ಎಲ್ಲ ಶುಶ್ರೂಷಾಧಿಕಾರಿಗಳಿಗೂ ಸಮನಾಗಿ ವಿಶೇಷ ವೇತನ ಕಲ್ಪಿಸಿ : ಕರ್ನಾಟಕ ರಾಜ್ಯ ಸರಕಾರಿ ಶುಸ್ರೂಷಾಧಿಕಾರಿಗಳ ಮನವಿ..!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಕೊವೀಡ್-19 ತುರ್ತು ಸಂದರ್ಭದಲ್ಲಿ ವೈದ್ಯರೊಂದಿಗೆ ಶುಶ್ರೂಷಾಧಿಕಾರಿಗಳೂ ಕೊವಿಡ್ ನಿಯಂತ್ರಣ ಮತ್ತು ರೋಗಿಗಳ ಚಿಕಿತ್ಸೆಯ ಕಾರ್ಯದಲ್ಲಿ ಮುಂಚೊಣಿಯಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಣೆ ಮಾಡಲಾಗಿದೆ. ಆದರೆ ರಾಜ್ಯ ಸರಕಾರ ಕೇವಲ ಪಿಪಿ ಕಿಟ್ ಧರಿಸಿ ಕಾರ್ಯನಿರ್ವಹಿಸಿದ ಶುಶ್ರೂಷಾಧಿಕಾರಿಗಳಿಗೆ ಮಾತ್ರ 8 ಸಾವಿರ ಹಣ ನೀಡುವುದಾಗಿ ಆದೇಶ ಮಾಡಿದ್ದು ಕೂಡಲೇ ಇದರಲ್ಲಿ ಎಲ್ಲ ಶುಶ್ರೂಷಾಧಿಕಾರಿಗಳನ್ನು ಒಳಪಡಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ಶುಸ್ರೂಷಾಧಿಕಾರಿಗಳ ಸಂಘದ ತಾಲೂಕಾ ಘಟಕದ ಪದಾಧಿಕಾರಿಗಳು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಮನವಿ ಮಾಡಿದ್ದಾರೆ.


ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಎಲ್ಲ ಶುಶ್ರೂಷಾಧಿಕಾರಿಗಳೂ ತಮ್ಮ ವಯಕ್ತಿಕ ಹಾಗೂ ಕುಟುಂಬಗಳಿಂದ ದೂರ ಉಳಿದು ಕೋವಿಡ್ ರೋಗಿಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇವೆ. ಆದರೆ ರಾಜ್ಯ ಸರಕಾರ ಮಾತ್ರ ಕೇವಲ ಪಿಪಿ ಕಿಟ್ ಧರಿಸಿ ಸೇವೆ ಮಾಡಿದವರಿಗೆ ಮಾತ್ರ ವಿಶೇಷ ಹಣವನ್ನು ಮಂಜೂರು ಮಾಡಿದ್ದು ಇನ್ನೂಳಿದ ಶುಶ್ರೂಷಾಧಿಕಾರಿಗಳಿಗೆ ಅನ್ಯಾಯ ಮಾಡಿದಂತಾಗಿದೆ. ಆದ್ದರಿಂದ ಕೂಡಲೇ ಶಾಸಕರು ಆರೋಗ್ಯ ಸಚಿವರಿಗೆ ಶುಶ್ರೂಷಾಧಿಕಾರಿಗಳ ಮನವಿಯನ್ನು ಮನವರಿಕೆ ಮಾಡಿ ಎಲ್ಲರನ್ನೂ ಒಂದೇ ಸಮನಾಗಿ ಕೋಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಶುಸ್ರೂಷಾಧಿಕಾರಿಗಳ ಸಂಘದ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ವಿಠ್ಠಲ ಕಿಲಾರಟ್ಟಿ, ತಾಲೂಕಾ ಅಧ್ಯಕ್ಷ ಕಾಶಿನಾಥ್ ವಗದುರ್ಗಿ, ಉಪಾಧ್ಯಕ್ಷ ಶಿವಣ್ಣ ಮಾಗಿ, ಯಲಗೂರೇಶ ತೊನಶ್ಯಲ್, ಸಂಘಟನಾ ಕಾರ್ಯದರ್ಶಿ ಮಹಮ್ಮದರಫೀಕ ಬಾಗವಾನ, ರಾಜಶ್ರೀ ಹೊಕ್ರಾಣಿ, ಬಿ ಎನ್ ಸರ್ವಾಡ್, ಲಕ್ಷ್ಮಿ ಎ, ಅಖಿಲಾಬೇಗಂ, ಸುಭದ್ರ ಭಜಂತ್ರಿ, ರಾಜಅಹ್ಮದ ಖಾಜಿ, ಸಂತೋಷ್ ಅಂಗಡಗೇರಿ, ಶೇಖಪ್ಪ ಬಿರಾದಾರ, ಮಹಿಬೂಬಪಟೇಲ್ ನಡುವಿನಮನಿ ಇದ್ದರು.

Be the first to comment

Leave a Reply

Your email address will not be published.


*