ಸೂಚನಾ ಫಲಕ ಅಳವಡಿಸದೆ ರಸ್ತೆ ಕಾಮಗಾರಿ…!!

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಕುಮಟಾ

ತಾಲೂಕಿನ ಮೂರೂರು ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುತ್ತಿರುವ ಕುರಿತು ಎಲ್ಲೂ ಸೂಚನಾ ಫಲಕ ಅಳವಡಿಸದೇ ಇರುವುದು, ಎಂದಿನಂತೆ ಸಂಚರಿಸುವ ವಾಹನ ಸವಾರರಿಗೆ ಅವಘಡ ಉಂಟಾಗುವ ಸಾಧ್ಯತೆ ಅಧಿಕವಾಗಿದೆ. ಇದರ ಬಗ್ಗೆ ಇಲಾಖೆಯವರು, ಗುತ್ತಿಗೆದಾರರು ಯಾವುದೇ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳದೇ ಇರುವುದು, ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿರುವುದು ಸವಾರರಿಗೆ ಅಪಘಾತ ಉಂಟಾಗುತ್ತದೆ ಎನ್ನುವ ಭಯದಲ್ಲಿ ಸಂಚರಿಸಬೇಕಾಗೆದೆ.

CHETAN KENDULI

ಹಲವು ತಿಂಗಳುಗಳ ನಂತರ ಕುಮಟಾ ಮೂರೂರು ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುತ್ತಿರುವ ಬಗ್ಗೆ ಎಲ್ಲೂ ಕೂಡ ಸೂಚನಾ ಫಲಕ ಅಳವಡಿಸದೇ ಇರುವುದು ವಾಹನ ಸವಾರರಿಗೆ ಎಲ್ಲಿ ಅಪಘಾತ ಸಂಭವಿಸುತ್ತೆ ಎನ್ನುವ ಭಯದಲ್ಲಿ ಸಾಗುವಂತಾಗಿದೆ. 

ರಸ್ತೆ ನಿರ್ಮಾಣದ ರೋಲರ್, ಜೆಸಿಬಿ ಮುಂತಾದ ರಸ್ತೆ ಕಾಮಗಾರಿ ಯಂತ್ರೋಪಕರಣಗಳನ್ನು ರಸ್ತೆ ಪಕ್ಕದಲ್ಲಿಯೇ ನಿಲ್ಲಿಸಿರುತ್ತಾರೆ. ರಾತ್ರಿಯ ಸಮಯದಲ್ಲಿ ವಾಹನ ಸವಾರರಿಗೆ ಇವು ಇಟ್ಟಿರುವುದು ಗೋಚರಿಸದೆ ಅಪಘಾತ ಸಂಭವಿಸಿದರೆ ಯಾರು ಹೊಣೆ?? ಎಂದು ಗುತ್ತಿಗೆದಾರರು ಉತ್ತರಿಸಬೇಕಾಗಿದೆ. ರಸ್ತೆ ಅಗಲೀಕರಣ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್, ಸೂಚನಾ ಫಲಕ ಅಳವಡಿಸಬೇಕೆಂಬ ನಿಯಮವಿದೆ. ಆದರೂ ಕೂಡ ಗುತ್ತಿಗೆದಾರರು ಇವೆಲ್ಲವನ್ನೂ ಗಾಳಿಗೆ ತೂರಿ ಕಾಮಗಾರಿ ಪ್ರಾರಂಭಿಸಿದ್ದಾರೆ. ಮೊದಲೇ ರಸ್ತೆಯ ಅಕ್ಕ ಪಕ್ಕದಲ್ಲಿ ಜೆಲ್ಲಿ ಕಲ್ಲು ಹಾಸಿ ಅಲ್ಲೇ ಜೆಸಿಬಿಗಳನ್ನು ಸಹ ನಿಲ್ಲಿಸಿದ್ದಾರೆ. ಸೂಚನಾ ಫಲಕ ಅಳವಡಿಸದೇ ರಸ್ತೆ ಕಾಮಗಾರಿ ನಡೆಯುತ್ತಿದ್ದುದು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಗುತ್ತಿಗೆದಾರರಿಗೆ ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಬೇಕಾಗಿದೆ. ಸೂಚನಾ ಫಲಕ, ಯಾವುದೇ ಮುನ್ನೆಚ್ಚರಿಕಾ ಕ್ರಮ ಅನುಸರಿಸದೆ, ಕಾಮಗಾರಿ ಕೈಗೊಂಡಿದ್ದಾರೆ. ಅರ್ಧಂಬರ್ಧ ಕಾಮಗಾರಿಗಳಿಂದ ಸಾಕಷ್ಟು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದರೂ ಸವಾರರ ಮಾತಿಗೆ ಬೆಲೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ನಡೆಯುತ್ತಿರುವ ಸಮಯದಲ್ಲಿ ಯಂತ್ರಗಳು ತಿರುಗುತ್ತಿರುತ್ತವೆ. ಇದರಿಂದ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಸಾಧ್ಯತೆ ಬಹಳಷ್ಟಿದೆ. ಒಟ್ಟಾರೇ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆಯವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸೂಚನಾ ಫಲಕ ಅಳವಡಿಸಿ, ವಾಹನಸವಾರರಿಗೆ ಸಂಭವಿಸಬಹುದಾದ ಅವಘಡವನ್ನು ತಪ್ಪಿಸಬೇಕಾಗಿದೆ.

Be the first to comment

Leave a Reply

Your email address will not be published.


*