ಏ.14 ರಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತ್ಯೋತ್ಸವವನ್ನ ಶಾಮತಿಯುತವಾಗಿ ಹಾಗೂ ಕೊರೊನಾ ನಿಯಮಾವಳಿಗಳ ಪ್ರಕಾರ ಆಚರಿಸಲು ಮುದ್ದೇಬಿಹಾಳ ತಾಲೂಕಿನ ದಲಿತ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಿರ್ಧರಿಸಿದ್ದಾರೆ.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಿಎಸ್‌ಎಸ್ ಮುಖಂಡ ಚನ್ನಪ್ಪ ವಿಜಯಕರ, ಸ್ಥಳೀಯ ನೇತಾಜಿ ಗಲ್ಲಿಯಿಂದ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಾಮಾಜಿಕ ಅಂತರದಿಂದ ಇಲ್ಲಿನ ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ಮೂಲಕ ಕರೆತಂದು ವೃತ್ತಕ್ಕೆ ಪೂಜೆ ಸಲ್ಲಿಸಿ ನಂತರ ತಾಲೂಕಾ ಆಡಳಿತದೊಂದಿಗೆ ಭಾಗವಹಿಸಲಾಗುವುದು ಎಂದು ಹೇಳಿದರು.
ಆಚರಣೆ ಸಮಯದಲ್ಲಿ ದಲಿತ ಮುಖಂಡರು ಕೊರೊನಾ ನಿಯಮಾವಳಿ ಪ್ರಕಾರ ಮಾಸ್ಕ ಧರಿಸಬೇಕು ಹಾಗೂ ಸಾನಿಟೈಜರ್ ಉಪಯೋಗಿಸಬೇಕು. ಇದರಿಂದ ಜಯಂತಿ ಆಚರಣೆಗೂ ಅನುಕೂಲವಾಗುತ್ತದೆ. ಈಗಾಗಲೇ ಕೊರೊನಾ ಹೆಮ್ಮಾರಿ ತನ್ನ ಎರಡನೇ ಅಲೇಯಿಂದ ಸಾವಿರಾರು ಜನರಿಗೆ ಸಂಕಷ್ಟಕ್ಕೆ ಒಳಪಡಿಸಿದ್ದು ಇದರ ಬಗ್ಗೆ ಜಯಂತಿ ಆಚರಣೆಯಲ್ಲಿ ಗಮನ ಹರಿಸಬೇಕು ಎಂದು ದಲಿತ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವಾಯ್.ಎಚ್.ವಿಜಯಕರ, ರೇವಣಪ್ಪ ಅಜಮನಿ, ಹೊಳಿಯಪ್ಪ ಗಂಜಿಹಾಳ,ವಾಯ್.ವಾಯ್.ಚಲವಾದಿ, ಪ್ರಶಾಂತ ಕಾಳೆ, ಪರಶುರಾಮ ಕೊಣ್ಣೂರ, ಶರಣು ಚಲವಾದಿ, ಪರಶುರಾಮ ನಾಲತವಾಡ, ಡಿ.ಬಿ.ಮುದೂರ, ಶಿವಪ್ಪ ಶಿವಪೂರ, ಬಾಪುಗೌಡ ಪಾಟೀಲ, ಪ್ರಕಾಶ ಚಲವಾದಿ, ಸೋಮನಾಥ ಚಲವಾದಿ, ದೇವರಾಜ ಹಂಗರಗಿ,ರುದ್ರೇಶ ಮುರಾಳ, ಅಶೋಕ ವನಹಳ್ಳಿ, ಮಹಾಂತೇಶ ಬಾಗಲಕೋಟ, ಮಾರುತಿ ಸಿದ್ದಾಪೂರ ಇದ್ದರು.
Be the first to comment