ಜನರಿಗೆ ಜೀವ ನೀಡಿದ ಆರೋಗ್ಯ ಇಲಾಖೆ ಶುಶ್ರೂಷಾಧಿಕಾರಿಗಳಿಗಿಲ್ಲಾ ವಸತಿ ಸೌಲಭ್ಯ…!!! ಜನಪ್ರತಿನಿಧಿಗಳೇ ಹಾಗೂ ಆರೋಗ್ಯ ಇಲಾಖೆ ಮೇಲಾಧಿಕಾರಿಗಳಿಗೆ ಎಚ್ಚೆತ್ತುಕೊಳ್ಳಿರಿ…!!!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಮುದ್ದೇಬಿಹಾಳ ತಾಲೂಕಿನಲ್ಲಿ 100 ಹಾಸಿಗೆಯ ಆಸ್ಪತ್ರೆ ಇದೆ. ಅಲ್ಲದೇ ಇದೇ ಆಸ್ಪತ್ರೆಯಲ್ಲಿ ಆಮ್ಲಜನಿಕ್ ಪ್ಲಾಂಟ ಕೂಡಾ ಮಂಜೂರಾತಿ ದೊರಕಿದೆ. ಇದರಿಂದ ಆಸ್ಪತ್ರೆಯನ್ನೇ ಮೇಲ್ದರ್ಜೆಗೆ ಏರಿಸಿದಂತಾಗಿದೆ. ಆದರೆ ತಾಲೂಕಿನಲ್ಲಿ ಸೇವೆ ಮಾಡುತ್ತಿರುವ 65 ಖಾಯಂ ಶುಶ್ರೂಷಾಧಿಕಾರಿಗಳಿಗೆ ಹಾಗೂ 30 ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ವಸತಿ ಸೌಲಭ್ಯ ಮಾತ್ರ ದೊರಕಿಲ್ಲಾ. ಹಿಂದೆ ನಿರ್ಮಿಸಿದ ಅನುಪಯುಕ್ತವಾಗಿರುವ ವಸತಿ ನಿಲಯಗಳನ್ನು ತೆರವುಗೊಳಿಸಿ ಹೊಸದಾಗಿ ಸವತಿ ನಿಲಯಗಳನ್ನು ನಿರ್ಮಿಸಿದರೆ ತಾಲೂಕಾ ಶುಶ್ರೂಷಾಧಿಕಾರಿಗಳ ಜೊತೆಗೆ ಅವರಿಂದ ಸೇವೆ ಮಾಡಿಸಿಕೊಳ್ಳುವ ರೋಗಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಶುಶ್ರೂಷಾಧಿಕಾರಿಗಳಿಗೆ ವಸತಿ ಸೌಲಭ್ಯ ದೊರಕಿಸಿಕೊಡುವಲ್ಲಿ ಮುಂದಾಗಬೇಕು ಎನ್ನುವುದು ಅಂಬಿಗ್ ನ್ಯೂಸ್ ಮನವಿಯಾಗಿದೆ.

ಮಾನವ ಕುಳಕ್ಕೆ ವೈದ್ಯರೇ ದೇವರ ಸಮಾನ ಎಂದು ಹೇಳಲಾಗುತ್ತಿದೆ. ಆದರೆ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ನಿರತರಾಗಿದ್ದು ಆರೋಗ್ಯ ಸಿಬ್ಬಂದಿಗಳ ಮಹತ್ವವು ಎಲ್ಲರಿಗೂ ತಿಳಿದು ಬಂದಿದ್ದು ಕೋವಿಡ್-19 ಸಂದಿಗ್ಧ ಸಂದರ್ಭದಲ್ಲಿ ಮಾತ್ರ. ತಮ್ಮ ವ್ಯಯಕ್ತಿಕ ಜೀವನದ ಹಂಗು ತೊರೆದು ಜನರಿಗಾಗಿ ಸೇವೆಗೈಯುವ ಆರೋಗ್ಯ ಸಿಬ್ಬಂದಿಗಳಿಗೆ ಸುಸಜ್ಜಿತವಾಗಿ ವಸತಿಗಳಿಲ್ಲಾ ಎನ್ನುವುದು ಯಾವ ಮಟ್ಟಕ್ಕೆ ಸರಕರಗಳು ಇವರ ಸೇವೆಗೆ ಸ್ಪಂದನೆ ಮಾಡುತ್ತಿದೆ ಎಂಬುವುದು ದುರಾದೃಷ್ಠಕರ ಸಂಗತಿಯಾಗಿದೆ.
ಹೌದು, ವಿಜಯಪುರ ಜಿಲ್ಲೆ ಬರನಾಡು ಜಿಲ್ಲೆ ಎಂದೇ ಖ್ಯಾತಿಯಾಗಿದೆ. ಕೊರೊನಾ ಅಲೆ ಸೇರಿದಂತೆ ಹೊಸದಾಗಿ ಬಂದಂತಹ ವೈರಾನು ಬ್ಲಾಕ್ ಫಂಗಸ್ ಮೊದಲಿಗೆ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದೆ ವಿಜಯಪುರ ಜಿಲ್ಲೆಯಲ್ಲಿ. ಆದರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರಕಾರಿ ಶುಶ್ರೂಷಾಧಿಕಾರಿಗಳಿಗೆ ವಸತಿ ಸೌಲಭ್ಯ ಕಲ್ಪಸಿಕೊಡುವುದರಲ್ಲಿ ಜನ ಪ್ರತಿನಿಧಿಗಳು ಸರಕರಾದ ಮಟ್ಟದಲ್ಲಿ ಧ್ವನಿ ಎತ್ತಬೇಕಾಗಿದೆ.


ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಒಟ್ಟು 95 ಶುಶ್ರೂಷಾಧಿಕಾರಿ ಸಿಬ್ಬಂದಿಗಳಿದ್ದಾರೆ. ಹಲವಾರು ವರ್ಷಗಳ ಹಿಂದೆ ಮುದ್ದೇಬಿಹಾಳ ಪಟ್ಟಣದಲ್ಲಿ ಕೆಲ ವಸತಿ ನಿಲಯಗಳನ್ನು ಕಟ್ಟಲಾಗಿತ್ತು. ಆದರೆ ಸದ್ಯಕ್ಕೆ ಅವುಗಳು ಸಂಪೂರ್ಣವಾಗಿ ಶೀಥಲಗೊಂಡು ವಸತಿಗೆ ಉಪಯುಕ್ತವಾಗಿಲ್ಲ. ಇದರಿಂದ ಆಸ್ಪತ್ರೆಯ ರೋಗಿಗಳಿಗೆ ತುರ್ತು ಪರಿಸ್ಥಿತಿಯ ಚಿಕಿತ್ಸೆಗೆ ಶುಶ್ರೂಷಾಧಿಕಾರಿಗಳು ಪರದಾಡುವ ದುಸ್ಥಿತಿ ಎದುರಾಗಿದೆ. ಆದರೆ ಯಾರೊಬ್ಬರೂ ಇದರತ್ತ ಮುಖ ಮಾಡದಿರುವುದು ವಿಪರ್ಯಾಸವಾಗಿದೆ.



ಸಿಬ್ಬಂದಿಗಳ ಮೂಲ ಸೌಲಭ್ಯದತ್ತ ಕಿವಿಗೊಡದ ಜಿಲ್ಲಾ ಆರೋಗ್ಯಾಧಿಕಾರಿಗಳು:
ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿನ ಶುಶ್ರೂಷಾಧಿಕಾರಿ ಸಿಬ್ಬಂದಿಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸಿದರೆ ಸಿಬ್ಬಂದಿಗಳ ಸೇವೆಯೂ ಸಾರ್ವಜನಿಕರಿಗೆ ತೃಪ್ತಿದಾಯಕರವಾಗುತ್ತದೆ. ಆದರೆ ಮುದ್ದೇಬಿಹಾಳ ತಾಲೂಕಿನಲ್ಲಿನ ಸಿಬ್ಬಂದಿಗಳಿಗೆ ಮಾತ್ರ ಮೊದಲ ಹಂತದ ಸೌಲಭ್ಯವಾದ ವಸತಿ ನಿಲಯವೇ ಇಲ್ಲದಂತಾಗಿದೆ. ಇದರಿಂದಲೇ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸಿಬ್ಬಂದಿಗಳಿಂದ ಸ್ಪಂಧನೆ ದೊರಕದಂತಾಗಿದೆ. ಸಿಬ್ಬಂದಿಗಳ ಸೌಲಭ್ಯಗಳ ಬಗ್ಗೆ ವಿಚಾರಣೆ ಮಾಡಬೇಕಾದ ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿಗಳೂ ಇದರತ್ತ ಗಮನ ಹರಿಸದಿರುವುದು ವಿಪರ್ಯಾಸವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.


ಸಿಬ್ಬಂದಿಗಳಲ್ಲಿಯೇ ವಿಭಜನೆ ಮಾಡಿದ ರಾಜ್ಯ ಸರಕಾರ:
ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆ ನೀಡಲಾಗುತ್ತಿದೆ. ಅದರಂತೆ ನೇಮಕಗೊಂಡಿರುವ ಶುಶ್ರೂಷಾಧಿಕಾರಿಗಳು ತಮ್ಮ ಸೇವೆಯನ್ನು ಒದಗಿಸುತ್ತಾ ಬಂದಿದ್ದಾರೆ. ಆದರೆ ರಾಜ್ಯ ಸರಕಾರ ಮಾತ್ರ ಕೋವಿಡ್ ಸಂದರ್ಭದಲ್ಲಿ ಪಿಪಿ ಕಿಟ್ ಧರಿಸಿ ಸೇವೆಗೈದ ಶುಶ್ರೂಷಾಧಿಕಾರಿಗಳಿಗೆ ಮಾಯ್ರ ಏಪ್ರೀಲ್ ತಿಂಗಳಿಂದ 8000 ಹಣವನ್ನು ನೀಡಲಾಗುತ್ತದೆ ಎಂಬ ಆದೇಶ ಹೊರಡಿಸಿ ಎಲ್ಲರೂ ಒಂದಾಗಿ ಸೇವೆ ಗೈದ ಶುಶ್ರೂಷಾಧಿಕಾರಿಗಳ ನಡುವೆ ವಿಭಜನಾ ಪದ್ಧತಿ ತಂದಿಟ್ಟಿದೆ.

 

Be the first to comment

Leave a Reply

Your email address will not be published.


*