ದೋಣಿ ಮಗುಚಿ ಮಹಿಳೆ ಸಾವು: ಈಜಿ ದಡ ಸೇರಿದ ಮೃತ ಮಹಿಳೆಯ ಗಂಡ 

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು 

ಹೊನ್ನಾವರ

ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಮಳೆ- ಗಾಳಿಯ ರಭಸಕ್ಕೆ ದೋಣಿ ಮಗುಚಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಶುಕ್ರವಾರ ಬೆಳಿಗ್ಗೆ 5.30ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದ್ದು ಪತಿ- ಪತ್ನಿ ಇಬ್ಬರೂ ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ತಮ್ಮ ದೋಣಿಯಲ್ಲಿ ತೆರಳಿದ್ದರು.

CHETAN KENDULI

ಈ ವೇಳೆ ಮಳೆ ಗಾಳಿಯ ಹೊಡೆತಕ್ಕೆ ದೋಣಿ ಮಗುಚಿ ಇಬ್ಬರೂ ನದಿಯ ಪಾಲಾಗಿದ್ದಾರೆ‌. ಪತಿಯಾದ ಮೋಳ್ಕೋಡ್ ನಿವಾಸಿ ಸುಬ್ರಾಯ ಅಂಬಿಗ ಈಜಿ ಹೇಗೋ ದಡ ತಲುಪಿದ್ದಾನೆ. ಆದರೆ ಪತ್ನಿ ಮಾದೇವಿ ಅಂಬಿಗ ನೀರಿನ ರಭಸಕ್ಕೆ ಸಿಕ್ಕು ಸಾವನ್ನಪ್ಪಿದ್ದಾಳೆ.

ತೀವ್ರ ಶೋಧದ ನಂತರ ಮಹಿಳೆಯ ಶವವನ್ನು ಪತ್ತೆ ಹಚ್ಚಿದ್ದು ಮಂಕಿ ಪ್ರಾಥಮಿಕ‌ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಲಾಗಿದೆ.

Be the first to comment

Leave a Reply

Your email address will not be published.


*