ಇನ್ನೂ ಮುಂದೆ ದೊರಕಲಿಗೆ ಪ್ರತಿ ತಿಂಗಳಗೆ ನೀಡುವ ಪಿಡಿಎಗೆ ತೊಗರಿ ಬೆಳೆ..!!! ರಾಜ್ಯ ಆ.ನಾ. ಸಚಿವ ಉಮೇಶ ಕತ್ತಿಗೆ ಬೆಂಬಲಿಸಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಉತ್ತರ ಕರ್ನಾಟಕದ ಬಿದರ, ಯಾದಗಿರಿ, ರಾಯಚೂರ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ತೊಗರಿ ಬೆಳೆ ಬೆಳೆಯುತ್ತಾರೆ. ಆದ್ದರಿಂದ ಬಡವರಿಗೆ ಪಿಡಿಎ ವ್ಯವಸ್ಥೆಯಲ್ಲಿ ತೊಗರಿ ಬೆಳೆಯನ್ನು ಪ್ರತಿ ತಿಂಗಳು ನೀಡಬೇಕು ಎನ್ನುವ ಯೋಜನೆಯನ್ನು ಮಾಡಿರುವ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಇಲಾಕೆ ಸಚಿವ ಉಮೇಶ ಕತ್ತಿಯವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜ ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.



ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಿಡಿಎ ಯೋಜನೆಯಡಿಯಲ್ಲಿ ತೊಗರಿ ಬೆಳೆ ನೀಡುವ ಬಗ್ಗೆ ಸರಕಾರದ ಮಟ್ಟದ ಪೂರ್ವ ಬಜೇಟ್ ಸಭೆಯಲ್ಲಿ ಯೋಜಯನ್ನು ಅನುಷ್ಠಾನ ಮಾಡಿಸಲು ಅಂಕಿಸಂಖ್ಯೆಯ ಮಾಹಿತಿಯನ್ನೂ ನೀಡಲಾಗಿದೆ. ಇದರ ಬಗ್ಗೆ ಬಜೇಟ್ ಮಂಡನೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿಯೂ ಮಾಡಲಾಗಿದೆ ಎಂದು ಅವರು ಹೇಳಿದರು.


ಜೋಳ ಬೆಳೆಯನ್ನೂ ನೀಡುವ ನಿರ್ಧಾರ:
ಪ್ರತಿ ತಿಂಗಳು ಸರಕಾರದಿಂದ ನೀಡುವ ದಿನಸೆಯಲ್ಲಿ ತೊಗರಿ ಬೆಳೆ ಜೊತೆಗೆ ಆಯಾ ಕ್ಷೇತ್ರದಲ್ಲಿ ಬೆಡಿಕೆಯಾಗಿರುವ ಬೆಳೆಯನ್ನು ನೀಡಿದರೆ ರಾಜ್ಯದ ಬಡ ಜನರಿಗೆ ಹೆಚ್ಚಿನ ಉಪಯೋಗವಾಗಲಿದೆ. ಅಲ್ಲದೇ ಈಗಾಗಲೇ ಉತ್ತರ ಕರ್ನಾಟಕ ಸೇರಿ ಒಟ್ಟು 15 ಜಿಲ್ಲೆಗಳಲ್ಲಿ ವರ್ಷಕ್ಕೆ ಅಂದಾಜು 12 ಲಕ್ಷ ಮೇಟ್ರಿಕ್‌ಟನ್ ತೊಗರಿ ಬೆಳೆ ಬೆಳೆಯುತ್ತಾರೆ. ಇದರೊಂದಿಗೆ ಉತ್ತರ ಕರ್ನಾಟಕದಲ್ಲಿ ಬೇಡಿಕೆಯಾಗಿರುವ ಜೋಳ, ಧಕ್ಷಿಣದ ಕುಚಲಕ್ಕಿ ಬೆಳೆ ಹಾಗೂ ರಾಗಿಯನ್ನು ಬೆಳೆಗಳನ್ನು ಪ್ರತಿ ತಿಂಗಳೂ ಬಡ ಜನರಿಗೆ ಒದಗಿಸಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.


ರೈತರಿಗೂ ಹೆಚ್ಚಲಾಗುವ ಬೆಂಬಲ ಬೆಲೆ:
ರಾಜ್ಯದಲ್ಲಿ ಪಿಡಿಎ ಮೂಲಕ ಪ್ರತಿ ತಿಂಗಳಿಗೆ ನೀಡುವ ದಿನಸೆಯಲ್ಲಿ ತೊಗರಿ, ಜೋಳ, ರಾಗಿ, ಕುಚಲಕ್ಕಿಯನ್ನು ನೀಡಿದರೆ ಉತ್ತರ ಕರ್ನಾಟಕದಲ್ಲಿ ಬಿತ್ತನೆ ಪ್ರಮಾಣದಲ್ಲಿ ಕಡಿಮೆಯಾಗಿರುವ ಜೋಳ ಬೆಳೆ, ದಕ್ಷಿಣದ ಕುಚಲಕ್ಕಿ ಬೆಳೆಗೆ ಹೆಚ್ಚಿನ ಬೆಂಬಲ ಬೆಳೆ ಸಿಗುವಂತಾಗಿ ರೈತರಿಗೂ ಅನುಕೂಲವಾಗಿದೆ ಎಂದು ಶಾಸಕರು ಹೇಳಿದರು.

Be the first to comment

Leave a Reply

Your email address will not be published.


*