ರಾಜ್ಯ ಸುದ್ದಿಗಳು
ಮುದ್ದೇಬಿಹಾಳ(ವಿಜಯಪುರ ಜಿಲ್ಲೆ):
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಮುಂಬೈನ ಭಾರತೀಯ ನೌಕಾದಳ (ಇಂಡಿಯನ್ ನೇವಿ) ಸೇವೆ ಸಲ್ಲಿಸುತ್ತಿದ್ದ ಬಸುರಾಜಗುರು ಅಶೋಕ ಹೂಗಾರ(25) ಶುಕ್ರವಾರ ಕರ್ತವ್ಯ ನಿಧಾನರಾಗಿದ್ದಾರೆ.
ನಾಲ್ಕುವರೆ ವರ್ಷದ ಹಿಂದೆ ವಿಶಾಖಪಟ್ಟಣಂ ನೌಕಾದಳದಲ್ಲಿ ಸೇವೆಗೆ ಸೇರ್ಪಡೆಯಾಗಿದ್ದ ಅವರು ಕಳೆದ ಆರು ತಿಂಗಳ ಹಿಂದಷ್ಟೆ ಮುಂಬೈಗೆ ವರ್ಗಾವಣೆಯಾಗಿದ್ದರು. ಹೈಜೆನಿಕ್ ಡಿಪಾರ್ಟ್ಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರುಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ಸೈನಿಕನಿಗೆ ಶ್ರದ್ಧಾಂಜಲಿ:
ವೀರಯೋಧನ ಶರೀರವು ಶನಿವಾರ ಜು.೧೯ ಮಧ್ಯಾಹ್ನ ೧೨-೩೦ಕ್ಕೆ ಮುದ್ದೇಬಿಹಾಳದ ಸೈನಿಕ ಮೈದಾನಕ್ಕೆ ಆಗಮಿಸಲಿದೆ. ಕಾರಣ ದೇಶಭಕ್ತ ಬಂಧುಗಳು ಆಗಮಿಸಿ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಬೇಕು. ಮತ್ತು ಅಂದೇ ಬೆಳಿಗ್ಗೆ ೯-೦೦ ಸೈನಿಕ ಮೈದಾನದಲ್ಲಿ ಮೃತರ ಗೌರವಾರ್ಥ ಅರ್ಧಮಟ್ಟಕ್ಕೆ ರಾಷ್ಟ್ರಧ್ವಜಾರೊಹಣ ಮಾಡಲಾಗುತ್ತದೆ ಎಂದು ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿ ಸಂಚಾಲಕ ಬಸವರಾಜ ನಂದಿಕೇಶ್ವರಮಠ ತಿಳಿಸಿದ್ದಾರೆ.
Be the first to comment