ಭಟ್ಕಳ: ಮನೆ ಹಾಗೂ ಮಂದಿರಗಳಲ್ಲಿ ಮುಂಜಾಗ್ರತ ಕ್ರಮದೊಂದಿಗೆ ಮೂರ್ತಿಪ್ರತಿಷ್ಠಾಪಿಸಲು ಅವಕಾಶ ಇದೆ: ಆಯುಕ್ತೆ ಮಮತಾದೇವಿ

ವರದಿ: ಕುಮಾರ್ ನಾಯ್ಕ

ರಾಜ್ಯ ಸುದ್ದಿಗಳು 

ಭಟ್ಕಳ:

CHETAN KENDULI

ಕೋವಿಡ್ ಮಾರ್ಗಸೂಚಿ ಪ್ರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಇಲ್ಲ. ಆದರೆ ಮನೆ ಹಾಗೂ ಮಂದಿರಗಳಲ್ಲಿ ಮುಂಜಾಗ್ರತ ಕ್ರಮದೊಂದಿಗೆ ಮೂರ್ತಿಪ್ರತಿಷ್ಠಾಪಿಸಲು ಅವಕಾಶ ಇದೆ ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ಹೇಳಿದರು.

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೋವಿಡ್ ಮೂರನೇ ಅಲೆಯ ಆತಂಕದ ಕಾರಣ ಜನಸಂದಣಿ ಸೇರುವ ಸಾರ್ವಜನಿಕ ಸ್ಥಳದಲ್ಲಿ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಲಾಗಿದೆ. ದೇವಸ್ಥಾನಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ.

ಆದರೆ ಮೆರವಣಿಗೆ ನಡೆಸುವುದು, ಪೆಂಡಾಲ್ ಹಾಕುವುದು ಹಾಗೂ ಮನೋರಂಜನೆ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಇದರ ಜೊತೆಯಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸ್ಯಾನಿಟೈಸ್ ಮಾಡುವುದು, ಉಷ್ಣತೆ ಪರೀಕ್ಷೆ ಹಾಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ಮುರ್ಡೇಶ್ವರದ ಕೃಷ್ಣ ನಾಯ್ಕ ಮಾತನಾಡಿ, ರಾಜಕೀಯ ಕಾರ್ಯಕ್ರಮಗಳಿಗೆ ಯಾವುದೇ ನಿಷೇಧ ಇಲ್ಲ. ಹಬ್ಬ ಹರಿದಿನಗಳಿಗೆ ಈ ನಿಷೇಧ ಹೇರಲಾಗುತ್ತಿದೆ. ಹತ್ತಾರು ವರ್ಷಗಳಿಂದ ಆಚರಿಸಿಕೊಂಡು ಬಂದAತಹ ಸಾರ್ವಜನಿಕ ಗಣೇಶೋತ್ಸವಕ್ಕೆ ಕೋವಿಡ್ ಮಾರ್ಗಸೂಚಿ ಅನುಸರಿಸಿ ಆಚರಣೆ ಮಾಡಲು ಅವಕಾಶ ನೀಡಬೇಕು. ಬದಲಾಗಿ ನಿಷೇಧ ಹೇರುವುದು ಸರಿಯಲ್ಲ ಎಂದರು.

ಸಿಪಿಐ ದಿವಾಕರ ಮಾತನಾಡಿ, ತಾಲ್ಲೂಕಿನ ಕಟ್ಟಡ ಹೊಂದಿದ ಎಲ್ಲ ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಲಾಗುವುದು. ಯಾರು ಯಾವುದೇ ನಿಯಮ ಉಲ್ಲಂಘನೆ ಮಾಡದೇ ಸರಳವಾಗಿ ಹಬ್ಬವನ್ನು ಆಚರಿಸಿಕೊಂಡು ಹೋಗಬೇಕು ಎಂದರು.

ತಹಶೀಲ್ದಾರ್ ರವಿಚಂದ್ರ, ಪಿಎಸ್‌ಐಗಳಾದ ಭರತ್ ಎಸ್. ನವೀನ್’ ಬಿರಾದರ, ಹನುಮಂತಪ್ಪ ಕುಡುಗುಂಟಿ, ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜೀ, ಮುಖ್ಯಾಧಿಕಾರಿ ರಾಧಿಕಾ. ಎಸ್ ಇದ್ದರು.

Be the first to comment

Leave a Reply

Your email address will not be published.


*