ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ಯ ಮಾರ್ಟವೊಂದರ ಮಹಿಳಾ ಕಾರ್ಮಿಕರಿಗೆ ಹಣ್ಣು ಹಂಪಲು ವಿತರಿಸಿದ ಮಹಾದೇವಿ ಪಾಟೀಲ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ರಾಜ್ಯ ಸುದ್ದಿಗಳು

ಬೆಂಗಳೂರು:

CHETAN KENDULI

ಹೆಣ್ಣು ಮಕ್ಕಳು ಸಂಸಾರಕ್ಕೆ ಮಾತ್ರವಲ್ಲದೆ ಕುಟುಂಬಕ್ಕೆ, ಸಮಾಜಕ್ಕೆ ಕಣ್ಣು ಇದ್ದಂತೆ. ಎಲ್ಲರೂ ಹೆಣ್ಣು ಮಕ್ಕಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹೆಣ್ಣೆಂದು ಸಂಕುಚಿತ ಮನೋಭಾವ ತೋರಿಸದೆ ಆಕೆಯ ಸಮಗ್ರ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಪತ್ನಿ, ಸಮಾಜಸೇವಕಿ ಮಹಾದೇವಿ ಪಾಟೀಲ ಹೇಳಿದ್ದಾರೆ.



ಬೆಂಗಳೂರಿನ ಮಾರ್ಟ ಒಂದರಲ್ಲಿ ಕೆಲಸ ಮಾಡುವ ಬಡ ಕುಟುಂಬಕ್ಕೆ ಸೇರಿದ ಮಹಿಳಾ ಸಿಬ್ಬಂದಿಗೆ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ಯ ರವಿವಾರ ಹಣ್ಣು ಹಂಪಲು, ಬಿಸ್ಕೆಟ್ ಮುಂತಾದವುಗಳ ಕಿಟ್ ವಿತರಿಸಿ, ಅಲ್ಲಿಂದಲೇ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಆಧುನಿಕ ಸಮಾಜ ಹೆಣ್ಣು ಮಕ್ಕಳ ಬಗ್ಗೆ ಹೊಂದಿರುವ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು. ಆಕೆಗೆ ಉತ್ತಮ ಶಿಕ್ಷಣ ಕೊಟ್ಟು ಎಲ್ಲರಂತೆ ಆಕೆ ತನ್ನ ಕಾಲ ಮೇಲೆ ನಿಂತು ಕುಟುಂಬ ನಿರ್ವಹಿಸುವ ವಾತಾವರಣ ಸೃಷ್ಟಿಯಾಗಬೇಕು. ಭ್ರೂಣ ಹತ್ಯೆ ಎನ್ನುವುದು ಮಹಾಪಾಪ ಎನ್ನುವುದನ್ನು ಅರಿತು ಹೆಣ್ಣು ಮಗುವಿನ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಕೊರೊನಾ ಮಹಾಮಾರಿ ಸಂದರ್ಭ ನನ್ನ ಪತಿ ಶಾಸಕ ನಡಹಳ್ಳಿಯವರೊಂದಿಗೆ ಸೇರಿಕೊಂಡು ಲಕ್ಷಾಂತರ ಬಡವರಿಗೆ, ಬಡ ಹೆಣ್ಣುಮಕ್ಕಳಿಗೆ ನೆರವು ನೀಡಿದ್ದೇವೆ. ಮುದ್ದೇಬಿಹಾಳ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರಗಳಲ್ಲಿರುವ ಬಡವರು, ಬಡ ಹೆಣ್ಣುಮಕ್ಕಳಿಗೆ ನಮ್ಮ ಸೇವೆ ಮುಡಿಪಾಗಿದೆ. ಯಾರೇ ಕಷ್ಟದಲ್ಲಿದ್ದರೂ ಸ್ಪಂಧಿಸುವ, ಅವರ ಕಷ್ಟಕ್ಕೆ ಮಿಡಿಯುವ ಮನೋಭಾವ ನಮ್ಮದು. ಬೆಂಗಳೂರಿನಂತಹ ಮಹಾನಗರದಲ್ಲಿ ದೊಡ್ಡ ದೊಡ್ಡ ಮಾರ್ಟಗಳಲ್ಲಿ ಅನೇಕ ಬಡ ಹೆಣ್ಣುಮಕ್ಕಳು ಹೊಟ್ಟೆಪಾಡಿಗಾಗಿ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿರುವುದನ್ನು ನಾವು ನೋಡಿದ್ದೇವೆ. ಹಲವರ ಕಷ್ಟಕ್ಕೆ ಸ್ಪಂಧಿಸಿದ್ದೇವೆ. ಮುಂದಿನ ದಿನಗಳಲ್ಲೂ ಬಡವರ ಕಷ್ಟಕ್ಕೆ ಮಿಡಿಯುವ ನಮ್ಮ ಧೋರಣೆ ಮುಂದುವರೆಯುತ್ತದೆ ಎಂದರು. ಮುದ್ದೇಬಿಹಾಳ ಪಟ್ಟಣದಲ್ಲೂ ನಮ್ಮ ಮಹಿಳಾ ಧುರೀಣೆಯರಿಗೆ ಹೆಣ್ಣು ಮಕ್ಕಳ ದಿನವನ್ನು ವಿಶಿಷ್ಟವಾಗಿ ಆಚರಿಸುವಂತೆ, ಹಣ್ಣುಹಂಪಲು ಹಂಚುವಂತೆ ತಿಳಿಸಿದ್ದೇನೆ ಎಂದರು.

Be the first to comment

Leave a Reply

Your email address will not be published.


*