30 ವರ್ಷ ಹೋರಾಟ-30 ಸಾವಿರ ಗಿಡ ನೆಡುವ ಜಿಲ್ಲಾಮಟ್ಟದ ಕಾರ್ಯಕ್ರಮ ಜು. 18ಕ್ಕೆ ಭಟ್ಕಳದಲ್ಲಿ ಚಾಲನೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ

 ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ 30 ವರ್ಷವಾಗಿರುವ ಹಿನ್ನೆಲೆಯಲ್ಲಿ 130 ವರ್ಷ ಹೋರಾಟ- 30 ಸಾವಿರ ಗಿಡ ನೆಡುವ ಕಾರ್ಯಕ್ರಮದ ಅಂಗವಾಗಿ ಜು.18, ಭಾನುವಾರ ಮುಂಜಾನೆ 10:30 ಕ್ಕೆ ತಾಲೂಕಿನ ಬೆಳಕೆ ಗ್ರಾಮದ ಜನತಾ ಕಾಲೋನಿಯ ಗಜಾನನ ಯುವಕ ಸಂಘ ಆವರಣದಲ್ಲಿ ಜಿಲ್ಲಾ ಮಟ್ಟದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟನೆಯ ಚಾಲನೆಯನ್ನು ನಿವೃತ್ತ ಸೈನಿಕ ಅಕೃತ್ ನಾಗಪ್ಪ ನಾಯ್ಕ, ಚಿಪ್ತಿ ಮನೆ, ಹಡೀನ್ ಉದ್ಘಾಟಿಸಲಿದ್ದಾರೆ ಎಂದು ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ದೇವರಾಜ ಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CHETAN KENDULI

ಅರಣ್ಯ ರಕ್ಷಣೆ ಮತ್ತು ಪರಿಸರ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ 31 ವರ್ಷವಾಗಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಂದ ಜಿಲ್ಲಾದ್ಯಂತ ಪ್ರಸಕ್ತ ಮಳೆಗಾಲದಲ್ಲಿ ದೀರ್ಘಕಾಲದ ಬಾಳಿಕೆಯ 30 ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜರಗುವ ಕಾರ್ಯಕ್ರಮವನ್ನ ಭಟ್ಕಳದಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,

Be the first to comment

Leave a Reply

Your email address will not be published.


*