ಮೀನುಗಾರರೊಂದಿಗೆ ವಾಣಿಜ್ಯ ಬಂದರು ನಿರ್ಮಾಣ ಸಾಧಕ-ಬಾಧಕ ಚರ್ಚಿಸಿದ ಸಚಿವ ಹೆಬ್ಬಾರ್

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕದಲ್ಲಿ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಯಲ್ಲಾಪುರ ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಕಾರ್ಮಿಕ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿದರು.ಬಂದರು ನಿರ್ಮಾಣದ ಸಾಧಕ-ಬಾಧಕಗಳ ಬಗ್ಗೆ ಸ್ಥಳೀಯ ಮುಖಂಡರೊಂದಿಗೆ ವಿಸ್ತೃತವಾಗಿ ಚರ್ಚಿಸಿದರು, ಮೀನುಗಾರರ ಅಹವಾಲನ್ನು ಸ್ವೀಕರಿಸಿ ಸಾಂಪ್ರದಾಯಿಕ ಮೀನುಗಾರಿಕೆ ಹಾಗೂ ವಾಸ್ತವ ಇರುವ ಸ್ಥಳೀಯ ನಿವಾಸಿಗಳನ್ನು ತೊಂದರೆ ಆಗದ ರೀತಿಯಲ್ಲಿ ಬಂದರನ್ನು ನಿರ್ಮಾಣ ಮಾಡುವುದಕ್ಕೆ ಕ್ರಮವಹಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಂದರು ನಿರ್ಮಾಣದ ಬಗ್ಗೆ ಸ್ಥಳೀಯರಲ್ಲಿ ಇದ್ದ ಕೆಲವೊಂದು ಗೊಂದಲಗಳ ಬಗ್ಗೆ ಹಲವು ಸುತ್ತಿನ ಚರ್ಚೆಯಲ್ಲಿ ಮೀನುಗಾರ ಮನ ಒಲಿಸುವ ಪ್ರಯತ್ನವನ್ನು ಸಚಿವರು ಮಾಡಿದರು, ಮೀನುಗಾರರ ಹಿತಕಾಯುವುದು ನನ್ನ ಉದ್ದೇಶವಾಗಿದೆ ಇದಕ್ಕೆ ಸರಕಾರವು ಕಟ್ಟಿ ಬದ್ದವಾಗಿದೆ. ಕೆಲವೇ ದಿನಗಳಲ್ಲಿ ಅಧಿಕಾರ ತಂಡದೊಂದಿಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮೀನುಗಾರ ಹಾಗೂ ಮೀನುಗಾರರ ಮುಖಂಡರೊಂದಿಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಸುನೀಲ್ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜ್, ಭಟ್ಕಳ ಡಿ.ಎಸ್.ಪಿ ಬೆಳ್ಳಿಯಪ್ಪ, ಹೊನ್ನಾವರ ಪಿ.ಐ ಶ್ರೀಧರ್, ಬಂದರಿನ ಕ್ಯಾಪ್ಟನ್ ಸ್ವಾಮಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್, ಕಂಪನಿಯ ಮುಖ್ಯಕಾರ್ಯನಿರ್ವಹಕ ಸೂರ್ಯಪ್ರಕಾಶ ಗುತ್ತಾ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*