೆಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಈ ಹಿಂದುತ್ವ ಗುಂಪುಗಳ ಗುರಿಯಾಗಿರುವ ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಮಹಿಳೆಯರಿಗೆ ನೀವು ಸಾಂತ್ವನ ನೀಡಿಲ್ಲ. ಯಾವುದೇ ಬೆಂಬಲವನ್ನು ಒದಗಿಸಿಲ್ಲ. ಇಲ್ಲಿಯವರೆಗೆ ಯಾವುದೇ ರೀತಿಯ ಗುಂಪು ಹಿಂಸೆ ಮತ್ತು ಹಿಂಸಾಚಾರಕ್ಕೊಳಪಟ್ಟ ಸಂತ್ರಸ್ತರಿಗೆ ಪರಿಹಾರ ಯೋಜನೆಯನ್ನು ರೂಪಿಸಲಾಗಿಲ್ಲ. ಹಿಂಸಾಚಾರವನ್ನು ತಡೆಯಲು ತಮ್ಮ ಸರ್ಕಾರ ಜಿಲ್ಲಾಮಟ್ಟದ ಪೊಲೀಸ್ ಟಾಸ್ಕ್ ಫೋರ್ಸ್ ಅನ್ನು ರಚಿಸಿಲ್ಲ. ತೆಹಸೀನ್ ಪುನಾವಾಲಾ ಪ್ರಕರಣದಲ್ಲಿ, ಇಂತಹ ಹಿಂಸಾಚರವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದರು ಸಹ ತಾವು ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲವೇಕೆ? ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಅನುಬಂಧ-1 ಎಂದು ಈ ಪತ್ರದ ಜೊತೆ ಲಗತ್ತಿಸಲಾಗಿದೆ. ಇಂತಹ ಘಟನೆಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳದ ತಮ್ಮ ಸರ್ಕಾರ ನಿಸ್ಪಕ್ಷಪಾತವಾಗಿ ಸಲ್ಲಿಸಬೇಕಾದ ಪೊಲೀಸ್ ಇಲಾಖೆಯನ್ನುಸಹಕೋಮುವಾದೀಕರಣಗೊಳಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ ಗಳು ಬಿತ್ತರ ಮಾಡಿರುವ ಛಾಯಾಚಿತ್ರಗಳಿಂದ ಇದು ಸ್ಪಷ್ಟವಾಗಿದೆ.– ಕೇಸರಿ ಧರಿಸಿದ ಪೊಲೀಸ್ ಅಧಿಕಾರಿಗಳು ತಮ್ಮ ಧಾರ್ಮಿಕ ಆಧಾರದ ಪಕ್ಷಪಾತವನ್ನು ಬಹಿರಂಗವಾಗಿರುವ ಸಿಗರು ಇದು ಕರ್ನಾಟಕ ಪೊಲೀಸ್ ಕೈಪಿಡಿ 1965 ರ ಆದೇಶ 290 ರ ಸಂಪೂರ್ಣ ಉಲ್ಲಂಘನೆ. ಈ ಛಾಯಾಚಿತ್ರಗಳನ್ನು ವಿ ಪತ್ರದ ಜೊತೆ –2 ಎಂದು ಲಗತ್ತಿಸಲಾಗಿದೆ.ಕಾನೂನು ಪ್ರಕ್ರಿಯೆಗಳಿಗೆ ವಿರುದ್ಧವಾಗಿ ನಡೆಯುವವರು ಮತ್ತು ರಾಜ್ಯಾಧಿಕಾರವನ್ನು ಹೊಂದಿಲ್ಲದವರು ಕಾನೂನು ಅಥವಾ ಕಾನೂನು ಜಾರಿ ಸಂಸ್ಥೆಗಳು ಸ್ಥಾನದಲ್ಲಿ ಕೂರುವುದನ್ನು ಅನುಮತಿಸಲಾಗುವುದಿಲ್ಲ. ಬಹುಸಂಖ್ಯಾತ ಮತ್ತು ವೈವಿಧ್ಯತೆಯನ್ನು ಒಪ್ಪಿಕೊಳ್ಳದೆ ಮತಾಂಧತೆಯಿಂದ ಕೂಡಿದ ಒಂದು ಕಪೋಲಕಲ್ಪಿತ ವಿಧಾನದ ಮೂಲಕ ಗುರುತಿಸಿ ಕೊಳ್ಳುವುದರಿಂದ ಉಂಟಾಗುವ ಪ್ರಚೋಜನಕಾರಿ ಭಾವನೆ ಮತ್ತು ಪ್ರತಿಕ್ರಿಯಾತ್ಮಕ ಪ್ರತೀಕಾರದ ಮನೋಭಾವ ಮಾನವರನ್ನು ಅಮಾನವೀಯರನ್ನಾಗಿ ಪರಿವರ್ತಿಸುತ್ತದೆ. ಇಂತಹ ವಾತಾವರಣವು ತರ್ಕಬದ್ಧ ಚರ್ಚೆ, ತಾರ್ಕಿಕ ಚರ್ಚೆ ಮತ್ತು ಕಾನೂನಿನ ಉತ್ತಮ ಆಡಳಿತಕ್ಕೆ ತಡೆಯೊಡ್ಡುತ್ತದೆ ಮತ್ತು ಆ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ವಿವಿಧ ಸ್ವಾತಂತ್ರ್ಯಗಳಿಗೆ ಸ್ಪಷ್ಟ ಅಪಾಯವನ್ನು ತಂದೊಡ್ಡುತ್ತದೆ” ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಸ್ಕಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಯವರಿಗೆ ಕವಿತಾ.ಆರ್ ತಹಶೀಲ್ದಾರರು ಮಸ್ಕಿ ಇವರ ಮೂಲಕ ಮನವಿ ಮಾಡಿದರು.ಈ ಸಂದರ್ಭದಲ್ಲಿ ನಾಗರೆಡ್ಡಿ ದೇವರಮನಿ, ಚಂದ್ರಶೇಖರ್ ಕ್ಯಾತನಟ್ಟಿ, ಗಂಗಪ್ಪ ತೋರಣದಿನ್ನಿ, ದೇವರಾಜ್ ಮಡಿವಾಳ, ಬಸವರಾಜ್ ಹಿರೆದಿನ್ನಿ, ರವಿಕುಮಾರ್ ಸಂಕನೂರ್, ರಾಮಣ್ಣ ಮಸ್ಕಿ, ಚೆನ್ನಕೇಶವ, ಅಪ್ಪು ಕೊಠಾರಿ, ಕರಿಯಪ್ಪ, ದೇವಣ್ಣ, ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment