ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ಯ ಆಸ್ಪತ್ರೆಯ ಬಾಣಂತರಿಗೆ ಹಣ್ಣು ವಿತರಣೆ ಮಾಡಿದ ಮುದ್ದೇಬಿಹಾಳ ಬಿಜೆಪಿ ಮಹಿಳಾ ಕಾರ್ಯಕರ್ತೆಯರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ರವಿವಾರ ಸಂಜೆ ಬಿಜೆಪಿಯ ಮಹಿಳಾ ಧುರೀಣೆಯರು ಇಲ್ಲಿನ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಬಾಣಂತಿಯರಿಗೆ ಹಣ್ಣು ಹಂಪಲು ಬ್ರೆಡ್ ಬಿಸ್ಕೆಟ್ ವಿತರಿಸಿದರು.



ಈ ವೇಳೆ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರು, ಶಾಸಕರೂ ಆಗಿರುವ ಎ.ಎಸ್.ಪಾಟೀಲ ನಡಹಳ್ಳಿ, ಅವರ ಪತ್ನಿ ಸಮಾಜಸೇವಕಿ ಮಹಾದೇವಿ ಪಾಟೀಲ ನಡಹಳ್ಳಿ ಅವರ ಸಲಹೆಯ ಮೇರೆಗೆ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಹೆಣ್ಣು ಮಕ್ಕಳ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು ಎಂದು ತಿಳಿಸಿದರು.



ಬಿಜೆಪಿ ಧುರೀಣೆಯರಾದ ಬಸಮ್ಮ ಸಿದರಡ್ಡಿ, ಶಿಕ್ಷಕಿ ಡಾ| ಸವಿತಾ ಒಡೆಯರ್(ಗುರುವಿನ್), ನರಸಮ್ಮ ಗುಬಚಿ, ಮಂಜುಳಾ ಕೆಸರಟ್ಟಿ, ಶಿಲ್ಪಾ ಶರ್ಮಾ ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.

Be the first to comment

Leave a Reply

Your email address will not be published.


*