332 ಲಕ್ಷದ ವಿವಿಧ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಹಾಗೂ ಕ.ರಾ.ಆ.ನಾ.ಸ.ನಿ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ…!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಗ್ರಾಮೀಣ ಮಟ್ಟದಲ್ಲಿ ಆಗುತ್ತಿರುವ ರಸ್ತೆ ಕಾಮಗಾರಿಗಳಿಗೆ ಅಕ್ಕಪಕ್ಕದಲ್ಲಿರುವ ಜಮೀನು ಮಾಲಿಕರು ಸಹಕರಿಸಿ ಬಂದಂತಹ ರಸ್ತೆ ಕಾಮಗಾರಿಯನ್ನು ಗೂಣಮಟ್ಟ ಹಾಗೂ ಉಪಯುಕ್ತವಾಗುವಂತೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ತಾಲೂಕಿನ ಮಡಿಕೇಶ್ವರ ಹಾಗೂ ಪಡೇಕನೂರ ಗ್ರಾಮದಲ್ಲಿ ಢಾಂಬರಿಕರಣ ಹಾಗೂ ಸಿಸಿರಸ್ತೆಗಳ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳನ್ನು ರಹವಾನೆ ಮಾಡಲು ರಸ್ತೆಗಾಗಿ ಪರಿತಪಿಸುತ್ತಿದ್ದರು. ಆದರೆ ಇಂದಿನ ದಿನದಲ್ಲಿ ರಸ್ತೆಗೆ ನಮ್ಮ ಜಮೀನು ಎಲ್ಲಿ ಹೋಗುತ್ತದೆಯೋ ಎಂಬ ಕಲ್ಪನೆ ಮೂಡಿಬಂದಿದೆ. ಆದರೆ ರಸ್ತೆಗೆ ಸುಸಜ್ಜಿತವಾದ ಜಾಗವನ್ನು ಒದಗಿಸಿದರೆ ಮುಂದಿನ ತಲೆಮಾರಿಗೂ ರಸ್ತೆಯು ಉಪಯುಕ್ತವಾಗಲಿದೆ ಎನ್ನುವುದು ಅರಿತುಕೊಳ್ಳಬೇಕಿದೆ ಎಂದು ಅವರು ಗ್ರಾಮೀಣ ಜನರಿಗೆಕಿವಿ ಮಾತು ಹೇಳಿದರು.


ಕೃಷಿ ಕೈಗಾರಿಕೆಗೆ ಮಹತ್ವ:
ದೇಶದ ರೈತರಿಗೆ ಹಾಗೂ ಶಿಕ್ಷಣವಂತ ಯುವಕರ ದೂರದೃಷ್ಠಿಯನ್ನು ಇಟ್ಟುಕೊಂಡು ಪ್ರಧಾನಿ ಮೋದಿಯವರು ಕೃಷಿ ಕೈಗಾರಿಕೆ ಹೆಚ್ಚಿನ ಮಹತ್ವ ನೀಡಬೇಕು ಎಂಬ ಯೋಜನೆಯನ್ನು ಮುದ್ದೇಬಿಹಾಳ ಕ್ಷೇತ್ರಕ್ಕೂ ತಂದು ಮುಂದಿನ 2024ರಲ್ಲಿ ಕೃಷಿ ಕೈಗಾರಿಕೆಯಡಿಯಲ್ಲಿ 10 ಸಾವಿರ ಉದ್ಯೋಗ ಸೃಷ್ಠಿಯ ಯೋಜನೆಯನ್ನು ಈಗಾಗಲೇ ಹಾಕಲಾಗಿದೆ. ಸ್ಥಳೀಯ ರೈತರಿಗೆ ನೂತನ ಕೃಷಿ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿದಿ ಅವರು ಬೆಳೆದಂತಹ ಬೆಳೆಗಳಿಗೆ ಹೆಚ್ಚಿನ ಬೆಂಬಲ ಸಿಗಬೇಕು ಎನ್ನುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು.


332 ಲಕ್ಷದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ:
ಮುದ್ದೆಬಿಹಾಳ ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ಅಂದಾಜು 60 ಲಕ್ಷದ ಬ್ಯಾಕೋಡ ಗ್ರಾಮದಿಂದ ಮಡಿಕೇಶ್ವರ ಗ್ರಾಮದವರೆಗಿನ 10.5ಕಿ.ಮೀ. ರಸ್ತೆ ಸುಧಾರಣೆಯಗೆ, ಪಡೆಕನೂರ ಗ್ರಾಮದಲ್ಲಿ ಅಂದಾಜು 62 ಲಕ್ಷದ ಪಡೆಕನೂರ ಗ್ರಾಮದಿಂದ ಹುಲಬೆಂಚಿ ಗ್ರಾಮದವರೆಗೆ 1.3ಕಿಮೀ ಡಾಂಬರೀಕರಣ ರಸ್ತೆ ಹಾಗೂ ಪಡೆಕನೂರ ಗ್ರಾಮದಿಂದ ಕೊಣ್ಣೂರ ಗ್ರಾಮದ 2.8ಕಿಮೀ ಡಾಂಬರೀಕರಣ ರಸ್ತೆಗೆ ಅಂದಾಜು 210 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸರಕಾರಿ ನ್ಯಾಯವಾದಿ ಎಂ.ಆರ್.ಪಾಟೀಲ, ಸಿಪಿಐ ಆನಂದ ಆಘ್ಮೋರೆ, ತಾಳಿಕೋಟಿ ಪಿಎಸ್‌ಐ ಶಿವಾಜಿ ಪವಾರ, ಸಿದ್ದನಗೌಡ ವನಹಳ್ಳಿ(ಬಿರಾದಾರ), ಶಿವಶಂಕರಾಯ ಬಿರಾದಾರ, ಸಿದ್ದನಗೌಡ ಜಾಲಿಕಟ್ಟಿ, ರಾಮನಗೌಡ ಕರೆಕಳ್ಳಿ, ಶಿವು ಬಸರಕೋಡ, ಮಲ್ಲನಗೌ ಕರೇಕಳ್ಳಿ, ಹಣಮಂತ್ರಾಯ ಜಾಲಿಕಟ್ಟಿ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಗ್ರಾಮದ ಪ್ರಮುಖರಿದ್ದರು.

 

Be the first to comment

Leave a Reply

Your email address will not be published.


*