ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ದುರ್ಗಮ್ಮ ಕಟ್ಟೆಯ ಹತ್ತಿರ ಹುಸೇನಪ್ಪ ಇವರ ನೇತೃತ್ವದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ಮೊದಲ ಮತ್ತು ಎರಡನೆಯ ಲಸಿಕೆಯನ್ನು ನಗರದ ಮನೆ ಮನೆಗೆ ತೆರಳಿ ಎಲ್ಲಾ ಸಾರ್ವಜನಿಕರಿಗೆಕೋವಿಡ್ -19 ಬಗ್ಗೆ ಜಾಗೃತಿಯನ್ನು ನೀಡಿದರು. ಲಸಿಕಾ ಅಭಿಯಾನದ ನಡುವೆ ಕೆಲವರು ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು.ಆ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಯವರು ಮತ್ತು ಶಿಕ್ಷಕರು ಅವರ ಆಡು ಭಾಷೆಯಲ್ಲಿ ತಿಳಿ ಹೇಳಿ ನಂತರ ಅವರುಗಳಿಗೆ ಲಸಿಕೆಯನ್ನು ಹಾಕುವ ಸಾಹಸ ಮಾಡಿದರು. ರಾಜ್ಯ ಸರಕಾರದ ಆದೇಶದಂತೆ ಕರ್ನಾಟಕದ ಎಲ್ಲರೂ ಲಸಿಕೆ ಹಾಕಿಸಿಕೊಂಡು ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ ಎಂಬ ಆದೇಶವನ್ನು ಪಾಲಿಸುವ ಮೂಲಕ ಪಟ್ಟಣದ ಜನತೆಗೆ ಲಸಿಕೆಯನ್ನು ಹಾಕಲಾಯಿತು.
ಇದೇ ಸಂದರ್ಭದಲ್ಲಿಹುಸೇನಪ್ಪ ಆರೋಗ್ಯ ನಿರೀಕ್ಷಣಾಧಿಕಾರಿಗಳು, ನಾಗನಗೌಡ ಪಾಟೀಲ್ ಶಿಕ್ಷಕರು ಗಾಂಧಿನಗರ ಶಾಲೆ, ಚೈತ್ರಾದೇವಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಇದ್ದರು.
Be the first to comment