ರಾಜ್ಯ ಸುದ್ದಿಗಳು
ಮೈಸೂರು(ನಂಜನಗೂಡು):
ತಾಲೂಕಿನ ಕಡೂಬೂರು ಗ್ರಾಮದಲ್ಲಿ ಶುಂಠಿ ಬೆಳೆ ಮಾಡಿರುವ ಜಮೀನಿನಲ್ಲಿ 2ಚಿರತೆಗಳು ವಿಷ ತಿಂದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. 5ವರ್ಷದ ಹೆಣ್ಣು ಚಿರತೆ ಮತ್ತು 1ವರ್ಷದ ಮರಿ ಚಿರತೆ ವಿಷ ತಿಂದು ಸ್ಥಳದಲ್ಲಿ ಮೃತಪಟ್ಟಿವೆ.
ಗ್ರಾಮದ ರಾಮ ನಾಯಕ ಎಂಬುವರ ಶುಂಠಿ ಬೆಳೆ ಜಮೀನು ಮತ್ತು ಬಾಳೆ ತೋಟಕ್ಕೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ವಿಷ ತಿಂದು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಘಟನೆ ಕಂಡು ಬಂದ ಹಿನ್ನೆಲೆ ಜಮೀನಿನ ಮಾಲಿಕ ರಾಮ ನಾಯಕ ನಂಜನಗೂಡಿನ ಅರಣ್ಯ ಇಲಾಖಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿ ರಕ್ಷಿತ್ ಮತ್ತು ಜನಾರ್ದನ್ ಇತರೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಶ್ವಾನ ದಳದ ಸಿಬ್ಬಂದಿಗಳಿಂದ ಕಿಡಿಗೇಡಿಗಳ ಹೆಜ್ಜೆ ಗುರುತಿನ ಪರಿಶೀಲನೆ ನಡೆಸಿದ್ದಾರೆ. ವರ್ಷಗಳ ಹಿಂದೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ 3ಚಿರತೆಗಳು ಸಾವನ್ನಪ್ಪಿದವು, ವರ್ಷ ಕಳೆದರೂ ಕಿಡಿಗೇಡಿಗಳು ಸಿಕ್ಕಿಲ್ಲಾ. ಸದ್ಯಕ್ಕೆ ಎರಡು ಚಿರತೆಗಳ ಮೃತಪಟ್ಟಿದ್ದು ವನ್ಯ ಜೀವನಗಳ ರಕ್ಷಣೆಗಾಗಿ ಮಹತ್ತರ ಕ್ರಮಕೈಗೊಳ್ಳುವಂತೆ ಪ್ರಾಣಿಪ್ರೇಮಿಗಳು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
Be the first to comment