ಉಕ್ಕಿ ಹರಿದ ಅಘನಾಶಿನಿ; ಕುಮಟಾದ ಹಲವು ಪ್ರದೇಶ ಜಲಾವೃತ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು 

 

ಕುಮಟಾಶಿರಸಿ

CHETAN KENDULI

ಸಿದ್ದಾಪುರ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಘನಾಶಿನಿ ನದಿ ಉಕ್ಕಿ ಹರಿಯುತ್ತಿದೆ. ಅಘನಾಶಿನಿ ನದಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿ ಕುಮಟಾದ ಹಲವು ಗ್ರಾಮಗಳಿ ಜಲಾವೃತ ಗೊಂಡಿದೆ. ನದಿಯಂಚಿನ ದೀವಗಿ, ಮಿರ್ಜಾನ್ ನಲ್ಲಿ‌ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ರಕ್ಷಣಾ ಕಾರ್ಯ ನಡೆಯುತ್ತಿದೆ‌.

ಹೆಗಡೆ ಗ್ರಾಮದ ನೀರು ನುಗ್ಗಿದ ಸ್ಥಳಗಳಿಗೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ನಾಡದೋಣಿಯಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನೀರು ನುಗ್ಗಿದ ಪ್ರದೇಶಗಳಿಂದ ತಕ್ಷಣವೇ ಜನರನ್ನು ಪರಿಹಾರ ಕೇಂದ್ರಗಳಿಗೆ ಕರೆತರಲಾಗುತ್ತಿದೆ . ದ್ವೀಪ ಗ್ರಾಮವಾದ ಐಗಳಕುರ್ವೆಯಲ್ಲಿನ ಜನರನ್ನು ದೋಣಿ ಮೂಲಕ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*