ಭಟ್ಕಳದ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ದೀಪಾವಳಿ ಪ್ರಯುಕ್ತ ವೈಭವದ ಗೋಪೂಜೆ .

ವರದಿ - ಜೀವೋತ್ತಮ ಪೈ

ಜಿಲ್ಲಾ ಸುದ್ದಿಗಳು 

ಮುಜರಾಯಿ ಇಲಾಖೆಯ ಆಡಳಿತಕ್ಕೋಳಪಟ್ಟ ಭಟ್ಕಳದ ಪ್ರಸಿಧ್ಧ ದೇವಾಲಯಗಳಾದ ಶ್ರೀ ಚನ್ನಪಟ್ಟಣ ಹನೂಮಂತ ದೇವಸ್ಥಾನ ಹಾಗೂ ಕಡವಿನಕಟ್ಟೆಯ ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ಗೋಪೂಜೆ ಸಂಜೆ 5-30 ಕ್ಕೆ ನಡೆಯಿತು ಈ ಸಂಧರ್ಬದಲ್ಲಿ ಶ್ರೀ ಹನೂಮಂತದಲ್ಲಿ ದೇವಸ್ಥಾನಕ್ಕೆ ಸರಕಾರದ ಪರವಾಗಿ ಪ್ರಭಾರ ಕಂದಾಯ ನಿರೀಕ್ಷರು ಶ್ರೀ ಕೆ. ಶಂಬು ಹಾಗೂ ಪುರಸಭೆಯಆರೋಗ್ಯಾಧಿಕಾರಿ ಶ್ರೀಮತಿ ಸುಜೆಯಾ ಸೋಮನ್‌ ದೇವಸ್ಥಾನದ ಆದ್ಯಕ್ಷರಾದ ಶ್ರೀ ಶ್ರೀಧರ ಮೋಗೇರ, ಸದಸ್ಯರಾದ ಶ್ರೀ ಶಿವರಾಮ ನಾಯ್ಕ, ಶ್ರೀ ನಾಗೇಶ ಪೈ, ಸೇವಾವಾಹಿನಿಯ ಶ್ರೀ ನರೇಂದ್ರ ನಾಯಕ, ಜಿಲ್ಲಾ ಧಾರ್ಮಿಕ ದತ್ತಿ ಸದಸ್ಯರಾದ ಶ್ರೀ ಶಂಕರ ಶೆಟ್ಟಿ,

CHETAN KENDULI

ವಿಶ್ವಹಿಂದೂ ಪರಿಷತ್‌ನ ಶ್ರೀ ಸುರೇಶ ಆಚಾರ್ಯ, ಅರ್ಚಕರು ಸೇರಿದಂತೆ ಭಕ್ತಾದಿಗಳು ಉಪಸ್ಥಿರಿದ್ದರು. ಕಡವಿನಕಟ್ಟೆ ದೇವಸ್ಥಾನದಲ್ಲಿ ಗೋಪುಜೆ ಯ ಸಂಧರ್ಭದಲ್ಲಿ ಸರ್ಕಾರದ ಪರವಾಗಿ ಪಟ್ಟಣ ಪಂಚಾಯತ್‌ ಜಾಲಿಯ ಮುಖ್ಯಾಧಿಕಾರಿ ಶ್ರೀ ರಾಮಚಂದ್ರ ವರ್ಣೇಕರ್‌ ಹಾಗೂ ಶ್ರೀ ವಾಸು ಶೆಟ್ಟಿ ಗ್ರಾಮ ಸಹಾಯಕರು ಜಾಲಿ, ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ಎನ್‌ ಭಟ್‌ , ಮಂಜುನಾಥ ಹೆಗಡೆ ಸೇರಿದಂತೆ ಅರ್ಚಕರು ಭಕ್ತಾದಿಗಳು ಉಪಸ್ಥಿತರಿದ್ದರು. ಸರಕಾರದ ಆದೇಶದಂತೆ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ನೆರವೇರಿಸಲಾಯಿತು. ದೀಪಾವಳಿ ಹಬ್ಬವು ಸಕಲ ಜೀವರಾಶಿಗಳಿಗೆ ಸಕಲ ಸಿದ್ಧಿ ಕರುಣಿಸಲಿ, ಸುಖ-ಸಂತೋಷದಿಂದ ಬಾಳು ದೀಪ ಬೆಳಗುವಂತೆ ಬೆಳಕಾಗಲಿ ಎಂದು ಗೋಮಾತೆಯಲ್ಲಿ ಪ್ರಾರ್ಥಿಸಿದರು. ನಂತರ ಪ್ರಸಾದ ವಿತರಣೆ ನಡೆಯಿತು.

ಮೊ: 9482364853

Be the first to comment

Leave a Reply

Your email address will not be published.


*