ತನ್ನ ಸ್ವಂತ ಹಣದಲ್ಲಿ ಜಾಲಿಯಲ್ಲಿ ಆಟೋ ರಿಕ್ಷಾ ನಿಲ್ದಾಣ ನಿರ್ಮಿಸಿ ಕೊಟ್ಟ ಶಾಸಕ ಸುನೀಲ್ ನಾಯ್ಕ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ಭಟ್ಕಳ ಜಾಲಿ ದೇವಿನಗರ ೧ನೇ ಕ್ರಾಸ್‌ನಲ್ಲಿರುವ ರಿಕ್ಷಾ ನಿಲ್ದಾಣಕ್ಕೆ ಶಾಸಕ ಸುನೀಲ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ಚಾವಣಿ ಹೊದಿಕೆ ಹಾಕಿಸಿಕೊಟ್ಟು ಚಾಲಕರಿಗೆ ನೆರವಾಗಿದ್ದಾರೆ. ಇದರ ಉದ್ಘಾಟನೆಯನ್ನು ನೆರವೇರಿಸಿದರು.ಉದ್ಘಾಟನೆ ಬಳಿಕ ಮಾತನಾಡಿದ ಶಾಸಕ ಸುನೀಲ, ಬಾಲ್ಯದಿಂದಲೂ ಆಟೊ ಚಾಲಕರ ಮೇಲೆ ನನಗೆ ಪ್ರೀತಿ, ನಾನು ಶಾಲೆಗೆ ಹೋಗಿ ಬರುವ ವೇಳೆ ಹಣ ಪಡೆಯದೆ ಅದೆಷ್ಟೋ ಆಟೋ ಚಾಲಕರು ನನ್ನನ್ನು ಮನೆಗೆ ತಲುಪಿಸುತ್ತಿದ್ದರು.ಅಂದಿನಿAದ ಆಟ ಚಾಲಕರಿಗೆ ಏನಾದರೊಂದು ಸಹಾಯ ಕಲ್ಪಿಸಬೇಕೆಂಬುವುದು ನನ್ನ ಮನಸ್ಸಿನಲಿತ್ತು. ಅದು ನಾನು ಶಾಸಕನಾದ ಬಳಿಕ ನೆರವೇರುತ್ತಿದೆ. ಕುಂದಾಪುರ, ಉಡುಪಿ ಹಾಗೂ ಮಂಗಳೂರು ಭಾಗಗಳಲ್ಲಿ ಆಟೋ ನಿಲ್ದಾಣದ ಚಾವಣಿ ಮಾಡಿಕೊಡುವುದನ್ನು ನೋಡುತ್ತಿದ್ದೆ. ಅದನ್ನು ಗಮನದಲ್ಲಿಟ್ಟುಕೊಂಡು ನನ್ನ ಕ್ಷೇತ್ರದ ಆಟೋ ಚಾಲಕರಿಗೂ ಇದೇ ರೀತಿ ಸೌಲಭ್ಯ ಒದಗಿಸಿಕೊಡುವ ಉದ್ದೇಶದಿಂದ ಇಂತಹ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇನೆ. ಎಂದರು.

CHETAN KENDULI

ಮುAದಿನ ದಿನಗಳಲ್ಲಿ ರಿಕ್ಷಾ ಚಾಲಕರಿಗೆ ಯಾವುದೇಸಮಸ್ಯೆಯಾದಲ್ಲಿ ಶೀಘ್ರದಲ್ಲಿ ಸ್ಪಂದನೆ ಮಾಡುತ್ತೇನೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ೯ ಕಡೆಯಲ್ಲಿ ರಿಕ್ಷಾ ನಿಲ್ದಾಣದ ಚಾವಣಿ ನಿರ್ಮಿಸಿಕೊಟ್ಟಿದ್ದೇನೆ. ಮುಂದಿನ ದಿನದಲ್ಲಿ ತಾಲೂಕಿನ ಎಲ್ಲೇ ಆಟೋ ರಿಕ್ಷಾ ನಿಲ್ದಾಣದ ಚಾವಣಿಯ ಅವಶ್ಯಕತೆ ಇದ್ದಲ್ಲಿ ನಿರ್ಮಿಸಿಕೊಡುವಲ್ಲಿ ಸಿದ್ಧನಿದ್ದೇನೆ ಎಂದರು.ಈ ಆಟೋ ರಿಕ್ಷಾ ನಿಲ್ದಾಣ ಮಾಡುವ ವೇಳೆ ಇಲಾಖೆಗಳಿಂದ ಅನೇಕ ಕರೆಗಳು ಬಂದಿದ್ದವು. ಆದರೆ ಇದು ಸರ್ಕಾರದ ಜಾಗವಾಗಿದ್ದು, ಇಲ್ಲಿ ಅನೇಕ ವರ್ಷಗಳಿಂದ ರಿಕ್ಷಾ ನಿಲ್ಲುತ್ತಿದೆ. ಅದನ್ನು ಗಮನಿಸಿ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಈಗ ಈ ಆಟೋ ನಿಲ್ದಾಣದ ಚಾವಣಿ ನಿರ್ಮಿಸಿಕೊಟ್ಟಿದ್ದೇನೆ ಎಂದರು.

ಆಟೋ ರಿಕ್ಷಾ ಮಾಲಕ ಹಾಗೂ ಚಾಲಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ, ತಾಲೂಕಿನ ವಿವಿಧೆಡೆ ಈಗಾಗಲೇ ಶಾಸಕರು ತಮ್ಮ ವೈಯಕ್ತಿಕ ವೆಚ್ಚದಲ್ಲಿ ಆಟೋ ನಿಲ್ದಾಣದ ಚಾವಣಿ ನಿರ್ಮಿಸಿಕೊಟ್ಟಿದ್ದಾರೆ. ಹೀಗೆ ತಾಲೂಕಿನ ಇನ್ನು ಅನೇಕ ಕಡೆಗಳಲ್ಲಿ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಆಟೋ ನಿಲ್ದಾಣದ ಮೇಲ್ಬಾವಣಿ ನಿರ್ಮಿಸಿಕೊಡಬೇಕು ಹಾಗೂ ತಮ್ಮ ಅವಧಿಯಲ್ಲಿ ಆಟೋ ಚಾಲಕರ ಅನೇಕ ಬೇಡಿಕೆಗಳಿದ್ದು, ಆ ಬೇಡಿಕೆಗಳನ್ನೆಲ್ಲ ಈಡೇರಿಸಬೇಕು ಎಂದರು.ನAತರ ಶಾಸಕ ಸುನೀಲ ನಾಯ್ಕ ಖುದ್ದು ತಾವೇ ರಿಕ್ಷಾ ಚಲಾಯಿಸಿ ಉಳಿದ ಎಲ್ಲಾ ಆಟೋ ಚಾಲಕರ ಗಮನ ಸೆಳೆದರು. ಶಾಸಕ ಸುನೀಲ ನಾಯ್ಕ ಅವರಿಗೆ ಆಟೋ ರಿಕ್ಷಾ ಚಾಲಕರ ಸಂಘದಿAದ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ರವಿ ನಾಯ್ಕ ಜಾಲಿ, ವಿಠಲ್ ನಾಯ್ಕ, ನಾಗರಾಜ ನಾಯ್ಕ, ದಯಾನಂದ ನಾಯ್ಕ, ಫಯಾಜ್ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಹರೀಶ್ ನಾಯ್ಕ ನಿರೂಪಿಸಿದ್ದರು

Be the first to comment

Leave a Reply

Your email address will not be published.


*