ರಾಜ್ಯ ಸುದ್ದಿ
ದೇವನಹಳ್ಳಿ: ಈಗಾಗಲೇ ಸರಕಾರ ಶಾಲೆಗಳ ಪ್ರಾರಂಭೋತ್ಸವಕ್ಕೆ ಹಸಿರು ನಿಶಾನೆ ತೋರಿರುವ ಹಿನ್ನಲೆಯಲ್ಲಿ ೨೦೨೧-೨೨ನೇ ಸಾಲಿಗೆ ಶಾಲಾ ದಾಖಲಾತಿ ಆಂದೋಲನವನ್ನು ಸರಕಾರಿ ಶಾಲೆಯ ಶಿಕ್ಷಕರು ಪ್ರಾರಂಭಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಬಸವನಪುರ, ಜಾಲಿಗೆ ಗ್ರಾಮಗಳ ಪ್ರತಿ ಮನೆಗೆ ಶಾಲಾ ಶಿಕ್ಷಕರು ಭೇಟಿ ನೀಡಿ ಸರಕಾರಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳು ಮತ್ತು ಅನುಕೂಲಗಳ ಬಗ್ಗೆ ಮನವರಿಕೆ ಮಾಡುತ್ತಿದ್ದು, ಶಾಲೆಯಲ್ಲಿ ಸರಕಾರದಿಂದ ಹಲವಾರು ಯೋಜನೆಗಳು ಸಿಗಲಿದ್ದು, ಪೋಷಕರು ಮಕ್ಕಳನ್ನು ಸಕಾಲದಲ್ಲಿ ಶಾಲೆಗೆ ದಾಖಲು ಮಾಡುವಂತೆ ಪ್ರತಿ ಪೋಷಕರಿಗೆ ಮನವರಿಕೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಜಾಲಿಗೆ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿಯರಾದ ಮಂಜುಳಾಬಾವಿಕಟ್ಟೆ, ಗಿರಿಯಮ್ಮ, ದೈಹಿಕ ಶಿಕ್ಷಣ ಶಿಕ್ಷಕ ವೇಣುಗೋಪಾಲ.ಎಂ, ವಿದ್ಯಾರ್ಥಿಗಳು, ಊರಿನ ಮುಖಂಡರು ಇದ್ದರು.
Be the first to comment