ಬಿಎಸ್‌ಎಫ್” ಕ್ಯಾಂಪಸ್‌ನಲ್ಲಿ ಕೊರೊನಾರ್ಭಟ…! ಯೋಧರಲ್ಲಿ ಹೆಚ್ಚಿದ ಸೋಂಕು ಆತಂಕ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕೊರೊನಾ ಎರಡನೇ ಅಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿರುವಾಗಲೇ ಮೇಘಾಲಯದಿಂದ ಬೆಂಗಳೂರಿಗೆ ಬಂದ 34 ಯೋಧರಿಗೆ ಸೋಂಕು ದೃಢಪಟ್ಟಿದ್ದು, ಈ ತಿಂಗಳ 11ರಂದು ಮೇಘಾಲಯದ ಶಿಲಾಂಗ್ಕ್ಯಾಂಪಿಯನ್ನಿಂದ ಬಂದಿದ್ದ ಯೋಧರು.ತರಬೇತಿಗಾಗಿ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಮತ್ತು ಯಲಹಂಕ ಕ್ಯಾಂಪಸ್‌ಗೆ 15 ದಿನಗಳಿಂದ ಬಂದಿದ್ದ ಯೋಧರು, ಮೊದಲಿಗೆ ಯಲಹಂಕದ ಎಸ್ಟಿಸಿ ಕ್ಯಾಂಪ್‌ನಲ್ಲಿದ್ದ 14 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರ ಬೆನ್ನಲೆ ಕಾರಹಳ್ಳಿ ಕ್ಯಾಂಪ್‌ಗೆ ಬಂದಿದ್ದ ಯೋಧರಿಗೆ ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ 20 ಜನರಿಗೆ ಸೋಂಕು ದೃಢಪಟ್ಟಿರುತ್ತದೆ. ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ದೇವನಹಳ್ಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 20 ಜನರಿಗೆ ಐಸೋಲೇಷನ್ ಮಾಡಿಸಲಾಗಿದ್ದು, 14 ಯೋಧರಿಗೆ ಯಲಹಂಕದಲ್ಲಿಯೇ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

CHETAN KENDULI

 

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಿಎಸ್‌ಎಫ್ ಕ್ಯಾಂಪಸ್‌ನಲ್ಲಿದ್ದ 740 ಜನ ಯೋಧರಿಗೆ ಕಒರೊನಾ ಆರ್‌ಟಿಸಿಪಿಆರ್ ಪರೀಕ್ಷಿ ಮಾಡಿಸಿದ್ದು, 750 ಜನ ಯೋಧರ ಪೈಕಿ 650 ಯೋದರ ವರದಿ ನೆಗೆಟೀವ್ ಬಂದಿರುತ್ತದೆ. 20 ಜನ ಸೋಂಕಿತ ಯೋಧರ ಪ್ರೈಮರಿ ಕಾಂಟ್ಯಾಕ್ಟ್‌ನಲ್ಲಿ 95 ಜನರಿಗೆ ಮುಂಜಾಗೃತ ಕ್ರಮವಾಗಿ ಕ್ವಾರೇಂಟೈನ್ ಮಾಡಿ, ಆರ್‌ಟಿಸಿಪಿಆರ್ ಟೆಸ್ಟ್ ಮಾಡಲಾಗಿದೆ. ಟೆಸ್ಟಿಂಗ್ ಮಾಡಿ 95 ಜನರ ರಿಪೋರ್ಟ್‌ಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಕಾದುಕುಳಿತಿದ್ದು, ರಿಪೋರ್ಟ್ ಬಂದ ಮೇಲೆ ವರದಿ ಸಿಗಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿರುತ್ತದೆ. ಇದೀಗ ಕ್ಯಾಂಪಸ್‌ನಲ್ಲಿ 1800 ಯೋಧರಿಗೆ ಕೊರೊನಾ ಭೀತಿ ಕಾಡತೊಡಗಿದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಹೆಚ್ಚಿನ ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ವೈದ್ಯರಿಗೆ ಸೂಚಿಸಿದ್ದು, ಸೋಂಕು ನಿಯಂತ್ರಣ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

 

 

Be the first to comment

Leave a Reply

Your email address will not be published.


*