ಕರ್ನಾಟಕದ ಯುವರತ್ನನಿಗೆ ತಾಲೂಕಿನಾದ್ಯಂತ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ರಾಜ್ಯ ಸುದ್ದಿಗಳು 

ಮಸ್ಕಿ

ತಾಲೂಕಿನ ಪ್ರತಿ ಗ್ರಾಮಗಳಲ್ಲಿರುವ ವೃತ್ತಗಳು, ಸರ್ಕಲ್‍ಗಳು ಮತ್ತು ಗಲ್ಲಿ ಗಲ್ಲಿಗಳಲ್ಲೂ ಪವರ್‍ ಸ್ಟಾರ್ ಪುನೀತ್ ರಾಜ್‍ಕುಮಾರ್ ಭಾವಚಿತ್ರ ಪ್ರತಿಷ್ಠಾಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.ಕರಾಟೆ ಕಿಂಗ್ ಶಂಕರ್‍ ನಾಗ್ ಅವರು ಅಪಘಾತದಲ್ಲಿ ನಿಧನರಾದ ಸಂದರ್ಭದಲ್ಲಿ ರಾಜ್ಯದ ಪ್ರತಿ ಮೂಲೆಗಳಲ್ಲೂ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಶ್ರದ್ದಾಂಜಲಿ ಸಲ್ಲಿಸಿ ಗಮನ ಸೆಳೆದಿದ್ದರು.

CHETAN KENDULI

 

ಈ ಬೆಳವಣಿಗೆ ನಂತರ ವರನಟ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ರೆಬಲ್‍ಸ್ಟಾರ್ ಅಂಬರೀಷ್ ಅವರು ನಿಧನರಾದ ಸಂದರ್ಭದಲ್ಲೂ ಅಭಿಮಾನಿಗಳು ತಮ್ಮ ಗ್ರಾಮಗಳಲ್ಲೇ ಅವರ ಭಾವಚಿತ್ರಗಳಿಗೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದರು.ಕನ್ನಡದ ಮಹಾನ್ ನಟರಿಗೆ ದೊರೆತ ಅಭಿಮಾನಿಗಳ ಅಭಿಮಾನದ ಮಹಾಪೂರಾ ಪುನೀತ್ ರಾಜ್‍ಕುಮಾರ್ ಅವರಿಗೂ ದೊರೆತಿರುವುದು ಎಲ್ಲೆಡೆ ಕಂಡು ಬಂದಿದೆ. ಕನ್ನಡದ ಫ್ಯಾಮಿಲಿ ಸ್ಟಾರ್ ಎಂದು ಗುರುತಿಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ಅವರ ಅಕಾಲಿಕ ನಿಧನ ಇಡೀ ರಾಜ್ಯದ ಜನರನ್ನು ದಿಗ್ಬ್ರಮೆಗೊಳಿಸಿತ್ತು. ಪವರ್ ಸ್ಟಾರ್ ಇನ್ನು ನಮ್ಮೊಂದಿಗೆ ಇರುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಪುನೀತ್ ಅಭಿಮಾನಿಗಳು ತಮ್ಮ ಗ್ರಾಮಗಳಲ್ಲಿರುವ ವೃತ್ತಗಳಲ್ಲಿ ಪವರ್ ಸ್ಟಾರ್ ಭಾವಚಿತ್ರಗಳನ್ನು ಪ್ರತಿಷ್ಠಾಪಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪಟ್ಟಣದ ಪ್ರತಿ ವೃತ್ತಗಳಲ್ಲೂ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರ ಕಂಗೊಳಿಸುತ್ತಿರುವುದು ಕಂಡು ಬರುತ್ತಿದೆ. ಅಭಿಮಾನಿಗಳೆಂದರೆ ಬರೀ ಯುವಕರಷ್ಟೇ ಎಂಬ ಮಾತಿತ್ತು. ಆದರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮಹಿಳೆಯರು, ಮಕ್ಕಳು, ಯುವಕರು ಹಾಗೂ ವಯಸ್ಕ ಅಭಿಮಾನಿಗಳ ದಂಡೆ ಅಪ್ಪುವಿನ ಅಂತಿಮ ದರ್ಶನಕ್ಕೆ ಮಸ್ಕಿ ಸೇರಿದಂತೆ ತಾಲೂಕಿನ ಬಳಗಾನೂರ, ಮೆದಿಕಿನಾಳ, ಗುಡುದೂರು ಸೇರಿದಂತೆ ಇನ್ನಿತರೆ ಕೆಲವು ಹಳ್ಳಿಗಳಿಂದ ಪ್ರತ್ಯೇಕ ವಾಹನಗಳಲ್ಲಿ ಬೆಂಗಳೂರಿನತ್ತಾ ಹೋಗಿದ್ದಾರೆ. ಅಪ್ಪು ಇಹಲೋಕ ತ್ಯಜಿಸಿದರೂ ಅವರು ನಮ್ಮನ್ನ ಬಿಟ್ಟು ಎಲ್ಲೂ ಹೋಗಿಲ್ಲ, ನಮ್ಮ ಹೃದಯದಲ್ಲೇ ಇದ್ದಾರೆ ಎಂದೂ ಪವರ್ ಸ್ಟಾರ್ ಅಭಿಮಾನಿಗಳು ತಮ್ಮ ದುಃಖವನ್ನು ನೋವಿನಲ್ಲಿ ಕಣ್ಣೀರು ಹಾಕುತ್ತಾ ವ್ಯಕ್ತಪಡಿಸುತ್ತಿದ್ದಾರೆ.ನಮ್ಮ ಕರ್ನಾಟಕ ಸಿನಿಮಾ ರಂಗ ಮತ್ತು ನಮ್ಮ ಕುಟುಂಬದ ಯುವರತ್ನವನ್ನು ಕಳೆದುಕೊಂಡಿದ್ದೇವೆ ಎಂಬ ನೋವಿನ ಮಾತುಗಳು ಕೇಳಿಬರುತ್ತಿವೆ.

Be the first to comment

Leave a Reply

Your email address will not be published.


*