ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
ಶಾಲಾ ಕಾಲೇಜುಗಳು ಆರಂಭದ ಹಿನ್ನೆಲೆ ಈ ದಿನ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದ ಗ್ರಾಮಾಂತರ ಪ್ರೌಢಶಾಲೆಗೆ ಆಗಮಿಸಿದ್ದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಮಾತನಾಡಿ, ಸುಮಾರು ಒಂದುವರೆ ವರ್ಷಗಳ ಕಾಲದಿಂದ ಕೊರೋನಾ ಮಹಮ್ಮಾರಿಯಿಂದ ಶಾಲೆಗಳು ಮುಚ್ಚಿದ್ದವು ಇಂದಿನಿಂದ ಎಂದಿನಂತೆ ಶಾಲಾ-ಕಾಲೇಜುಗಳು ತೆರೆದಿದ್ದು ಅಲ್ಲಿನ ವ್ಯವಸ್ಥೆಯ ಬಗ್ಗೆ ವಿಚಾರಣೆ ಮಾಡಲಾಗಿದೆ.
ಮಕ್ಕಳ ಶೈಕ್ಷಣಿಕ ಬೆಳವಣಿಗೆ ಬಹಳ ಮುಖ್ಯ ಅದರಿಂದ ಪ್ರಾರಂಭದಲ್ಲಿ ಉನ್ನತ ಶಿಕ್ಷಣ ಕಾಲೇಜುಗಳು ಅರಂಬಿಸಿ ಎರಡನೇ ಅತಂದಲ್ಲಿ 9 ರಿಂದ ಪಿ.ಯು.ಸಿ. ಶಾಲೆಗಳನ್ನು ಅರಂಬಿಸಿದ್ದು ಮುಂದಿನ ದಿನಗಳಲ್ಲಿ ಅಂತ ಅಂತವಾಗಿ ಶಾಲೆ ತೆರೆಯಲು ನಿರ್ದರಿಸಲಾಗುತ್ತದೆ ಮತ್ತು ಕೊವಿಡ್ ಮೂರನೇ ಅಲೆಯ ಬಗ್ಗೆ ಎಲ್ಲರೂ ಜಾಗೃತರಾಗಿ ಎಚ್ಚರ ವಹಿಸಿ ಸಾಮಾಜಿಕ ಅಂತರ ಮಾಸ್ಕ್ ಹಾಗು ಶಾಲೆಗಳಿಗೆ ಸ್ಯಾನಿಟೇಚರ್ ಸಿಂಪಡಣೆ ಮಾಡುವ ಕಾರ್ಯ ನಿರಂತರಾವಾಗಿ ನೆಡೆಯಬೇಕಿದೆ.
ಶಾಲೆಯಲ್ಲೂ ಕೊಟಡಿಗೆ 20 ಮಕ್ಕಳಂತೆ ಸಾಮಾಜಿ ಅಂತರದಲ್ಲಿ ಇರುವ ಹಾಗೆ ಶಿಕ್ಷಕರು ಹೇಚ್ಚಿನ ಜವಾದ್ದರಿ ವಹಿಸಬೇಕು ಶೇ% 2 ಕಿಂತ ಹೇಚ್ಚು ಪಾಸಿಟಿವ್ ಇರುವ ಕಡೆ ಶಾಲೆಗಳು ತೆರೆಯಲಿಕ್ಕೆ ಅನುಮತಿ ನೀಡಿಲ್ಲ ಹಾಗು ಗಡಿ ಜಿಲ್ಲೆಯ 5 ಜಿಲ್ಲೆಗಳಲ್ಲಿ ಶಾಲೆ ತೆರೆಯಲು ಅವಕಾಶ ನೀಡಿಲ್ಲ ಪೊಷಕರು ಸಹ ಮಕ್ಕಳನ್ನು ಏಚ್ಚರಿಕೆಯಿಂದ ಗಮನಿಸಿ ಕೊಳ್ಳಬೇಕು ಎಂದರು.
ಈ ಕಾರ್ಯ ಕ್ರಮದಲ್ಲಿ ಬೆಂ.ಗ್ರಾಂ ಜಿಲ್ಲಾ ಬಿ.ಜೆ.ಪಿ. ಅದ್ಯಕ್ಷರಾದ ಎ.ವಿ. ನಾರಾಯಣಸ್ವಾಮಿ. ಜಿಲ್ಲಾ ಕಾರ್ಯ ದಶಿ ೯ ನೀಲೇರಿ ಮಂಜುನಾಥ. ತಾಲ್ಲೂಕು ಕಾರ್ಯ ದರ್ಶಿ ರವಿಕುಮಾರ್ ವಿಜಯಪುರ ಟೌನ್ ಅದ್ಯಕ್ಷರಾದ ಅರ್.ಸಿ. ಮಂಜುನಾಥ. ದೇ.ಸೂ ನಾಗರಾಜು. ರವಿಕುಮಾರ್ ,ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಮತ್ತಿತರರು ಇದ್ದರು.
ಇದೇ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಚಾಕಲೇಟ್, ಹೂ ನೀಡಿ ಶುಭ ಹಾರೈಕೆ. ಧೈರ್ಯದಿಂದ ಶಾಲೆಗೆ ಬರುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಯಿತು.
ಗುರುಮೂರ್ತಿ ಬೂದಿಗೆರೆ
8861100990
Be the first to comment