ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಅವ್ಯವಹಾರ…!!! ಸೂಕ್ತ ಕ್ರಮಕ್ಕೆ ಕೈಗೊಳ್ಳುವವರೆಗೂ 3 ಹಂತದ ಹೋರಾಟಕ್ಕೆ ಮುಂದಾದ ಗ್ರಾಮಸ್ಥರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್‌ನಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯು ಪಂಚಾಯತಿಯಲ್ಲಿ ಅಕ್ರಮ ಎಸೆಗುತ್ತಿದ್ದು ಆಪರೇಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಮೂರು ಹಂತ ಹೋರಾಟಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಹೋರಾಟಕ್ಕೆ ಸೂಕ್ತ ಬಂದುಬಸ್ತಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಬಿಜ್ಜೂರ ಗ್ರಾಮ ಪಂಚಾಯತಿಯಲ್ಲಿ ಸರಕಾರದಿಂದ ಬಂದಂತಹ ಅನುದಾನವನ್ನು ಸಂಪೂರ್ಣ ದುರ್ಭಳಕೆ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ಪ್ರಶ್ನಿಸಲು ಹೋದರೆ ಹಾರಿಕೆ ಉತ್ತರವನ್ನು ನೀಡುತ್ತಾರೆ. ಅಲ್ಲದೇ ಇವರ ವಿರುದ್ಧ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.



ಪಂಚಾಯತಿ ವತಿಯಿಂದ ಬಡವರಿಗೆ ಬಂದಂತಹ ಮನೆಗಳಲ್ಲಿ, ಪ್ಲಾಟ್‌ಗಳಲ್ಲಿ ಹಣದ ಗೋಲಮಾಲ ಮಾಡಿರುವ ಕಂಪ್ಯೂಟರ್ ಆಪರೇಟರ್ ಕಳೆದ 4 ವರ್ಷಗಳಿಂದ ಲಕ್ಷಾಧಿಪತಿಯಾಗಿದ್ದಾನೆ. ಅಲ್ಲದೇ ಇವನ ಬಲಿಷ್ಠ ವ್ಯಕ್ತಿಯ ಕುಮ್ಮಕ್ಕಿರುವುದು ತಿಳಿದುಬಂದಿದ್ದು ಕೂಡಲೇ ಇವನನ್ನು ಪಂಚಾಯತಿಯಿಂದ ತೆಗೆದುಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಮಸ್ಯೆಯನ್ನು ಶಾಸಕರ ಗಮನಕ್ಕೂ ತಂದ ಗ್ರಾಮಸ್ಥರು:
ಬಿಜ್ಜೂರ ಪಂಚಾಯತಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಈಗಾಗಲೇ ಸ್ಥಳೀಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಗಮನಕ್ಕೂ ತರಲಾಗಿದೆ. ಅಲ್ಲದೇ ಇದರ ಬಗ್ಗೆ ಸೂಕ್ತ ತನಿಖೆಗೆ ಶಾಸಕರಿಂದಲೂ ಅಧಿಕಾರಿಗಳಿಗೆ ಮೌಖಿಕ ಸಊಚನೆಯನ್ನು ನೀಡಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಖ್ಯಾರೆಎನ್ನುತ್ತಿಲ್ಲ ಎಂದು ಬಿಜ್ಜೂರ ಗ್ರಾಮಸ್ಥರು ಆರೋಪಿಸಿದ್ದಾರೆ.


3 ಹಂತದಲ್ಲಿ ಧರಣಿ ಸತ್ಯಾಗ್ರಹ:
ಬಿಜ್ಜೂರ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ವಿರುದ್ಧ ಸರಕಾರದ ಆರ್ಥಿಕ ಹಣ ದುರ್ಭಳಕೆ ಮಾಡಿದ ಹಿನ್ನೆಲೆ ಅವನ ಮೇಲೆ ಕ್ರಮಿನಲ್ ಮೊಕದ್ದಮೆ ದಾಖಲಿಸಿ ತಪ್ಪಿತಸ್ಥರಿಂದ ದುರ್ಭಳಕೆಯಾದ ಹಣವನ್ನು ವಸೂಲಿ ಮಾಡುವವರೆಗೂ ಮೊದಲ ಹಂತವಾಗಿ ಗ್ರಾಮ ಪಂಚಾಯತಿ ಆವರಣದಲ್ಲಿ, ಎರಡನೇ ಹಂತವಾಗಿ ತಾಲೂಕ ಪಂಚಾಯತ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಿದೆ. ಇದಕ್ಕೂ ಸ್ಥಳೀಯ ಅಧಿಕಾರಿಗಳಿಂದ ಯಾವುದೇ ಸ್ಪಂಧನೆ ದೊರಕದಿದ್ದರೆ ವಿಜಯಪುರ ಜಿಲ್ಲಾ ಪಂಚಾಯತ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹ್ಮದರಫೀಕ ದಖನಿ, ಮಾನಪ್ಪ ಬಿರಾದಾರ, ಜಗದೀಶ ಜಗ್ಲರ, ಪರಸೆಪ್ಪ ಬಿಜ್ಜೂರ, ಯಮನಪ್ಪ ಬಿಜ್ಜೂರ, ಮಂಜುನಾಥ ಕಟ್ಟಿಮನಿ, ಮೌನೇಶ ನಾಡಗೌಡರ, ಮೌನೇಶ ನಾಗಬೇನಾಳ, ಯಮನೂರು ಜಗ್ಲರ, ಶಿವಾನಂದ ಚಲವಾದಿ, ಲಕ್ಕಪ್ಪ ಹೊಸಗೌಡರ, ಪ್ರಕಾಶ ಚಲವಾದಿ(ಸರೂರ) ಸೇರಿದಂತೆ ಇತರರಿದ್ದರು.

ಫೋಟೊ:23ಎಂಡಿಬಿಎಲ್1: ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕಿನ ಬಿಜ್ಜೂರ ಗ್ರಾಮಸ್ಥರು ಪತ್ರಿಕಾಗೋಷ್ಠಿ ನಡೆಸಿದರು.

Be the first to comment

Leave a Reply

Your email address will not be published.


*