ಕೊರೊನಾ ಲಸಿಕೆ ಬಗ್ಗೆ ಭಯಬಿಟ್ಟು ಲಸಿಕೆ ಹಾಕಿಸಿಕೊಳ್ಳಿರಿ…! ಕೊರೊನಾ ಲಸಿಕೆಗೆ ಮೊದಲು ವಿರೋಧಿಸಿದ್ದ ಕಾಂಗ್ರೆಸ್ ನವರೇ ಇಂದು ಲಸಿಕೆ ಒದಗಿಸಿ ಎಂದು ಬಾಯಿಬಡ್ಕೋತ್ತಿದ್ದಾರೆ: ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ನಿರೀಕ್ಷೆ ಮಾಡದಂತಹ ವೈರಿ ದೇದಕ್ಕೆ ಆವರಿಸಿದೆ. ಇದರಿಂದ ಮುಕ್ತಿಯಾಗಲು ನಾವೆಲ್ಲರೂ ಒಂದಾಗಿ ಹೋರಾಟ ನಡೆಸಿದರೆ ಮಾತ್ರ ಸಾದ್ಯ. ಆದರೆ ಕೆಲ ವಿರೋಧಿಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೆಗೆದುಕೊಂಡ ನಿರ್ಧಾರಗಳನ್ನು ವಿರೋಧಿಸಿ ಜರನ್ನು ದಾರಿ ತಪ್ಪಿಸುವ ಹುನ್ನಾರು ನಡೆಸಿದ್ದಾರೆ. ಇದಕ್ಕೆ ಜನರು ಯಾವುದೇ ಬೆಲೆ ಕೊಡದೇ ವೈದ್ಯರೊಂದಿಗೆ ಚರ್ಚಿಸಿ ಸರಕಾರ ತೆಗೆದುಕೊಂಡ ನಿರ್ಧಾರಕ್ಕೆ ತಕ್ಕೆಹಾಗೆ ನಡೆದುಕೊಳ್ಳಬೇಕು.

-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರು ಹಾಗೂ ಅಧ್ಯಕ್ಷರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಬೆಂಗಳೂರು.

ಪ್ರಧಾನಿ ಮೋದಿಯವರು ಹಂಚಿದ ಹಸಿಕೆಯ ಬಗ್ಗೆ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ಪಕ್ಷದವರು ಕೊರೊನಾ 2ನೇ ಅಲೆಯಲ್ಲಿ ಲಸಿಕೆ ನೀಡಿ ಎಂದು ಬಾಯಿ ಬಡೆದುಕೊಳ್ಳುತ್ತಿದ್ದಾರೆ. ಜನರು ಇಂತಹ ಅಪಪ್ರಚಾರ ಮಾಡುವವರ ಬಗ್ಗೆ ತೆಲೆಕೆಡಿಸಿಕೊಳ್ಳದೇ ಮೊದಲಲು ಲಸಿಕೆಯನ್ನು ಹಾಕಿಕೊಳ್ಳಿರಿ ಎಂದು ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ರಾಜ್ಯ ಸರಕಾರದಿಂದ ಕೋವಿಡ್-19 ಸೋಂಕಿತರ ಕುಟುಂಬಗಳಿಗೆ ಆಹಾರ ಮತ್ತು ಔಷಧಿ ವಿತರಣಾ ಕಾರ್ಯಕ್ರಮದೊಂದಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿರೆ ಮತ್ತು ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.



ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ಬಂದಿದ್ದರೂ ಆ ಮನುಷ್ಯನಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಅವನಿಗೆ ಯಾವ ತೊಂದರೆಯೂ ಆಗುವುದಿಲ್ಲ. ಆದರೆ ಆ ವ್ಯಕ್ತಿಯಿಂದ ಇನ್ನೊಂಬ್ಬರಿಗೆ ಕೊರೊನಾ ಸೋಂಕು ಹರಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದರೆ ಪರೀಕ್ಷೆಗೆ ಒಳಗಾಗಬೇಕು. ಇದರಿಂದ ಮಾತ್ರ ಕೊರೊನಾದಿಂದ ಎಲ್ಲರೂ ಮುಕ್ತಿಯಾಗಲು ಸಾದ್ಯ ಎಂದು ಅವರು ಹೇಳಿದರು.
ಗ್ರಾಪಂಗೆ ಸಿಎಂ ಅವರಿಂದ ನೇರ ಹಣ:
ರಾಜ್ಯದಲ್ಲಿ ಕೊರೊನಾ ಪೀಡಿತರಿಗೆ ಸಿಎಂ ಯಡಿಯೂರಪ್ಪನವರು ಸಾಕಷ್ಟು ಜಾಗೃತಿ ವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೊರೊನಾ ವಾರಿಯರ್ಸಗಳಿಗೆ ಅವಶ್ಯಕವಿರುವ ಸಾಮಗ್ರಿಗಳನ್ನು ಪುರೈಸಲು ನೇರವಾಗಿ ಗ್ರಾಮ ಪಂಚಾಯತಿಗೆ ಹಣವನ್ನು ಸಂದಾಯ ಮಾಡಿದ್ದಾರೆ. ಇದರಿಂದ ಕೊರೊನಾ ವಾರಿಯರ್ಸಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ಗ್ರಾಮೀಣದಿಂದ ಯಾರೊಬ್ಬರೂ ಪಟ್ಟಣಕ್ಕೆ ಬರಬೇಡಿ: ಶಾಸಕ ನಡಹಳ್ಳಿ ಮನವಿ
ಕೊರೊನಾ ಸಂಕಷ್ಟದಿಂದ ಹೊರಬರಬೇಕೆಂದು ಸಿಎಂ ಯಡಿಯೂರಪ್ಪನವರು ಈಗಾಗಲೇ ಲಾಕಡೌನ್ ಜಾರಿ ಮಾಡಿದ್ದಾರೆ. ಆದರೆ ಪಟ್ಟಣದಲ್ಲಿನ ಕೊರೊನಾ ಸೋಂಕಿತರಿಗಿಂತ ಗ್ರಾಮೀಣ ಪ್ರದೇಶದಲ್ಲಿಯೇ ಸದ್ಯಕ್ಕೆ ಹೆಚ್ಚಿನ ಪಾಸೀಟಿವ್ ರೋಗಿಗಳು ಕಂಡು ಬರುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶದ ಜನರು ಯಾವುದೇ ಕಾರಣಕ್ಕೂ ಪಟ್ಟಣಕ್ಕೆ ಬರಬಾರದು. ಈಗಾಗಲೇ ಜನರಿಗೆ ಬೇಕಾದ ದಿನನಿತ್ಯದ ದಿನಸಿ ಪದಾರ್ಥಗಳ ಖರಿದಿಗೆ ಸಮಯ ನಿಗಧಿ ಮಾಡಿದ್ದು ಪಟ್ಟಣದಿಂದ ಖರಿದಿ ಮಾಡಿಕೊಂಡ ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮಾಡುವ ಅಂಗಡಿಕಾರರಿಂದಲೇ ದಿನಸಿ ಪದಾರ್ಥಗಳನ್ನು ಖರಿದಿ ಮಾಡಿರಿ ಎಂದು ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮನವಿ ಮಾಡಿದರು.
ಇದೇ ವೇಳೆಯಲ್ಲಿ ಕುಂಟೋಜಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆಯರಿಗೆ ಸಿರೆ ಹಾಗೂ ಆಹಾರ ಕಿಟ್ ವಿತರಣೆ ಮಾಡಿದರು. ಕುಂಟೋಜಿ ಗ್ರಾಪಂ ಅಧ್ಯಕ್ಷ ಶಿವಬಸ್ಸು ಸಜ್ಜನ, ಡಿಸಿಸಿ ಬ್ಯಾಂಕ್ ನಿರ್ಧೇಶಕ ಸೋಮನಗೌಡ ಬಿರಾದಾರ, ತಹಸೀಲ್ದಾರ ವಿಜಯ ಕಡಕಭಾವಿ, ಸಿಪಿಐ ಆನಂದ ವಾಘ್ಮೋಡೆ, ತಾಪಂ ಇಓ ಹಿರೇಮಠ ಇದ್ದರು.

Be the first to comment

Leave a Reply

Your email address will not be published.


*