ಸರ್ವ ಗ್ರಾಮವಿಕಾಸವೇ ಪ್ರಧಾನಿ ಮೋದಿಯವರ 1ಗುರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ದಾ…!!!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

ವಿಜಯನಗರ ಏಪ್ರಿಲ್ 17:

CHETAN KENDULI

ಪ್ರಧಾನಿ ಮೋದಿಯವರು ದೇಶದ ಯಾವುದೇ ಗ್ರಾಮವೂ ಯಾವುದೇ ಯೋಜನೆಗಳಿಂದ ವಮಚಿತಗೊಳ್ಳಬಾರದು ಎಂಬ ಉದ್ದೇಶದಿಂದ ವಿವಿಧ ಯೋಜನೆಗಳಲ್ಲಿ ಸಾಕಷ್ಟು ಪಾರದರ್ಶಕತೆಯನ್ನು ತಂದಿದ್ದಾರೆ. ಕರ್ನಾಟಕ ರಾಜ್ಯಕ್ಕೂ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರ ಮೂಲಕ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.



ವಿಜಯನಗರ ಜಿಲ್ಲೆಯಲ್ಲಿ ರವಿವಾರ ಪ್ರಾರಂಭವಾದ ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಈಗಾಗಲೇ ಕರ್ನಾಟಕ ರಾಜ್ಯದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಜಲಜೀವನ ಮೀಷನ್ ಯೋಜನೆ ಚಾಲನೆಯಲ್ಲಿದ್ದು ಈಗಾಗಳೇ ಶೆ.48ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಬರುವ ಚುನಾವಣೆ ಒಳಗೆ ಶೆ.100ರಷ್ಟು ಕಾಮಗಾರಿಯನ್ನು ಪೂರ್ಣವಾಗಲಿದೆ. ಅಲ್ಲದೇ ರಾಜ್ಯ ಹೆದ್ದಾರಿಗಾಗಿ ಈಗಾಗಲೇ 3500 ಕೋಟಿ ಮೀಸಲಿಟ್ಟಿದ್ದು ರಾಜ್ಯದಲ್ಲಿ ಬಹುತೇಕ ರಸ್ತೆಗಳ ಸುಧಾರಣೆ ಮುಕ್ಯಾಯ ಹಂತದಲ್ಲಿವೆ. ಇದಲ್ಲದೇ ರಾಜ್ಯ ರೈಲ್ವೆ ಇಲಾಖೆಗೆ 10 ಹೊಸ ಯೋಜನೆಗಳಿಗೆ ಮೋದಿಯವರು ಅಸ್ತು ಎಂದಿದ್ದಾರೆ ಎಂದು ಅವರು ಹೇಳಿದರು.



ಇದಕ್ಕೂ ಮುನ್ನೆ ವಿಜಯನಗರ ಜಿಲ್ಲೆಯ ಕಾರ್ಯಕ್ರಮಕ್ಕೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಡಾ.ಅಶ್ವತ್ ನಾರಾಯಣ, ಶಶಿಕಲಾ ಜೊಲ್ಲೆ, ಆನಂದ ಸಿಂಗ್, ಬಿ.ಶ್ರೀರಾಮುಲು, ಕೇಂದ್ರ ಸಚಿವಭಗವಂತ ಖೂಬಾ, ಸಂಸದರಾದ ತೇಜಸ್ವಿ ಸೂರ್ಯ, ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ ರೆಡ್ಡಿ, ಸತೀಶ, ರಾಜ್ಯ ಬಿಜೆಪಿ ಪ್ರ.ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಸೇರಿದಂತೆ ಇತರರಿದ್ದರು.

2023ಕ್ಕೆ ಮತ್ತೆ ಬಿಜೆಪಿ ದಿಗ್ವಿಜಯ:

ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾರ್ಯಗಳು ಹಾಗೂ ಯೋಜನೆಗಳು ಬಿಜೆಪಿ ಸರಕಾರ ಅಧಿಕಾರ ಸ್ವೀಕಾರದಿನದಿಂದ ನಡೆದಿವೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬರುವುದು ನಿಶ್ಚಿತವಾಗಿದೆ. ಬಿಜೆಪಿ ಕಾರ್ಯಕರ್ತರೂ ಯಾವುದೇ ವಿಷಯಕ್ಕೂ ಗಮನ ಹರಿಸುವ ಅಗತ್ಯವಿಲ್ಲ. ಸಬ್‌ಕಾ ಸಾಕ್ ಸಬ್‌ಕಾ ವಿಕಾಸ ದಾರಿಯಲ್ಲಿಯೇ ಮುನ್ನೆಡೆಯಿರಿ ಎಂದು ಬಿಜೆಪಿ ಪಕ್ಷದ ವರಿಷ್ಠರು ಸಭೆಗೆ ಆಗಮಿಸಿದ್ದ ಸರ್ವ ಬಿಜೆಪಿ ಕಾರ್ಯಕರ್ತರಿಗೂ ತಿಳಿಹೇಳಿದರು.

Be the first to comment

Leave a Reply

Your email address will not be published.


*