ನವೆಂಬರ್ 7 ಕ್ಕೆ ನಾಮಧಾರಿ ಸಮಾಜ ಸೇವಾ ಸಂಘ ಕಡತೋಕಾ ಇವರ ಆಶ್ರಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ….

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಹೊನ್ನಾವರ

ನಾಮಧಾರಿ ಸಮಾಜ ಸೇವಾ ಸಂಘ ಕಡತೋಕಾ ಇವರ ಆಶ್ರಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ, ಪಟ್ಟಿ-ಪಾಟಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ತಾಲೂಕಿನ ಮಾಡಗೇರಿಯ ಶ್ರೀ ರಾಮನಾಥ ದೇವಾಲಯದ ಸಭಾಭವನದಲ್ಲಿ ನ.7 ರ ರವಿವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ನಾಮಧಾರಿ ಸಮಾಜ ಸೇವಾ ಸಂಘ ಕಡತೋಕಾ ಇದರ ಅಧ್ಯಕ್ಷರಾದ ಸುರೇಶ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕ ರಾಮನಾಥ ನಾಯ್ಕ ಉದ್ಘಾಟಿಸಲಿದ್ದು ಸಂಘದ ಅಧ್ಯಕ್ಷ ಸುರೇಶ ನಾಯ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಪ್ರಬಂಧಕ ಶಿವರಾಮ ನಾಯ್ಕ ಊರಕೇರಿ, ಎಸ್.ಕೆ.ನಾಯ್ಕ, ಎಚ್.ಆರ್.ನಾಯ್ಕ ಇತರರು ಪಾಲ್ಗೊಳ್ಳುವರು. 

CHETAN KENDULI

ಕಾರ್ಯಕ್ರಮದಲ್ಲಿ 1ನೇ ತರಗತಿಯಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ನಡೆಯಲಿದ್ದು, ಇದರ ಪ್ರಾಯೋಜಕತ್ವವನ್ನು ದಿ.ಹೊನ್ನಮ್ಮ ಮತ್ತು ದಿ.ಮಹಾಬಲೇಶ್ವರ ರಾಮ ನಾಯ್ಕ ಇವರ ಸ್ಮರಣಾರ್ಥ ದತ್ತಿನಿಧಿಯಿಂದ ಪೂರೈಸಲಾಗುವುದು.ಪ್ರತಿಭಾ ಪುರಸ್ಕಾರ:* 2019-20 ಮತ್ತು 2020-21ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಶೇ.90 ಕ್ಕಿಂತ ಅಧಿಕ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ನಾಮಧಾರಿ ಸಮಾಜ ಸೇವಾ ಸಂಘ ಕಡತೋಕಾ ಇದರ ಅಧ್ಯಕ್ಷರಾದ ಸುರೇಶ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*