ದಾಂಡೇಲಿ ಪೇಪರ್ ಮಿಲ್ ಕಾರ್ಮಿಕರ ವೇತನ ಪರಿಸ್ಕರಣ ಸಂಧಾನ ಸಭೆ ಯಶಸ್ವಿಗೊಳಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್….!!!

ವರದಿ: ಕುಮಾರ್ ನಾಯ್ಕ, ಉಪ ಸಂಪಾದಕರು

ರಾಜ್ಯ ಸುದ್ದಿಗಳು

ಯಲ್ಲಾಪುರ:

CHETAN KENDULI

ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರವರ ನೇತೃತ್ವದಲ್ಲಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಕಾರ್ಮಿಕರ ವೇತನ ಪರಿಷ್ಕರಣೆಗೆ ಸಂಬoಧಿಸಿದoತೆ ಆಡಳಿತ ಮಂಡಳಿ ಪ್ರತಿನಿಧಿಗಳು ಹಾಗೂ ಜಂಟಿ ಸಂಧಾನ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿದರು.

ಆಡಳಿತ ಮಂಡಳಿ ಪ್ರತಿನಿಧಿ ಹಾಗೂ ಜಂಟಿ ಸಂಧಾನ ಸಮಿತಿಯ ಸದಸ್ಯರೊಂದಿಗೆ ಪ್ರಮುಖರೊಂದಿಗೆ ಸುದೀರ್ಘವಾಗಿ ವೇತನ ಪರಿಷ್ಕರಣೆಗೆ ಸಂಬoಧಿಸಿದoತೆ ಚರ್ಚಿಸಿದರು, ಹಲವಾರು ವರ್ಷಗಳಿಂದ ಉಲ್ಬಣಿಸಿದ ಸಮಸ್ಯೆಯನ್ನು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಅವರು ಅತ್ಯಂತ ಯಶಸ್ವಿಯಾಗಿ ಕೊನೆಗೊಳಿಸಿದರು.ಈ ಸಂಸ್ಥೆಯಲ್ಲಿ ೨೦೦೦ ಕ್ಕೂ ಹೆಚ್ಚಿನ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು ಕಾರ್ಮಿಕ ವೇತನದಲ್ಲಿ ರೂಪಾಯಿ ೪೧೦೦ ಗಳನ್ನು ಏರಿಕೆ ಮಾಡಲು ಆಡಳಿತ ಮಂಡಳಿಯವರು ಒಪ್ಪಿದ್ದು ಅಂದಾಜು ಪ್ರತಿವರ್ಷ ೯.೮ ಕೋಟಿ ಮೊತ್ತದ ಸೌಲಭ್ಯಗಳನ್ನು ಕಾರ್ಮಿಕರುಗಳಿಗೆ ಈ ಒಪ್ಪಂದದಿoದ ಪಡೆದುಕೊಳ್ಳಲಿದ್ದಾರೆ. ರಾಜ್ಯದಲ್ಲಿ ಕಾರ್ಮಿಕ ಹಾಗೂ ಉದ್ಯಮಿ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡುವುದಕ್ಕೆ ಕಾರ್ಮಿಕ ಇಲಾಖೆ ಸದಾ ಬದ್ದವಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ, ಜಂಟಿ ಸಂಧಾನ ಸಮಿತಿ ಸದಸ್ಯರಾದ ಬಿ.ಡಿ.ಹಿರೇಮಠ, ಶ್ರೀನಿವಾಸ ಘೋಟ್ನೇಕರ, ಉದಯ ನಾಯ್ಕ, ಭರತ ಪಾಟೀಲ ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ರಾಜೇಂದ್ರ ಜೈನ್, ಎಸ್.ಎನ್.ಪಾಟೀಲ, ರಮೇಶ್ ಬಿಜಾಪುರ, ವಿಜಯ ಮಹಾಂತೇಶ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*