ಬೆಂಗಳೂರಿನಲ್ಲಿ ಅದ್ಧೂರಿ ಕರಗ ವೈಭವ..! ಕರಗವನ್ನು ಸ್ವಾಗತಿಸಿದ ದರ್ಗಾ ಧರ್ಮಗುರುಗಳು..! ಹಿಂದೂ -ಮುಸ್ಲಿಮರ ಭಾವೈಕ್ಯತೆ ಸಾರಿದ ಬೆಂಗಳೂರು ಕರಗ..!

ವರದಿ ಆಕಾಶ್ ಚಲವಾದಿ ಬೆಂಗಳೂರು ಹೆಡ್

ರಾಜ್ಯ ಸುದ್ದಿಗಳು 

ಬೆಂಗಳೂರು 

ಕೊರೋನಾ ಹಿನ್ನೆಲೆ 2 ವರ್ಷಗಳಿಂದ ಕರಗ ಕಳೆಗುಂದಿದ್ದು, ಈ ಬಾರಿ ಕರಗ ಶಕ್ತ್ಯೋತ್ಸವ ಅದ್ಧೂರಿಯಾಗಿ ನಡೆಯಿತು. ವೀರಕುಮಾರರು ಕೈಯ್ಯಲ್ಲಿ ಕತ್ತಿ ಹಿಡಿದು ಕರಗ ರಕ್ಷಣೆ ಮಾಡಿದರು. ಕರಗ ವೈಭವ ಕಂಡು ಭಕ್ತಿಯಲ್ಲಿ ಭಕ್ತಸಾಗರ ಮಿಂದೆದಿದೆ. ಬೆಂಗಳೂರು ಕರಗ ಹಿಂದೂ -ಮುಸ್ಲಿಮರ ಭಾವೈಕ್ಯತೆ ಸಾರಿದೆ. ಕರಗ ವೈಭವದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದರು.

ಇನ್ನು ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ಬರುತ್ತಿದ್ದಂತೆ ಧರ್ಮ ಗುರುಗಳು ಅದನ್ನು ಸ್ವಾಗತಿಸಿದ್ದಾರೆ. ಇದರ ಬಗ್ಗೆ ದರ್ಗಾ ಕಾರ್ಯದರ್ಶಿ ಮಹಮ್ಮದ್ ಇನಾಯತುಲ್ಲಾ ಪ್ರತಿಕ್ರಿಯಿಸಿ ಬೆಂಗಳೂರು ಕರಗ ಹಿಂದೂ -ಮುಸ್ಲಿಂರ ಭಾವೈಕ್ಯತೆ ಸಂಕೇತ. ಕರ್ನಾಟಕದಲ್ಲಿ ಹಿಂದೂ- ಮುಸ್ಲಿಮರು ಅಣ್ಣ ತಮ್ಮಂದಿರಂತೆ. ಯಾವುದೇ ತೋಂದರೆ ಇಲ್ಲದಂತೆ ಶಾಂತಿಯುತವಾಗಿ ಕರಗ ನಡೆದಿದೆ ಎಂದು ಹೇಳಿದ್ದಾರೆ.

Be the first to comment

Leave a Reply

Your email address will not be published.


*