ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ವಿಶ್ವವೇ ತತ್ತರಿಸಿದ್ದ ಕೋವಿಡ್-19 ರೋಗಕ್ಕೆ ಸಾಕಷ್ಟು ದೇಶಗಳು ಲಸಿಕೆಯನ್ನು ಕಂಡಿದ್ದವು. ಆದರೆ ಅವರು ಲಸಿಕೆಯನ್ನು ಉಚಿತವಾಗಿ ನೆರೆ ರಾಷ್ಟçಗಳಿಗೆ ನೀಡುವ ಮನಸ್ಸು ಮಾಡಲಿಲ್ಲ. ಆದರೆ ಭಾರತ ದೇಶದ ಪ್ರಧಾನಿ ಬಡರಾಷ್ಟçವಾಗಿರುವ ಇಂಡೋನೆಸಿಯಾ ರಾಷ್ಟçಕ್ಕೆ ಭಾರತದಲ್ಲಿ ತಯ್ಯಾರಿಸಿದ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ನೀಡಿದ್ದು ದೇಶದ ಗಣ್ಯತೆ ವಿಶ್ವಕ್ಕೆ ತಿಳಿದಿದೆ ಎಂದು ಶಾಸಕ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾ ಆಡಳಿತವತಿಯಿಂದ ಹಮ್ಮಿಕೊಳ್ಳಲಾದ 72ನೇ ಗಣರಾಜ್ಯೋತ್ಸವ ನಿಮಿತ್ಯವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತ ದೇಶಕ್ಕೆ ಮೋದಿಯವರಂತಹ ಪ್ರಧಾನಿ ಸಿಕ್ಕಿದ್ದು ಭಾರತ ದೇಶದ ನಿಜವಾದ ಶಕ್ತಿಯನ್ನು ವಿಶ್ವಕ್ಕೆ ತಿಳಿಸುವಂತಾಗಿದೆ ಎಂದು ಅವರು ಹೇಳಿದರು.
ದೇಶದ ಜಮ್ಮು-ಕಾಶ್ಮೀರದ ಲಡಾಖನಲ್ಲಿ ವಿರೋಧಿ ಪಾಕಿಸ್ತಾನದ ಸೈನಿಕರು ವೇಷ ಬದಲಿಸಿ ಒಳನುಗ್ಗಿ ದಾಳಿಗೆ ಯತ್ನಿಸಿದ ಸಂದರ್ಭದಲ್ಲಿ ಅಲ್ಲಿನ ರಾಜ ದೇಶದ ಗೃಹ ಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಲಡಾಖನ್ನು ಭಾರತ ದೇಶಕ್ಕೆ ವಿಲೀನ ಮಾಡುವ ಒಪ್ಪಿಗೆ ಪತ್ರ ನೀಡಿದ 24 ಗಂಟೆಯಲ್ಲಿ ವಿರೋಧಿ ದೇಶದ ಸೈನಿಕರನ್ನು ಅಲ್ಲಿಂದ ಕಾಲ್ಕಿತ್ತುವಂತೆ ಮಾಡಿ ಲಡಾಖ ಕ್ಷೇತ್ರವನ್ನು ಉಳಿಸಿದ ಘಟನೆ ನೀಜಕ್ಕೂ ಶ್ಲಾಘನೀಯವಾದದ್ದು. ಆದರೆ ಅದೇ ಸಂದರ್ಭದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸೂಚನೆ ನೀಡಿದ್ದು 70 ವರ್ಷದ ಹಿಂದಿನ ರಾಜಕಾರಣಿಗಳು ಸರ್ದಾರ ವಲ್ಲಬಾಯಿ ಪಟೇಲ ಅವರು ವಿರೋಧಿಸಿದ ದೇಶದ ಎರಡು ಸಂವಿಧಾನದ ನೀತಿಯನ್ನು ಜಾರಿಗೆ ತಂದರು. ಆದರೆ ಈಗ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಮೋದಿಯವರು ಹಾಗೂ ಗೃಹ ಸಚಿವ ಅಮೀತ ಶಾ ಅವರು ಭಾರತ ದೇಶ ಒಂದೆ ಇದಕ್ಕೆ ಸಂವಿಧಾನವೂ ಒಂದೇ ಎಂಬುವುದನ್ನು ಸ್ಪಷ್ಠಪಡಿಸಿ ಅಲ್ಲಿನ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಮೂಲಕ ಜಮ್ಮು-ಕಾಶ್ಮೀರದ ವಿಶೇಷ 370ಕಲಂನ ಸಂವಿಧಾನವನ್ನು ರದ್ದು ಪಡಿಸಿದ ಜಮ್ಮು-ಕಾಶ್ಮೀರವು ಸಂಪೂರ್ಣ ಭಾರತ ದೇಶದ ರಾಜ್ಯ ಎಂಬುವುದನ್ನು ತಿಳಿಸಿಕೊಟ್ಟು ಹಿಂದೆಂದೂ ಸರಕಾರದ ಕಛೇರಿಯ ಮೇಲೆ ಹಾರದ ಭಾರತದ ರಾಷ್ಟ್ರಧ್ವಜವನ್ನು ಧ್ವಜಾರೋಹಣ ಆಗುವಂತೆ ಮಾಡಿಕೊಟ್ಟು ದೇಶಕ್ಕೆ ಬಹುದೊಡ್ಡ ಶಕ್ತಿಯನ್ನು ಒದಗಿಸಿದಂತಾಗಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ, ಸದಸ್ಯರಾದ ಚನ್ನಪ್ಪ ಕಂಠಿ, ಸದಾಶಿವ ಮಾಗಿ, ಅಶೋಕ ವನಹಳ್ಳಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಪಾಟೀಲ, ಮೆಹಬೂಬ ಗೊಳಸಂಗಿ, ಬಸಪ್ಪ ತಟ್ಟಿ, ರಿಯಾಜ ಢವಳಗಿ, ತಾಪಂ ಇಓ ಶಶಿಕಾಂತ ಶಿವಪೂರೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೇಶ ಜೇವರಿಗಿ, ಸಿಪಿಐ ಆನಂದ ವಾಘ್ಮೋಡೆ ಇದ್ದರು. ಟಿ.ಡಿ.ಲಮಾಣಿ ನಿರೂಪಿಸಿ ವಂದಿಸಿದರು.
Be the first to comment