ರಾಜ್ಯ ಸುದ್ದಿಗಳು
ದೇವನಹಳ್ಳಿ
ಈ ಬಾರಿ ಗಣೇಶ ಹಬ್ಬವು ಸರಕಾರದ ಮಾರ್ಗಸೂಚಿಯಲ್ಲಿ ನಡೆಯುತ್ತಿರುವುದು ಒಂದಾದರೆ, ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗದೆ, ಬೆರಳೆಣಿಕೆಯಷ್ಟು ಮಾತ್ರ ಜನರು ಮಾರುಕಟ್ಟೆಯ ಅಂಗಡಿಗಳಲ್ಲಿ ಕಾಣಿಸುತ್ತಿದ್ದಾರೆ.
ಗಣಪತಿ ಮೂರ್ತಿ ಮಾರಾಟಗಾರ ಶ್ರೀನಿವಾಸ್ ಮಾತನಾಡಿ, ಗಣೇಶ ಹಬ್ಬಕ್ಕೆ ಗಣಪನ ವಿವಿಧ ರೀತಿಯ ಗಣೇಶ ಮೂರ್ತಿಗಳನ್ನು ಇಟ್ಟುಕೊಂಡು ಅಂಗಡಿ ಮಾಲೀಕರು ಜನರನ್ನು ಎದುರು ನೋಡುತ್ತಿದ್ದಾರೆ. ಕಳೆದ ಎರಡು-ಮೂರು ವರ್ಷಗಳ ಹಿಂದಿನ ಹಬ್ಬದ ವಾತಾವರಣ ಈ ಬಾರಿ ಕಾಣಿಸುತ್ತಿಲ್ಲ. ಹಬ್ಬದ ಹಿಂದಿನ ದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಣೇಶ ಮೂರ್ತಿಗಳು ಮಾರಾಟವಾಗುತ್ತಿತ್ತು. ಆದರೆ ಹಾಕಿರುವ ಬಂಡವಾಳವೂ ಸಹ ಸಿಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇವನಹಳ್ಳಿಯ ಬಜಾರ್ ರಸ್ತೆಯ ಮಾರುಕಟ್ಟೆಯಲ್ಲಿ ಜನಜಂಗುಳಿ ನಿರೀಕ್ಷಿತ ಪ್ರಮಾಣದಲ್ಲಿ ಕಾಣಿಸುತ್ತಿಲ್ಲ. ಕೋವಿಡ್ ಇರುವ ಕಾರಣದಿಂದಾಗಿ ಹಬ್ಬವನ್ನು ಜನರು ಸರಳವಾಗಿ ಆಚರಿಸಲು ಮುಂದಾಗಿದ್ದು, ಹಬ್ಬಕ್ಕೆ ಬೇಕಾದ ಸಾಮಗ್ರಿಯನ್ನು ಶೇ.೫೦ರಷ್ಟು ಕಡಿಮೆ ಖರೀದಿ ಮಾಡುತ್ತಿರುವುದು ಸಾಕಷ್ಟು ಮಾರಾಟಗಾರರಿಗೆ ಹೊಡೆತ ಬಿದ್ದಿದೆ. ಹಣ್ಣು, ಹೂ, ತರಕಾರಿ ವ್ಯಾಪಾರಿಗಳಿಗೆ ತಕ್ಕಮಟ್ಟದಲ್ಲಿ ವ್ಯಾಪಾರವಾಗುತ್ತಿದ್ದು, ಉಳಿದಂತೆ ಎಲ್ಲಾ ವ್ಯಾಪಾರವೂ ತಟಸ್ಥವಾಗಿರುವುದು ಕಂಡುಬಂದಿದೆ.
Be the first to comment