ರಾಜ್ಯ ಸುದ್ದಿಗಳು
ದೇವನಹಳ್ಳಿ
ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯದಲ್ಲಿ ಒಂದಾಗಿದೆ. ಪರಿಸರ ಉಳಿದರೆ ಮನುಕುಲ ಉಳಿಯುತ್ತದೆ ಎಂದು ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ ತಿಳಿಸಿದರು.ತಾಲೂಕಿನ ಕುಂದಾಣ ಗ್ರಾಪಂ ಆವರಣದಲ್ಲಿ ಕಾವೇರಿ ಕೂಗು ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರೈತರು ತಮ್ಮ ಜಮೀನಿನಲ್ಲಿ ಬೆಳೆ ಇಟ್ಟು ಆರ್ಥಿಕ ಲಾಭ, ನಷ್ಟದಲ್ಲಿ ಸೆಣಸಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಲಾಭದಾಯಕವಾಗಿರುವ ಕಡಿಮೆ ಹಾನಿಯಾಗುವ ಮತ್ತು ಕಡಿಮೆ ವೆಚ್ಚದಲ್ಲಿ ದೊಡ್ಡ ಮೊತ್ತದ ಹಣವನ್ನು ಸಂಪಾದಿಸಲು ಆರ್ಥಿಕ ಲಾಭ ಕಾಣುವಂತಹ ಮರಗಳನ್ನು ನೆಟ್ಟರೆ ಸಾಕಷ್ಟು ಹಣ ಗಳಿಸಲು ಸಹಕಾರಿಯಾಗುತ್ತದೆ.
ಟಿಂಬರ್ ಮರಗಳು ವಿಮೆ ಇದ್ದ ಹಾಗೆ, ಹಣಕಾಸಿನ ವಿಷಯದಲ್ಲಿ ಎದುರಾಗುವ ಸವಾಲುಗಳ ಸಮಯದಲ್ಲಿ ಟಿಂಬರ್ ಮರಗಳನ್ನು ಬೆಳೆಸಿದರೆ ಅವು ನಿಮಗೆ ರಕ್ಷಿಸುತ್ತದೆ. ಅಂತರ ಬೆಳೆಗಳನ್ನು ಬೆಳೆಯುವ ರೂಢಿ ಮಾಡಿಕೊಂಡರೆ, ವರ್ಷವಿಡೀ ಸ್ಥಿರವಾದ ಆದಾಯವನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಟಿಂಬರ್ ಮರಗಳಲ್ಲಿ ಹಲವಾರು ವಿವಿಧ ಜಾತಿಗಳಿವೆ. ತೇಗ, ಹೆಬ್ಬೇವು, ಬೇವು, ಹೊನ್ನೆ, ಹಲಸು, ಬೀಟೆ ಹೀಗೆ ಹಲವಾರು ರೀತಿಯಲ್ಲಿ ತಮಗೆ ಇಷ್ಟವಾದ ಮರಗಳನ್ನು ಜಮೀನುಗಳ ದಿಬ್ಬಗಳಲ್ಲಿ ಬೆಳೆದರೆ ಸಾಕಷ್ಟು ಅನುಕೂಲವಾಗಲಿದೆ. ಸಮೃದ್ಧ ವಾತಾವರಣವೂ ಸಹ ಲಭಿಸುತ್ತದೆ. ರೈತರು ಸರಕಾರದ ಯೋಜನೆಯ ಜೊತೆಯಲ್ಲಿ ಇಂತಹ ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಯುವಂತಾಗಬೇಕು ಎಂದು ಕರೆ ನೀಡಿದರು.
ಈ ವೇಳೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ವೀಣಾರಾಣಿನವೀನ್‌ಕುಮಾರ್, ಸದಸ್ಯರಾದ ಪ್ರವೀಣ್, ಕೆ.ವಿ.ಸ್ವಾಮಿ, ವರಲಕ್ಷ್ಮಮ್ಮ, ಮುನಿಯಪ್ಪ, ಮಾಲಾ.ಡಿ.ಆರ್, ಸುಬ್ರಮಣಿ, ಶೋಭಾ, ಕ್ಯಾತೇಗೌಡ, ವಿಜಯ.ಎಂ, ನೀಲಮ್ಮ, ರಾಮಚಂದ್ರ, ನೇತ್ರ, ಗ್ರಾಪಂ ಪಿಡಿಒ ಚೈತ್ರಾ, ಕಾರ್ಯದರ್ಶಿ ಅರುಣಗೋಪಿ, ಗ್ರಾಪಂ ಸಿಬ್ಬಂದಿ ಇತರರು ಇದ್ದರು.
Be the first to comment